ಹುಕ್ಕೇರಿ

ಬಾಬೂರಾವ ಕಾಮೇರಿ ನಿಧನ

ಬಾಬೂರಾವ ಕಾಮೇರಿ ನಿಧನ

ಹುಕ್ಕೇರಿ ಸೆಪ್ಟೆಂಬರ್ 15: ತಾಲೂಕಿನ ನೇರ್ಲಿ ಗ್ರಾಮದ ಹಿರಿಯರೂ ನಿವೃತ್ತ ಮುಖ್ಯೋಪಾಧ್ಯಾಯರೂ ಆಗಿದ್ದ ಬಾಬೂರಾವ ಕಾಮೇರಿ( ೭೮) ಅವರು ಸೋಮವಾರ ದಿ.೧೪ರಂದು ನಿಧನರಾದರು

    ಜಿಲ್ಲಾ ಹಾಗೂ ತಾಲೂಕು ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿಗೆ ಪಾತ್ರರಾಗಿದ್ದ ಅವರು ಪ್ರಗತಿಪರ ರೈತರೂ ಆಗಿದ್ದು ನಿವೃತ್ತಿಯ ನಂತರ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.ಕಾವೇರಿ ಕನ್ನಡ ಮಾಧ್ಯಮ ವಸತಿ ಶಾಲೆ ಹಾಗೂ ಕಾವೇರಿ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿಯನ್ನು ಸಂಸ್ಥಾಪಿಸಿ ಇವುಗಳ ಅಭಿವೃದ್ಧಿಗಾಗಿ ಶ್ರಮಿಸಿದ್ದರು.ಸ್ಯಾತಂತ್ರ್ಯಯೋಧರ ಮನೆತನದವರಾದ ಬಾಬೂರಾವ ಕಾಮೇರಿ ಅವರು ಶಿಕ್ಷಕರಾಗಿದ್ದಾಗ ಮಕ್ಕಳಲ್ಲಿ ದೇಶಪ್ರೇಮ , ಅಭಿಮಾನ , ಸ್ವಾವಲಂಬಿತನ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರೂ ಆಗಿದ್ದ ಅವರು ನೇರ್ಲಿಯಲ್ಲಿ ಈ ವರ್ಷ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಆಸಕ್ತರಾಗಿದ್ದರು.

     ದಿ.ಕಾಮೇರಿ ಅವರಿಗೆ ಶಿಕ್ಷಕ ಆನಂದ ಕಾಮೇರಿ ಸೇರಿದಂತೆ ಇಬ್ಬರು ಪುತ್ರರು ,ಪತ್ನಿ ,ಇರುವರು.ಇವರ ನಿಧನಕ್ಕೆ ಕಸಾಪ ಹುಕ್ಕೇರಿ ತಾಲೂಕು ಅಧ್ಯಕ್ಷ ಪ್ರಕಾಶ ದೇಶಪಾಂಡೆ ಸಂತಾಪ ವ್ಯಕ್ತಪಡಿಸಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಸುದ್ದಿ ಓದಿ