ಬಳ್ಳಾರಿ

ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ : ದೊಡ್ಡನಗೌಡ್ ಪಾಟೇಲ್

ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ : ದೊಡ್ಡನಗೌಡ್ ಪಾಟೇಲ್

ಮರಿಯಮ್ಮನಹಳ್ಳಿ, 28 : ರಾಜ್ಯದಲ್ಲಿ ಯಾವಾಗ ಬೇಕಾದರೂ ಚುನಾವಣೆ ಬರಬಹುದು ಆ ಉದ್ದೇಶದಿಂದ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಎಂದು ವಿಧಾನಸಭೆಯ ವಿರೋಧ ಪಕ್ಷ ಮುಖ್ಯ ಸಚೇತಕರು ಹಾಗೂ ಕುಷ್ಠಗಿ ಶಾಸಕ ದೊಡ್ಡನಗೌಡ್ ಪಾಟೇಲ್ ತಿಳಿಸಿದರು.

ಅವರು ಪಟ್ಟಣದಲ್ಲಿ ಡಣಾಪುರ ಮತ್ತು ಮರಿಯಮ್ಮನಹಳ್ಳಿ ಮಹಾಶಕ್ತಿ ಕೇಂದ್ರಗಳ ಬಿಜೆಪಿ ಸದಸ್ಯತ್ವದ ಮಹಾಸಂಪರ್ಕ ಅಭಿಯಾನದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ರಾಜ್ಯದ ಮುಖ್ಯಮಂತ್ರಿ ಮುಡಾ ಮತ್ತು ವಾಲ್ಮೀಕಿ ಆಭಿವೃದ್ದಿ ನಿಗಮಲ್ಲಿ ಬ್ರಷ್ಠಾಚಾರ ನಡೆಸಿ ಪ್ರಾಷಿಕ್ಯೂಷನ್ ಅನುಮತಿ ದೊರೆತರೂ ರಾಜನಾಮೇ ನೀಡದೆ ಭಂಡತನ ದೂರುತ್ತಿದ್ದಾರೆ ಎಂದು ಆರೋಪಿಸಿದರು. 

ವಿಶ್ವದಲ್ಲಿ ಬಿಜೆಪಿ ಅತಿ ಹೆಚ್ಚು ಸದಸ್ಯತ್ವ ಪಕ್ಷವಾಗಿ ಹೊರಹೊಮ್ಮಿದೆ, ಇಂತಹ ಪಕ್ಷದ ಸದಸ್ಯತ್ವ ಪಡೆಯಲು ಕಾರ್ಯಕರ್ತರು ಸಕ್ರಿಯೆವಾಗಿ ಕಾರ್ಯನಿರ್ವಹಿಸಲು ಕರೆ ನೀಡಿದರು.ಸದಸ್ಯತ್ವದಿಂದ ಪಕ್ಷವು ಕಾರ್ಯಕರ್ತರನ್ನು ಗುರುತಿಸುತ್ತದೆ. ಈ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಕಾರ್ಯಕರ್ತರಿಗೆ ಪಕ್ಷವು ಉತ್ತಮ ಸ್ಥಾನಮಾನಗಳನ್ನು ಕಲ್ಪಿಸುತ್ತದೆ ಎಂದರು.ಪಕ್ಷದ ಪ್ರಭಾರಿಗಳಾದ ಚಂದ್ರಶೇಖರ್ ಪಾಟೇಲ್ ಹಲಗೇರಿ ಮಾತನಾಡಿ, ರಾಜ್ಯದಲ್ಲಿ 25 ಲಕ್ಷದ 65 ಸಾವಿರ ಜನರು ಬಿಜೆಪಿ ಸದಸ್ಯತ್ವ ಆಭಿಯಾನದಲ್ಲಿ ನೊಂದಾಯಿಸಿದ್ದಾರೆ. ಜಿಲ್ಲೆ ಹಾಗೂ ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಪಡೆಯಲು ಮಹಾಸಂಪರ್ಕ ಆಭಿಯಾನ ನಡೆಯಲಿದೆ ಎಂದರು.  

ಜಿಲ್ಲಾಧ್ಯಕ್ಷ ಚನ್ನಬಸವನಗೌಡ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಲ್ಲಾಹುಣಸೆ ರಾಮಣ್ಣ,ಮಾತನಾಡಿದರು.ಈ ಸಂಧರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಕೃಷ್ಣನಾಯ್ಕ್‌,ಮಂಡಲ ಅದ್ಯಕ್ಷ ಬೆಣಕಲ್ ಪ್ರಕಾಶ್,ಕಾರ್ಯದರ್ಶಿ ವಿರೇಶ್ವರಸ್ವಾಮಿ,ಕೊಪ್ಪಳ ಜಿಲ್ಲಾ ಕಾರ್ಯದರ್ಶಿ ದುರುಗಪ್ಪ,ಬಳ್ಳಾರಿ ಜಿಲ್ಲಾ ಕಾರ್ಯದರ್ಶಿ ಸಂಜೀವರೆಡ್ಡಿ,ಗುಂಡಾಕೃಷ್ಣ,ಅಂಬರೀಶ್, ಶ್ರವಣ್, ಜೋಗಿ ಹನುಮಂತ, ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗೂ ಇರರಿದ್ದರು. 


ಸುದ್ದಿ ಓದಿ