ಬಿಜೆಪಿ ಜನರಿಗೆ ಸುಳ್ಳು ಹೇಳುವದನ್ನು ಚನ್ನಾಗಿ ಕಲಿತಿದೆ : ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಲೋಕಸಭೆ ಮೇಲೆ ಪರಿಣಾಮ ಬಿರಲ್ಲ : ಸಚಿವ ರಾಮಲಿಂಗಾರೆಡ್ಡಿ

ಬಿಜೆಪಿ ಜನರಿಗೆ ಸುಳ್ಳು ಹೇಳುವದನ್ನು ಚನ್ನಾಗಿ ಕಲಿತಿದೆ : ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಲೋಕಸಭೆ ಮೇಲೆ ಪರಿಣಾಮ ಬಿರಲ್ಲ : ಸಚಿವ ರಾಮಲಿಂಗಾರೆಡ್ಡಿ

ಬೆಳಗಾವಿ 04: ಜನರಿಗೆ ಸುಳ್ಳು ಹೇಳುವುದನ್ನು ಬಿಜೆಪಿಯವರು ಚೆನ್ನಾಗಿ ಕಲಿತಿದ್ದಾರೆ. ಇದನ್ನೆ ಜನರು ಕೂಡ ನಂಬುತ್ತಾರೆ. ಆದರೆ ಪಂಚರಾಜ್ಯ ಚುನಾವಣಾ ಫಲಿತಾಂಶ ಲೋಕಸಭಾ ಚುನಾವಣೆ ಮೇಲೆ ಯಾವುದೇ ಪ್ರಭಾವ ಬೀರಲ್ಲ ಎಂದು ಸಚಿವ ರಾಮಲಿಂಗ ರೆಡ್ಡಿ ಹೇಳಿದ್ದಾರೆ.

ಸೋಮವಾರ ಬೆಳಿಗ್ಗೆ ಬೆಳಗಾವಿಯ ಸಾಂಬ್ರಾ ವಿಮಾನ‌ ನಿಲ್ದಾಣದಲ್ಲಿ ಪಂಚರಾಜ್ಯ ಚುನಾವಣೆಯಲ್ಲಿ ಹಿನ್ನಡೆ ವಿಚಾರವಾಗಿ ಮಾಧ್ಯಮದವರ ಜತೆ ಮಾತನಾಡಿದ ಅವರು, ಬಿಜೆಪಿಯವರ ಹತ್ತಿರ ಸಂಪನ್ಮೂಲಗಳ ಚೆನ್ನಾಗಿ ಇವೆ. ತೆಲಂಗಾಣದಲ್ಲಿ ಬಿಆರ್‌ಎಸ್ ನಮಗಿಂತ ಹೆಚ್ಚು ಭರವಸೆ ನೀಡಿದರು. ಗ್ಯಾರಂಟಿ ಕೊಡದೆ ಇದ್ರು ನಾವು ಗೆಲ್ಲುತ್ತಿದ್ದೇವು. ಕಾರಣ ಕೆಸಿಆರ್ ಜನರ ಮಧ್ಯೆ ಇರುತ್ತಿರಲಿಲ್ಲ ಎಂದರು. 

ಭವಾನಿ ರೇವಣ್ಣ ಬೈದಿರೋ ವೀಡಿಯೋ ವೈರಲ್ ವಿಚಾರವಾಗಿ ಮಾತನಾಡಿ, ನಾನು ಆ ವೀಡಿಯೋ ನೋಡಿಲ್ಲ ಎಂದಷ್ಟೇ ಹೇಳಿ ಸಚಿವ ರಾಮಲಿಂಗ ರೆಡ್ಡಿ ತೆರಳಿದರು.

ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಬಗ್ಗೆ ಚರ್ಚೆ ವಿಚಾರವಾಗಿ ಮಾತನಾಡಿ, ಉತ್ತರ ಕರ್ನಾಟಕದ ಜತೆಗೆ ರಾಜ್ಯದ ಎಲ್ಲಾ ವಿಚಾರವು ಚರ್ಚೆಗೆ ಬರುತ್ತೆ. ಹೆಚ್ಚು ಈ ಭಾಗದ ವಿಚಾರ ಚರ್ಚೆ ಇರುತ್ತೆ ಎಂದು ತಿಳಿಸಿದರು. 

ಸುದ್ದಿ ಓದಿ