ರಾಜ್ಯಪಾಲರಿಗೆ ಅವಹೇಳನಕಾರಿ ಹೇಳಿಕೆ ಖಂಡಿಸಿ ಕಾಂಗ್ರೆಸ್ ವಿರುದ್ದ ಬಿಜೆಪಿ ಪ್ರತಿಭಟನೆ
ಬಳ್ಳಾರಿ 22: ನಗರದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು ನೇತೃತ್ವದಲ್ಲಿ ಇಂದು ನಗರದ ಗಡಗಿ ಚೆನ್ನಪ್ಪ ವೃತ್ತದಲ್ಲಿ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ನಾಯಕರ ವಿವಾದಾತ್ಮಕ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಿದರು. ಸರ್ಕಲ್ ನಲ್ಲಿ ಮಾನವ ಸರಪಳಿ ನಿರ್ಮಿಸಿ, ರಸ್ತೆ ಡೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಕೆಲಕಾಲ ಸರ್ಕಲ್ ನಲ್ಲಿ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರ ಪರದಾಡುವಂತಾಯ್ತು. ದಲಿತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ ಅವರ ವಿರುದ್ದ ಕಾಂಗ್ರೆಸ್ಸಿಗರು ಅವಹೇಳನ ಮಾಡಿದ್ದಾರೆ ಅದಕ್ಕೆ ಅಂತಹ ನಾಯಕರ ಮೇಲೆ ದೂರು ದಾಖಲಿಸಬೇಕು ಎಂದು ಎಂದು ಆಗ್ರಹಿಸಿದರು.
ಮೂಡಾ ಹಗರಣದಲ್ಲಿ ಭಾಗಿಯಾಗಿರೋ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವಂತೆ ಒತ್ತಾಯಿಸಿಯೂ ಪ್ರತಿಭಟನೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಿದರು. ಈ ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ಅಧ್ಯಕ್ಷ ಅನಿಲ್ ನಾಯ್ಡು, ಮಾಜಿ ಶಾಸಕ ಸೊಮಲಿಂಗಪ್ಪ. ಪಾಲಿಕೆ ಸದಸ್ಯರಾದ ಇಬ್ರಾಹಿಂ ಬಾಬು, ಹುಲುಗಪ್ಪ ಮಹಾರಂದಿ ಕೊಟ್ಟಂ, ಷಣ್ಮುಖ, ಹೊಸಯರುಗುಡಿ ಶಂಕ್ರ್ಪ, ಸುರೇಖಗೌಡ, ಶ್ರೀನಿವಾಸ್ ಮೊತ್ಕರ್, ಮುಖಂಡರಾದಡಾ.ಎಸ್.ಜೆ.ವಿ ಮಹಿಪಾಲ್, ಕೆ.ಎ.ರಾಮಲಿಂಗಪ್ಪ, ಎಸ್ ಮಲ್ಲನಗೌಡ, ಗಣಪಾಲ ಐನಾಥ ರೆಡ್ಡಿ, ಡಾ.ಅರುಣಾ ಕಾಮೇನೇನಿ ಮೊದಲಾದ ಬಿಜೆಪಿ ಕಾರ್ಯಕರ್ತರು ಇತರರು ಭಾಗವಹಿಸಿದ್ದರು.