ಮಹಲಿಂಗಪುರ

ಪಂಚ ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ :ಬಿಜೆಪಿ ಮುಖಂಡರಿಂದ ವಿಜಯೋತ್ಸವ

ಪಂಚ ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ :ಬಿಜೆಪಿ ಮುಖಂಡರಿಂದ ವಿಜಯೋತ್ಸವ

ಮಹಾಲಿಂಗಪುರ 03 : ಭಾನುವಾರ ನಡೆದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ 4ರಾಜ್ಯಗಳ ಪೈಕಿ 3ರಲ್ಲಿ ಅಭೂತಪೂರ್ವ ಜಯ ದೊರಕಿರುವ ಕಾರಣ ಪಕ್ಷದ ಪ್ರಮುಖರು ಪಟ್ಟಣದ ಗಾಂಧಿ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. 

ಮಧ್ಯಪ್ರದೇಶ, ಛತ್ತಿಸಗಢ, ರಾಜಸ್ಥಾನ ಈ ಮೂರು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದರೆ, ತೆಲಂಗಾಣ ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ ಗೆ ಜಯ ದೊರಕಿದೆ. ಸೋಮವಾರ ಮಿಜೋರಾಂ ರಾಜ್ಯದ ಫಲಿತಾಂಶ ಮಾತ್ರ ಹೊರ ಬರಬೇಕಾಗಿದ್ದು, ಎಂ ಎನ್ ಎಸ್ ಪಕ್ಷ ಸಮೀಕ್ಷೆಗಳ ಪ್ರಕಾರ ಜಯಭೇರಿಗಾಗಿ ಅಗ್ರ ಶ್ರೇಣಿಯಲ್ಲಿದೆ.  

 ಧುರೀಣರಾದ ಬಸನಗೌಡ ಪಾಟೀಲ್, ಈರ​‍್ಪ ದಿನ್ನಿಮನಿ, ಮಹಾಲಿಂಗಪ್ಪ ಕುಳ್ಳೋಳ್ಳಿ, ಶಿವಲಿಂಗ ಘಂಟಿ,ರವಿ ಜವಳಗಿ, ಭೀಮಶಿ ಗೌಂಡಿ, ಜಮೀರ ಯಕ್ಸಂಬಿ, ಪ್ರಕಾಶ ಅರಳಿಕಟ್ಟಿ, ಶಂಕರಗೌಡ ಪಾಟೀಲ, ವಿಷ್ಣುಗೌಡ ಪಾಟೀಲ್, ಬಸವರಾಜ ಚಮಕೇರಿ, ತಿಪ್ಪಣ್ಣ ಬಂಡಿವಡ್ಡರ, ಶಿವಬಸು ಗೌಂಡಿ, ಆನಂದ ಖೋತ, ಪ್ರಶಾಂತ್ ಮುಕ್ಕೆನ್ನವರ, ವಿಜಯ ಸಬಾಕಾಳೆ, ಪ್ರಭು ನಾವಿ,ಮಹೇಶ ಜಿಡ್ಡಿಮನಿ ನಂದೇಶ ಲಾತೂರ, ಶಿವಾನಂದ ಹುಣಶ್ಯಾಳ, ಬೈರೇಶ್ ಆದೆಪ್ಪನವರ, ಮಹೇಶ ಮುಕುಂದ, ಶ್ರೀನಿಧಿ ಕುಲಕರ್ಣಿ, ಚನ್ನಪ್ಪ ಆರೆಗಾರ, ಚೇತನ ಬಂಡಿವಡ್ಡರ ,ಅಭಿಷೇಕ ಸೊನ್ನದ,ಇನ್ನೂ ಹಲವಾರು ಕಾರ್ಯಕರ್ತರು ಭಾಗಹಿಸಿದ್ದಾರೆ. 


ಸುದ್ದಿ ಓದಿ