ಕಾಂಗ್ರೆಸ್ ವಿರೋಧಿ ನಾಡಿನಲ್ಲಿ ಬಿಜೆಪಿ ಗೆಲುವಿನ ನಗೆ..
ವಿಯಜಪುರ, ನ, 2 : ಕಾಂಗ್ರೆಸ್-ವಿರೋಧಿ ನಾಡು ಸಿಂದಗಿಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಗೆಲುವು ಸಹಜ. ಮತ್ತು ನೀರೀಕ್ಷೆಯಂತೆ ಸಾಗಿದೆ. ಜಾತಿಯ ಲೆಕ್ಕಾಚಾರ ದಿಂದಲೂ ಇಲ್ಲಿ ಬಿಜೆಪಿ ಗೆಲುವಿಗೆ ಹೆಚ್ಚು ಅನುಕೂಲಕರವಾಗಿತ್ತು .
ಭಾರಿ ನೀರಿಕ್ಷೆ ಮೂಡಿಸಿದ್ದ ಜೆಡಿಎಸ್ ಸಿಂದಗಿಯಲ್ಲಿ ಠೇವಣಿ ಉಳಿಸಿಕೊಳ್ಳುವಲ್ಲಿಯೂ ವಿಫಲವಾಗಿದೆ. ತನ್ನ ಸ್ಥಾನ ಉಳಿಸಿಕೊಳ್ಲಲು ಆಗಲಿಲ್ಲ. ದೇಶದಲ್ಲಿ ಕಾಂಗ್ರೆಸ್ ಮುಳುಗುತ್ತಿರುವ ಹಡಗು ಭಾವನೆಮತದಾರರ ಮತದಾರರ ಮೇಲೆ ಪರಿಣಾಮ ಬೀರುತ್ತಿದೆ. ಎರಡನೆಯದಾಗಿ ಬಿಜೆಪಿ ರಾಜ್ಯ ಮತ್ತು ಕೇಂದ್ರದಲ್ಲೂ ಆಡಳಿತ ಮಾಡುತ್ತಿರುವುದು ಪಲಿತಾಂಶ ಬಿಜೆಪಿ ಕಡೆ ವಾಲಲು ಸ್ವಲ್ಪ ಮಟ್ಟಿಗೆ ಕಾರಣವಾಗಿದೆ. ಪಂಚಮಸಾಲಿ ಮತಗಳು ಕೈ ತಪ್ಪದಂತೆ ಸಚಿವರು ನಡೆಸಿದ ಯತ್ನ ಫಲಕೊಟ್ಟಿದೆ.. ಲಿಂಗಾಯತ ಮತ ಕಬಳಿಕಗೆ ಸಚಿವ ವಿ. ಸೋಮಣ್ಣ ಮತ್ತು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕೆಲಸ ಮಾಡಿದ್ದಾರೆ. ಜೊತೆಗೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಪ್ರಚಾರ ಮಾಡುವ ಮೂಲಕ ಲಿಂಗಾಯತ ಸಮುದಾಯದ ಮತಗಳು ಬೇರೆಕಡೆ ಹೋಗದಂತೆ ತಡೆಯುವಲ್ಲಿಯೂ ಸಫಲವಾಗಿದೆ.
ಕ್ಷೇತ್ರದ ಅಭಿವೃದ್ಧಿಗೆ ಆಡಳಿತಾರೂಢ ಪಕ್ಷ ಬೆಂಬಲಿಸುವುದೆ ಹೆಚ್ಚು ಸೂಕ್ತ ಎಂಬ ಮನಸ್ಥಿತಿಬಂದಿದ್ದು, ಜೆಡಿಎಸ್ ನಿಂದ ಪಕ್ಷಾಂತರಗೊಂಡ ಕೈ ಅಭ್ಯರ್ಥಿಯನ್ನು ಒಪ್ಪಿಕೊಳ್ಳಲು ಮತದಾರ ಹಿಂದೇಟು ಹಾಕಿದ್ದು ಬಹಳ ಸ್ಪಷ್ಟವಾಗಿದೆ.
ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರನ್ನು ಪೂರ್ಣ ವಿಶ್ವಾಸಕ್ಕೆ ತೆಗೆದುಕೊಂಡಿದ್ದು ಆಡಳಿತಾರೂಢ ಪಕ್ಷಕ್ಕೆ ಅನುಕುಲವಾಗಿದೆ.ಜೆಡಿಎಸ್ ನಿಂದ ಬಂದ ಅಶೋಕ್ ಗೆ ಟಿಕೆಟ್ ನೀಡಿದ್ದಕ್ಕೆ ಪಕ್ಷದೊಳಗೆ ಅಸಮಾಧಾನ ಭುಗಿಲೆದ್ದಿದ್ದು. ಸ್ಥಳೀಯ ತಾಲೂಕು ಅಧ್ಯಕ್ಷ ಶರಣಪ್ಪ ಸೇರಿದಂತೆ ಹಲವು ಮೂಲ ಕಾಂಗ್ರೆಸ್ಸಿಗರು ಒಲ್ಲದ ಮನಸ್ಸಿನಿಂದಲೇ ಪ್ರಚಾರದಲ್ಲಿ ತೊಡಗಿದ್ದರು.
ಬಿಜೆಪಿಯಿಂದ ಸತತ ಎರಡು ಬಾರಿ ಶಾಸಕರಾಗಿ ಆಯ್ಕೆಯಾದ ಕೀರ್ತಿ ರಮೇಶ ಭೂಸನೂರಿಗೆ ಇದೆ. ಜಿಲ್ಲಾ ಪಂಚಾಯತ್ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದ್ದ ರಮೇಶ ಭೂಸನೂರು ಹಲವಾರು ಏರಿಳಿತ ಕಂಡು ಸತತ ಎರಡು ಬಾರಿ ಅಂದರೆ 2008 ಹಾಗೂ 2013 ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು .ಇದೀಗ ಮೂರನೇ ಬಾರಿಗೂ ಬಿಜೆಪಿಯಿಂದಲೇ ಆಯ್ಕೆಯಾಗಿದ್ದಾರೆ.ಯತ್ನಾಳ್ ಮೂಲಕ ಬಿಜೆಪಿ ಪಂಚಮ ಸಾಲಿ ಮತಗಳನ್ನ ಚದುರಿಸಿದ್ದು ಬಿಜೆಪಿ ಗೆಲುವಿಗೆ ಅನೂಕೂಲವಾಗಿದೆ.
35 ಸಾವಿರ ಮುಸ್ಲಿಂ ಮತಗಳು ಇದ್ದರು ಅವುಗಳನ್ನು ಬುಟ್ಟಿಗೆ ಸೇರಿಸಿಕೊಳ್ಳುವಲ್ಲಿ ಜೆಡಿಎಸ್ ತಂತ್ರ ದೇವೇಗೌಡರ ಮತ್ತು ಎಚ್ . ಡಿ ಕುಮಾರಸ್ವಾಮಿ ತಂತ್ರಗಳು ವಿಫಲವಾಗಿದೆ. ಚುನಾವಣಾ ಸಂದರ್ಭದಲ್ಲಿ ಅಲ್ಪ ಸಂಖ್ಯಾತರನ್ನು ಒಲೈಕೆ ಮಾಡಿ, ರಾಜಕೀಯ ಭವಿಷ್ಯ ಕಟ್ಟುವ ಆಲೋಚನೆಯನ್ನು ಮತದಾರರು ಒಪ್ಪಿಕೊಳ್ಳುವುದಿಲ್ಲ ಎಂಬುದು ಇಂದರಿಂದ ಸಾಬೀತತಾಗಿದೆ.
ಇನ್ನು ಕೇವಲ ಒಂದೆರಡು ಉಪಚುನಾವಣೆಗಳ ಫಲಿತಾಂಶಗಳ ಮೂಲಕ ರಾಜಕೀಯ ದಿಕ್ಕು ಹೀಗೆ ಸಾಗುತ್ತದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಸಹಜವಾಗಿ ಉಪಚುನಾವಣೆಗಳು ವೈಯಕ್ತಿಕ ವರ್ಚಸ್ಸು, ಸ್ಥಳೀಯ ರಾಜಕಾರಣ ಹಣ, ಮತ್ತು ಜಾತಿ ಪ್ರಭಾವಳಿ ಆಧಾರದ ಮೇಲೆಯೇ ಹೆಚ್ಚು ಅವಲಂಬಿತವಾಗಿರುತ್ತದೆ.