ಬಿಜೆಪಿ ಪಕ್ಷಕ್ಕೆ ದ್ರೋಹ ಬಗೆದ ಬಾವಿಮನಿ: ಸಂಗಪ್ಪ ಬಂಡಿ ಆರೋಪ
ಲೋಕದರ್ಶನ ವರದಿ
ಯಲಬುರ್ಗಾ 25: ಇಲ್ಲಿನ ಪ್ರವಾಸ ಮಂದಿರದಲ್ಲಿ ಬುಧವಾರ ನೆಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾನ್ಯ ಸಚಿವ ಹಾಲಪ್ಪ ಆಚಾರ ಅವರು ಆಗಿನ 2016ರ ಜಿಪಂ ಚುನಾವಣೆಯಲ್ಲಿ ಬಹಳ ಆಕಾಂಕ್ಷಿ ಇದ್ದರು ಸಹಿತ. ಮುಧೋಳ ಜಿಪಂ ಕ್ಷೇತ್ರಕ್ಕೆ ಪಂಚಮಶಾಲಿ ಸಮಾಜದ ಹಿರಿಯರಾದ ಅಡಿವೇಪ್ಪ ಬಾವಿಮನಿ ಯವರ ಧರ್ಮಪತ್ನಿಯವರಿಗೆ ಜಿಪಂ ಟೀಕೆಟ್ ನೀಡಿದರು. ಚುನಾವಣೆಯಲ್ಲಿ ಗೆದ್ದು ಬಂದು ಐದು ವರ್ಷವಾದರು ಮುಧೋಳ ಜಿಪಂ ಕ್ಷೇತ್ರದ ಜನರ ಕಷ್ಟಗಳಿಗೆ ಯಾವುದೇರೀತಿಯಲ್ಲಿ ಸ್ಪಂದನೆ ಮಾಡಿಲ್ಲ ಹಾಗೂ ಯಾವುದೇ ಅಭಿವೃದ್ಧಿಯಾಗಿಲ್ಲ. ಆಡಳಿತ ಮಾಡಿದವರು ಯಾವುದೇ ತರದಲ್ಲಿ ಜನರ ಜೋತೆ ಬೆರೆತ್ತಿಲ್ಲ. ಆದರೂ ಕೂಡ ಅವರನ್ನು ನಮ್ಮ ಬಿಜೆಪಿ ಪಕ್ಷದಿಂದ ಯಾವುದೇ ತರ ಅವರನ್ನು ಕಡೆಗಳಿಸಿಲ್ಲ ಆದರೂ ಕೂಡ ನಮ್ಮ ಪಕ್ಷಕ್ಕೆ ದ್ರೋಹ ಬಗೇದು ಕಾಂಗ್ರೇಸ್ ಪಕ್ಷಕ್ಕೆ ಹೋಗಿದ್ದಾರೆ ಎಂದು ಮಾಜಿ ತಾಪಂ ಅಧ್ಯಕ್ಷ ಸಂಗಪ್ಪ ಬಂಡಿ ಆರೋಪಿಸಿದರು.
ಬಾವಿಮನಿ ರಾಜಕೀಯ ವಿಚಾರದಲ್ಲಿ ಯಾವುದೇ ಪಕ್ಷಕ್ಕೆ ಆದರೂ ಕೂಡ ನಿಯತ್ತಾಗಿ ಕಾರ್ಯನಿರ್ವಹಿಸದೆ ಬಿಜೆಪಿ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ ಎಂದರು. ರಾಯರೆಡ್ಡಿ ಅವರು ಯಾರ ಬಗ್ಗೇನು ಹಗುರವಾಗಿ ಹಾಗೂ ವ್ಯಯಕ್ತಿಕವಾಗಿ ಯಾರ ಬಗ್ಗೆನು ಮಾತನಾಡುವುದನ್ನು ಮೊದಲು ಬಿಡಬೇಕು ಎಂದು ಆರೋಪಿಸಿದರು. ಆನಂದ ಉಳ್ಳಾಗಡ್ಡಿ ಅವರು ಜಿಪಂ ಚುನಾವಣೆ ಸಲುವಾಗಿ ಬಂಡಿಹಾಲ-ತೊಂಡಿಹಾಳ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದಾರೆ. ಅವರಿಗೆ ಇದುವರಿಗೂ ಜನರ ಕಷ್ಟಗೊತ್ತಾಗದೇ ಚುನಾವಣೆ ಮುನ್ನ ಸಾರ್ವಜನಿಕರ ಕಷ್ಟ ಅರ್ಥವಾಹಿತಾ ಎಂದು ಟೀಕಿಸಿದರು.
ಕ್ಷೇತ್ರದ ಶಾಸಕರು ಹಾಗೂ ಸಚಿವರಾದ ಹಾಲಪ್ಪ ಆಚಾರ ಅವರು ಈ ಕ್ಷೇತ್ರಕ್ಕಾಗಿ ನೀರಾವರೆ ಯೋಜನೆ, ಕೆರೆ ತುಂಬಿಸುವ ಯೋಜನೆ, ಸಿಸಿ ರಸ್ತೆ, ಶಾಲೆ ಕಟ್ಟಡಗಳನ್ನು ಹಾಗೂ ಇನ್ನಿತರ ಕಾಮಗಾರಿಗಳನ್ನು ಮಾಡಿದ್ದಾರೆ. ಈಗ ರಾಜ್ಯ-ಕೇಂದ್ರ ಸರ್ಕಾರದಲ್ಲಿ ನಮ್ಮದೇ ಸರ್ಕಾರ ಇರುವುದರಿಂದ ಇನ್ನು ಹೆಚ್ಚಾನು-ಹೆಚ್ಚು ಈ ಕ್ಷೇತ್ರಕ್ಕಾಗಿ ಕೇಲಸ ಮಾಡುತ್ತಾರೆ ಎಂದು ನಾನು ಬರವಸೆ ನೀಡುತ್ತೆನೆ ಎಂದರು.