ಬಿಜೆಪಿ ಪಕ್ಷ ಭ್ರಷ್ಟಾಚಾರದ ಪಿತಾಮಹಾ ಆಗಿದೆ : ಮಾಜಿ ಶಾಸಕ ಖಾದ್ರಿ
ಶಿಗ್ಗಾವಿ,01: ಬಿಜೆಪಿ ಪಕ್ಷ ಭ್ರಷ್ಟಾಚಾರದ ಪಿತಾಮಹಾ ಆಗಿದ್ದು ರಾಜಕೀಯದಲ್ಲಿ ಒಂದೂ ಕಪ್ಪುಚುಕ್ಕಿ ಇಲ್ಲದ ಮುಖ್ಯಮಂತ್ರಿ ಸಿದ್ಧರಾಮಯ್ಯಾ ಅವರಮೇಲೆ ಸುಳ್ಳು ಆರೋಪ ಮಾಡುತ್ತಿದೆ ಎಂದು ಮಾಜಿ ಶಾಸಕ ಅಜ್ಜಂಪೀರ ಖಾದ್ರಿ ಹೇಳಿದರು.
ಪಟ್ಟಣದ ರಾಣಿ ಚೆನ್ನಮ್ಮಾ ವೃತ್ತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ ಪಕ್ಷದ ಶಾಸಕರು ಸಚಿವರ ಮೇಲಿನ ಮುಡಾ ಹಗರಣಕ್ಕೆ ಸಂಬಂಂಧಿಸಿದಂತೆ ಬಿಜೆಪಿ ಶಾಸಕರುಗಳಿಂದ ಮೈಸೂರ ನಿಂದ ಬೆಂಗಳೂರಿನವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆಯನ್ನ ವಿರೊಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಸುಳ್ಳು ಅರೋಪ ಹೊರಸಿದ್ದಾರೆ, ಪ್ರತಿಭಟನೆ ಮಾಡಲು ನೈತಿಕತೆ ಇಲ್ಲದ ಬಿಜೆಪಿಯವರು ಜನರಿಗೆ ತಪ್ಪು ಸಂದೇಶ ನೀಡುವ ಕೆಲಸಾ ಮಾಡುತ್ತಿದ್ದಾರೆ, 2023 ರಲ್ಲಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಅನ್ನು ಗೆಲ್ಲಿಸಿರುವ ರಾಜ್ಯದ ಜನರ ಮನಸ್ಸಿನಲ್ಲಿ ಸುಳ್ಳನ್ನು ತುಂಬಲು ಸಾದ್ಯವಿಲ್ಲಾ.
ಮುಖ್ಯಮಂತ್ರಿಯವರ ಧರ್ಮಪತ್ನಿಯವರ ಹೆಸರಲ್ಲಿ ಖರೀದಿಸಿರುವ ಪ್ಲಾಟುಗಳು ಕಾನೂನು ಬದ್ಧವಾಗಿ ಖರಿದಿಸಲಾಗಿದ್ದು ಬಿಜೆಪಿಯವರ ಸುಳ್ಳು ಆರೋಪವನ್ನು ಕಾಂಗ್ರೆಸ್ ಕಾರ್ಯಕರ್ತರು ನಂಬಬಾರದು ಎಂದು ಹೇಳಿದರು.
ಈ ಸಂದರ್ಬದಲ್ಲಿ ಮಾಜಿ ಜಿಪಂ ಸದಸ್ಯ ಪ್ರದೀಪಕುಮಾರ ಗಿರೆಡ್ಡಿ, ಜಿಪಂ ಮಾಜಿ ಸದಸ್ಯ ಶಿವರಾಜ ಅಮರಾಪುರ, ತಾಪಂ ಮಾಜಿ ಸದಸ್ಯ ಮಾಲಿಂಗಪ್ಪಾ ಕುಂಬಾರ, ಪುರಸಭೆ ಮಾಜಿ ಅಧ್ಯಕ್ಷ ಬಾಬಾಹುಸೇನ ಗೌಡಗೇರಿ, ಅಂಜುಮನ ಕಮೀಟಿ ಮಾಜಿ ಅಧ್ಯಕ್ಷ ಪಕ್ರುದ್ದೀನ ಸವಣೂರ, ಬೂ ನಾಯ್ಯಮಂಡಳಿ ಮಾಜಿ ಸದಸ್ಯ ರುದ್ರೇಶ ಗುಡಗೇರಿ, ಪುರಸಭೆ ಮಾಜಿ ಸದಸ್ಯ ಮಂಜುನಾಥ ತಿಮ್ಮಾಪುರ, ಶಂಬು ನೆರ್ತಿ, ಮಾರುತಿ ವಸಂತ ಲಮಾಣಿ, ಬಸವನಗೌಡಾ ಪಾಟೀಲ, ಶಂಕರಗೌಡಾ ಪಾಟೀಲ, ಪ್ರಭು ಬಿಳಗಿ, ಇರ್ಷಾದಹ್ಮದ ಪರೋಕಿ, ಆಶಿಪ್ ಅಣ್ಣಿಗೇರಿ, ಹುಸೇನಸಾಭ ಕಡೆಮನಿ, ಸೀಮಣ್ಣಾ ಲಮಾಣಿ ಇತರರಿದ್ದರು.