ಬಿಜೆಪಿ ಪಕ್ಷ ಸುಳ್ಳು ಬರವಸೆ ನೀಡಿ ಅಧಿಕಾರಕ್ಕೆ ಬಂದಿದೆ: ಜಿ ಎಸ್ ಪಾಟೀಲ್
ರೋಣ 11: ತಾಲೂಕಿನ ನಿಡಗುಂದಿ ಗ್ರಾಮದಲ್ಲಿ 75 ನೇ ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ಅಂಗವಾಗಿ ಕಾಂಗ್ರೆಸ್ ಪಕ್ಷದ ಪಾದಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಶಾಸಕ ಜಿ ಎಸ್ ಪಾಟೀಲ ಸ್ವಾತಂತ್ರ್ಯ ಸಿಗುವ ಪೂರ್ವದಲ್ಲಿ ಬ್ರಿಟಿಷರ ಆಡಳಿತದಲ್ಲಿ ಸಾಮಾನ್ಯ ಜನರು ಕಷ್ಟಕ್ಕೆ ಒಳಪಟ್ಟಿದ್ದರು ಅವರಿಗೆ ಮಹಾತ್ಮ ಗಾಂಧಿಯವರು ಹಾಗೂ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರು ಬ್ರಿಟಿಷರ ವಿರುದ್ಧ ಹೋರಾಡಿ ಎಲ್ಲರಿಗೂ ಬದುಕುವ ಹಕ್ಕನ್ನು ನೀಡಿದರು.
18 ವರ್ಷ ತುಂಬಿದವರಿಗೆ ಮತದಾನದ ಹಕ್ಕನ್ನು ನೀಡಿದವರು ರಾಜೀವ್ ಗಾಂಧಿ ಸರಕಾರ,ಬಿಜೆಪಿ ಪಕ್ಷದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಯುವಕರಿಗೆ ಪ್ರತಿವರ್ಷ ಕೋಟಿ ಉದ್ಯೋಗ ಕೊಡುತ್ತೇನೆ ಎಂದು ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದಾರೆ.ಅಂತವರನ್ನ ನಂಬಿ ಮೋಸ ಹೋಗಬೇಡಿ ಎಂದರು.ಸಿದ್ದರಾಮಯ್ಯನವರ ಆಡಳಿತವನ್ನು ನೋಡಿ ಮತ್ತೆ ಅವರನ್ನು ಮತ್ತು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಪ್ರಯತ್ನ ಮಾಡಬೇಕೆಂದು ಹೇಳಿದರು.ಈ ಸಂದರ್ಭದಲ್ಲಿ ವೇದಿಕೆ ಮೇಲೆ ಮಿಥುನ್ ಜಿ ಪಾಟೀಲ್,ಅಕ್ಷಯ್ ಪಾಟೀಲ್, ಆಯ್ ಎಸ್ ಪಾಟೀಲ್,ಬಸವರಾಜ್ ನವಲಗುಂದ,ಈರಯ್ಯ ಸೋಮಣ್ಣ ಕಟ್ಟಿ,ಸಂಜಯ್ ದೊಡ್ಡಮನಿ,ಅಂದಪ್ಪ ಬಿಚ್ಚು,ಶಶಿಧರ್ ಹೊಟ್ಟಿನ್ ಉಪಸ್ಥಿತರಿದ್ದರು. ಇದೇ ವೇಳೆ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ 90 ಪ್ರತಿಷತ ಕಿಂತಲೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನ ಸನ್ಮಾನಿಸಲಾಯಿತು.