ಬಿಜೆಪಿ ಸದಸ್ಯತಾ ಅಭಿಯಾನ
ಮಹಾಲಿಂಗಪುರ,17 : ಸಂಸದ ಪಿ.ಸಿ.ಗದ್ದಿಗೌಡರ ಮತ್ತು ಶಾಸಕ ಸಿದ್ದು ಸವದಿಯವರು ಜಂಟಿಯಾಗಿ ಬಿಜೆಪಿ ಸದಸ್ಯತಾ ಅಭಿಯಾನದ ಅಂಗವಾಗಿ ಸೋಮವಾರ ಬೆಳಿಗ್ಗೆಯಿಂದಲೇ ಸ್ಥಳೀಯ ಬಡಾವಣೆಗಳ ಮನೆಮನೆಗೂ ತೆರಳಿ ಸದಸ್ಯತ್ವ ಮಾಡಿದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಸನಗೌಡ ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ, ಬಿಜೆಪಿ ಗ್ರಾಮೀಣ ಘಟಕದ ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ ಕುಳ್ಳೊಳ್ಳಿ, ಆನಂದ ಕಂಪು, ಮುಖಂಡ ಶಿವಾನಂದ ಅಂಗಡಿ, ಶಂಕರಗೌಡ ಪಾಟೀಲ, ಚನ್ನಪ್ಪ ಪಟ್ಟಣಶೆಟ್ಟಿ, ಚನ್ನಬಸು ಯರಗಟ್ಟಿ, ವಿಷ್ಣುಗೌಡ ಪಾಟೀಲ, ಮಹೇಶ ಮುಕುಂದ, ಮಹೇಶ ಜಿಡ್ಡಿಮನಿ, ಮಹೇಶ ಚಿಂಚಲಿ,ಮುತ್ತಪ್ಪ ದಲಾಲ, ಲಕ್ಷ್ಮಣ ಅಮ್ಮಣಗಿ, ಹನಮಂತ ಯರಗಟ್ಟಿ, ಸಂದೀಪ ಸೂರಗೊಂಡ ಇತರರಿದ್ದರು.