ಮಹಲಿಂಗಪುರ

ಮುಸಲ್ಮಾನರನ್ನು ಸೇರಿ ಯಾವ ಜಾತಿ ಜನಾಂಗಕ್ಕೂ ಭಾಜಪ ಪಕ್ಷ ಕಿರುಕುಳ ನೀಡಿಲ್ಲ: ಶಾಂತಗೌಡ

ಮುಸಲ್ಮಾನರನ್ನು ಸೇರಿ ಯಾವ ಜಾತಿ ಜನಾಂಗಕ್ಕೂ ಭಾಜಪ ಪಕ್ಷ ಕಿರುಕುಳ ನೀಡಿಲ್ಲ: ಶಾಂತಗೌಡ

ಮಹಾಲಿಂಗಪುರ07:  ಇಲ್ಲಿಯವರೆವಿಗೂ ಮುಸಲ್ಮಾನರನ್ನು ಸೇರಿ ಯಾವ ಜಾತಿ ಜನಾಂಗಕ್ಕೂ ಭಾಜಪ ಪಕ್ಷ ಕಿರುಕುಳ ನೀಡಿಲ್ಲ ಎಂದು ಪಕ್ಷದ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಹೇಳಿದರು. 

ಸ್ಥಳೀಯ ಪುರಸಭಾ ಸದಸ್ಯತ್ವಕ್ಕೆ ನಡೆದ ಉಪಚುನಾವಣೆಯಲ್ಲಿ ಭಾಜಪ ಪಕ್ಷದ ಬೆಂಬಲಿತ ಅಭ್ಯರ್ಥಿ ಸಜನಸಾಬ ಪೆಂಡಾರಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರ ನಿವಾಸದ ಆವರಣದಲ್ಲಿ ಅವರನ್ನು ಜಿಲ್ಲಾ ಭಾಜಪ ಪಕ್ಷದ ವತಿಯಿಂದ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ಬಂದಾಗ ಮಾತ್ರ ಪಕ್ಷದ ತತ್ವ ಸಿದ್ಧಾಂತದಂತೆ ಭಾಜಪಾ ಪಕ್ಷ ನಡೆದುಕೊಂಡಿದೆ ಇದರಲ್ಲಿ ಎರಡು ಮಾತಿಲ್ಲ, ಭಾಜಪ ಪಕ್ಷ ಮುಸಲ್ಮಾನ ವಿರೋಧಿ ಎಂಬ ಸುಳ್ಳು ಬಣ್ಣವನ್ನು ಬಳಿದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಆ ಸಮುದಾಯವನ್ನು ಭಾಜಪ ಪಕ್ಷದಿಂದ ದೂರ ಉಳಿಯುವಂತೆ ಮಾಡಿದೆ, ಆದರೆ ವಾರ್ಡ್ ನಂಬರ್ 3ರ ಉಪಚುನಾವಣೆಯಲ್ಲಿ ಸ್ಥಳೀಯ ಮುಸಲ್ಮಾನ ಹಾಗೂ ಇನ್ನಿತರ ಮತದಾರರು ಕಾಂಗ್ರೆಸ್ಸಿಗರ ಬಣ್ಣವನ್ನು ಬಯಲು ಮಾಡಿ ಪ್ರಚಂಡ ಬಹುಮತದಿಂದ ಬಿಜೆಪಿ ಬೆಂಬಲಿತ ಸಜನಸಾಬ ಪೆಂಡಾರಿ ಅವರನ್ನು ಆಯ್ಕೆ ಮಾಡುವ ಮೂಲಕ ನಾವು ಬಿಜೆಪಿ ಪಕ್ಷದ ಜೊತೆ ಇದ್ದೇವೆ ಎನ್ನುವಂತಹ ಸಂದೇಶವನ್ನು ನೀಡಿದ್ದಾರೆ. ಇದು ಮುಂಬರುವ ಚುನಾವಣೆಗೂ ದಿಕ್ಸೂಚಿಯಾಗಿದೆ ಎನ್ನುತ್ತಾ ಬರುವ ದಿನಗಳಲ್ಲಿ ವಾರ್ಡಿನಲ್ಲಿ ಭಾಜಪ ಪಕ್ಷವನ್ನು ಬಲಪಡಿಸುವತ್ತ ನಾವೆಲ್ಲರೂ ಪ್ರಯತ್ನಿಸೋಣ ಎಂದರು.

ಸಜನಸಾಬ ಪೆಂಡಾರಿ, ಜಿಲ್ಲಾ ಪ್ರ.ಕಾರ್ಯದರ್ಶಿ ಮಲ್ಲಯ್ಯ ಮುಗನೂರಮಠ, ನೇಕಾರ ಮುಖಂಡ ಮನೋಹರ ಶಿರೋಳ, ಬೆಳಗಾವಿ ವಿಭಾಗ ಪ್ರಭಾರಿ ಬಸವರಾಜ ಯಂಕಾಂಚಿ, ಶ್ರೀಶೈಲಗೌಡ.ಪಾಟೀಲ, ರವಿ ಜವಳಗಿ, ಶೇಖರ ಮಗದುಮ, ಮುಸ್ತಾಖ ಚಿನಗುಂಡಿ, ಶಿವಾನಂದ ಹುನಿಶ್ಯಾಳ, ಅರ್ಜುನ ಮೋಪಗಾರ, ಆನಂದ ಬೆಣಗಿ ವಾರ್ಡಿನ ರಸೂಲ್ ಸಾಂಗ್ಲಿಕರ್, ಪೈಗಂಬರ್ ಪೆಂಡಾರಿ ಅಲ್ಲದೆ ನಗರದ ಭಾಜಪ ಕಾರ್ಯಕರ್ತರಾದ ಶಿವನಗೌಡ ಪಾಟೀಲ, ಮುತ್ತು ಕೊಪ್ಪದ, ಸುರೇಶ್ ಸಣ್ಣಕ್ಕಿ, ಪ್ರಸಾದ ಶಿಂಧೆ, ದತ್ತ ಯರಗಟ್ಟಿಕರ, ಸಂಗಮೇಶ ಅಂಬಲ್ಯಾಳ ಉಪಸ್ಥಿತರಿದ್ದರು.

ಉಪಾಧ್ಯಕ್ಷ ಜಿ ಎಸ್ ಗೊಂಬಿ, ಪುರಸಭಾ ಮಾಜಿ ಅಧ್ಯಕ್ಷ ಅರ್ಜುನಗೌಡ ಪಾಟೀಲ ಅವರ ಆರೋಗ್ಯ ವಿಚಾರಿಸಿ ನಂತರ ನಗರದ ಭಾರತೀಯ ಸಂಸ್ಕೃತಿ ಗಾಮೆರ್ಂಟ್ಸ್ ಗೂ ಭೇಟಿ ನೀಡಿದರು.

ಸುದ್ದಿ ಓದಿ