ಪಟ್ಟಣದಲ್ಲಿ ಭಾಜಪ ಸದಸ್ಯತ್ವ ಅಭಿಯಾನ
ಶಿಗ್ಗಾವಿ 07: ವಿಶ್ವ ಮೆಚ್ಚಿದ ನಾಯಕ ನರೇಂದ್ರ ಮೋದೀಜಿಯವರ ಜನಪರ ಕಾರ್ಯಕ್ರಮಗಳನ್ನು ತಿಳಿಸುವ ಮೂಲಕ ದೇಶಾದ್ಯಂತ ಸದಸ್ಯತ್ವ ಅಭಿಯಾನವನ್ನು ಮಾಡುತ್ತಿದ್ದು ಆ ನಿಟ್ಟಿನಲ್ಲಿ ಶಿಗ್ಗಾವಿ ಮಂಡಲ, ಮಹಿಳಾ ಮೋರ್ಚಾ, ಯುವ ಮೋರ್ಚಾವು ಪಟ್ಟಣದ ಅಂಚೆ ಕಚೇರಿಯಿಂದ ಬಿಜೆಪಿ ಸದಸ್ಯತ್ವ ಅಭಿಯಾನವನ್ನು ವಿಧಾನಪರಿಷತ್ ಸದಸ್ಯ ಎಸ್.ವ್ಹಿ.ಸಂಕನೂರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು.
ನಂತರ ಮಾತನಾಡಿದ ಅವರು ಜನರು ಸ್ವಯಂ ಪ್ರೇರಿತರಾಗಿ ದೇಶದ ಸಲುವಾಗಿ 8800002024 ಕ್ಕೆ ಮಿಸ್ಡ ಕಾಲ ಮಾಡುತ್ತಿದ್ದಾರೆ ಆದರೆ ಅವರಿಗೆ ನಮ್ಮ ಕಾರ್ಯಕರ್ತರು ಹೋಗಿ ಪ್ರೋತ್ಸಾಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ವಿಶ್ವನಾಥ ಹರವಿ, ಮಾಜಿ ಅಧ್ಯಕ್ಷ ಶಿವಾನಂದಮ್ಯಾಗೇರಿ,ಡಾ.ಶೋಭಾನಿಸ್ಸಿಮಗೌಡ್ರ, ಬಸನಗೌಡ ಮೇಲಿನಮನಿ, ಸುಭಾಸ ಚವ್ಹಾಣ, ಸಂಜನಾ ರಾಯ್ಕರ, ಲಕ್ಷ್ಮೀ ತೋಟದ, ಸೋಮಶೇಖರ ಗೌರಿಮಠ, ರೇಣಕನಗೌಡ ಪಾಟೀಲ, ಪ್ರತೀಕ ಕೊಳೆಕರ, ಹೊನ್ನಪ್ಪ ಹೂಗಾರ, ಪ್ರಶಾಂತ ಬಡ್ಡಿ, ಸಂತೋಷ ದೊಡ್ಡಮನಿ, ಮಂಜುನಾಥ ಮಿರ್ಜಿ, ನಿರ್ಮಲಾ ಯಡೆಪ್ಪನವರ, ಶಾರದಾ ನೀರಲಗಿ, ವಿಧ್ಯಾ ಮುಂಡಗೋಡ, ಅನ್ನಪೂರ್ಣ ಒಳಗೇರಿ, ದೇವಕ್ಕ ರಾಯಣ್ಣವರ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.