ಹಗರಿಬೊಮ್ಮನಹಳ್ಳಿ

ಹಗರಿಬೊಮ್ಮನಹಳ್ಳಿಯಲ್ಲಿ 15ರಂದು ಬಿಜೆಪಿ ಸಂಕಲ್ಪ ಯಾತ್ರೆ

ಹಗರಿಬೊಮ್ಮನಹಳ್ಳಿಯಲ್ಲಿ 15ರಂದು ಬಿಜೆಪಿ ಸಂಕಲ್ಪ ಯಾತ್ರೆ

ಲೋಕದರ್ಶನ ವರದಿ 


ಹಗರಿಬೊಮ್ಮನಹಳ್ಳಿ.ಮಾ.14 : ನಗರದ ಸರಕಾರಿ ಗಂಗಾವತಿ ಭೀಮಪ್ಪನವರ ಕಾಲೇಜು ಮೈದಾನದಲ್ಲಿ ಮಾರ್ಚ್‌ 15ರಂದು ಭಾರತೀಯ ಜನತಾ ಪಕ್ಷದ ವಿಜಯ ಸಂಕಲ್ಪ ಯಾತ್ರೆ ಆಗಮಿಸಲಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ವೀರೇಶ್ವರ ಸ್ವಾಮಿ ಹೇಳಿದರು. 

ನಗರದ ಭಾಜಪ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ ಯಾತ್ರೆಗೆ ಕಾರ್ಯಕರ್ತರಿಂದ ಅಭೂತಪೂರ್ವ ಸ್ಪಂದನೆ ದೊರಕಿದೆ. ಈ ಸಂಕಲ್ಪಯಾತ್ರೆಯ ಬಹಿರಂಗ ಸಭೆಯಲ್ಲಿ ಸಭೆಯಲ್ಲಿ ಮಾಜಿ ಸಿಎಂ ಜಗದೀಶ್‌ಶೆಟ್ಟರ್, ಕೇಂದ್ರ ಮಂತ್ರಿಗಳಾದ ಪ್ರಹ್ಲಾದ ಜೋಷಿ, ಖೂಬಾ, ಸಚಿವರಾದ ಶಶಿಕಲಾ ಜೊಲ್ಲೆ, ಶ್ರೀರಾಮುಲು, ಆನಂದ್‌ಸಿಂಗ್ ಭಾಗವಹಿಸಲಿದ್ದಾರೆ. ಮಾಜಿ ಸಿಎಂ ಯಡಿಯೂರ​‍್ಪ, ಶೋಬಾ ಕರಂದ್ಲಾಜೆ, ವಿಜಯೇಂದ್ರ ಭಾಗವಹಿಸುವ ನೀರೀಕ್ಷೆ ಇದೆ ಎಂದರು.  

ಕ್ಷೇತ್ರದ ಚುನಾವಣೆ ಉಸ್ತುವರಿ ವಹಿಸಿಕೊಂಡಿರುವ ನಂಜನಗೌಡ್ರು ಮಾತನಾಡಿ, ಬಿಜೆಪಿ ಪಕ್ಷವು ನಾಲ್ಕು ದಿಕ್ಕುಗಳಿಂದ ಬೃಹತ್ ಯಾತ್ರೆ ನಡೆಯುತ್ತಿದೆ. ಮಾ.25ರಂದು ಎಲ್ಲಾ ತಂಡಗಳು ದಾವಣಗೆರೆಯಲ್ಲಿ ಸೇರುತ್ತಿದ್ದು, ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೋದಿಜಿಯವರ ಸಾಧನೆ ಹಾಗೂ ರಾಜ್ಯ ಸರಕಾರ ಸಾಧನೆಗಳನ್ನು ಮುಂದಿಟ್ಟುಕೊಂಡು ಚುನಾವಣೆ ಗೆಲ್ಲಲು ಸಂಕಲ್ಪ ಮಾಡಲಾಗಿದೆ ಎಂದು ತಿಳಿಸಿದರು.  

ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಮುಖಂಡರಾದ ಮಾಜಿ ಶಾಸಕ ಕೆ.ನೇಮರಾಜನಾಯ್ಕ, ಬಲ್ಲಾಹುಣಿಸಿ ರಾಮಣ್ಣ, ಲಕ್ಷ್ಮೀ ನಾರಾಯಣ, ಜಯಪ್ರಕಾಶ್, ಕೃಷ್ಣನಾಯ್ಕ, ಮಲ್ಲಿಕಾರ್ಜುನ ನಾಯ್ಕ, ಮುಖಂಡರಾದ ತಿಪ್ಪೇಸ್ವಾಮಿ, ಭದ್ರವಾಡಿ ಚಂದ್ರಶೇಖರ್, ನಾಗರಾಜ ಜನ್ನು, ಜೋಗಿ ಹನುಮಂತ, ಬ್ಯಾಟಿ ನಾಗರಾಜ, ದೀಪಕ್ ಸಾ ಕಠಾರೆ ಇತರರಿದ್ದರು. 


ಸುದ್ದಿ ಓದಿ