ಲಂಚ ತೆಗೆದುಕೊಳ್ಳುವ ಕೆಟ್ಟ ಸಂಪ್ರದಾಯ: ಅಬ್ದುಲ್ ನಬಿ
ಸಿರುಗುಪ್ಪ 12: ಭ್ರಷ್ಟಾಚಾರ ಎಂಬುದು ಮನುಕುಲವನ್ನು ಕಾಡುತ್ತಿರುವ ಬಹುದೊಡ್ಡ ದುರಂತ ಕಳವಳದ ಸಂಗತಿ ಪ್ರಾರಂಭವಾಗುವುದೇ ಲಂಚದಿಂದ ವಿವಿಧ ಕ್ಷೇತ್ರಗಳಲ್ಲಿ ಈ ಲಂಚ ಕೊಡುವ ಅಥವಾ ಲಂಚ ತೆಗೆದುಕೊಳ್ಳುವ ಕೆಟ್ಟ ಸಂಪ್ರದಾಯ ಎಂದು ರಾಷ್ಟ್ರೀಯ ವಯಸ್ಕರ ಶಿಕ್ಷಣ ಸೆಂಟ್ರಲ್ ಕೌನ್ಸಿಲ್ ಸದಸ್ಯರು ಮತ್ತು ಸಾಮಾಜಿಕ ಕಾರ್ಯಕರ್ತ ಎ ಅಬ್ದುಲ್ ನಬಿ ಹೇಳಿದರು.
ನಗರದ ಇಬ್ರಾಹಿಮ್ ಮಂಜಿಲ್ನಲ್ಲಿ ಅಂತರ ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನವನ್ನು ನೆನಪಿಸಿ ಅವರು ಮಾತನಾಡಿ ಭ್ರಷ್ಟಾಚಾರ ಎಲ್ಲಾ ಸಮಾಜಗಳಲ್ಲಿಯೂ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಹಾಳು ಮಾಡುತ್ತಿರುವ ಗಂಭೀರ ಅಪರಾಧವಾಗಿದೆ ಪ್ರತಿವರ್ಷ ಡಿಸೆಂಬರ್ 9ರಂದು ಅಂತರ ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನವನ್ನು ಆಚರಿಸ ಲಾಗುತ್ತಿದೆ ಎಂದು ಅಬ್ದುಲ್ ನಬಿ ತಿಳಿಸಿದರು.
ಸಮಾಜದ ಮುಖಂಡ ಸರ್ ಖಾಜಿ ಸೈಯದ್ ಅಬ್ದುಲ್ ರಜಾಕ್ ಖಾದ್ರಿ ಅಶ್ರಫಿ, ಸೈಯದ್ ಮೊಹಿಯುದ್ದೀನ್ ಖಾದ್ರಿ, ಹಾಜಿ ಹಂಡಿ ಹುಸೇನ್ ಬಾಷಾ, ಹಂಡಿ ಹಾಶಿಮ್, ಎ.ಮೊಹಮ್ಮದ್ ಇಬ್ರಾಹಿಂ, ಮೊಹಮ್ಮದ್ ರಫಿ, ಮೊಹಮ್ಮದ್ ನೌಶಾದ್ ಅಲಿ, ಬಿ.ಕೆ.ಅಲ್ಲಾಭಕ್ಷಿ, ಖತೀಬ್ ಜಹೀರುದ್ದೀನ್ ಬಾಬು, ಖತೀಬ್ ಅಬುಲ್ ಹಸನ್, ಮೊಹಮ್ಮದ್ ಖಲೀಲ್, ಅವರು ಮಾತನಾಡಿ ಭ್ರಷ್ಟಾಚಾರ ಶೈಕ್ಷಣಿಕವಾಗಿ ಆರೋಗ್ಯ ಕ್ರೀಡೆ ರಾಜಕೀಯ ನ್ಯಾಯ ದೇಶದ ಅಭಿವೃದ್ಧಿ ಎಲ್ಲಾ ಕ್ಷೇತ್ರದಲ್ಲೂ ಆಳವಾಗಿ ಬೇರೂರಿದೆ ಇದರಿಂದ ಉಂಟಾಗುವ ಸಮಸ್ಯೆಗಳನ್ನು ಗಂಭೀರವಾಗಿವೆ ಪ್ರಜಾ ಪ್ರಭುತ್ವ ಸಾಮಾಜಿಕ ಭದ್ರತೆ ನೈತಿಕ ಮೌಲ್ಯ ನ್ಯಾಯ ಸಂಸ್ಥೆಯ ಮೌಲ್ಯಗಳನ್ನು ಭ್ರಷ್ಟಾಚಾರ ಎಂಬ ಪಿಡುಗು ದುರ್ಬಲ ಗೊಳಿಸುತ್ತಿದೆ ಜಗತ್ತಿನ ಅತ್ಯಂತ ಭ್ರಷ್ಟಾಚಾರ ಇದನ್ನು ಹೋಗಲಾಡಿಸಲು ಯುವ ಜನಾಂಗದವರು ವಿರೋಧಿಸಬೇಕು ಎಂಬ ಉದ್ದೇಶದಿಂದ ಸಾಮಾಜಿಕ ಪರಿಣಾಮಕಾರಿ ಸಂದೇಶಗಳನ್ನು ಹರಡಿಸುವದು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.