ಬಿಜೆಪಿ ಜನ ಸಂಕಲ್ಪ ಯಾತ್ರೆ ಕಾರ್ಯಕ್ರಮ
ಸಿರುಗುಪ್ಪ14: ಕಾಂಗ್ರೆಸ್ ನವರಿಗೆ ಜನಪರ ನಿರ್ಣಯ ಮಾಡುವುದು ಗೊತ್ತಿಲ್ಲ ಕೇವಲ ಅಧಿಕಾರದ ರಾಜಕಾರಣ ಮಾಡುವುದು ಗೊತ್ತು ಅಧಿಕಾರದಲ್ಲಿದ್ದಾಗ ಕಬ್ಬಿನಂತೆ ಇರುತ್ತೇವೆ ಅಧಿಕಾರ ಇಲ್ಲದಿದ್ದಾಗ ಹತ್ತಿಕಟ್ಟಿಗೆ ಆಗುತ್ತೇವೆ ಎಂದು ಕಾಂಗ್ರೆಸ್ಸಿನ ಮಂತ್ರಿಗಳೇ ಹೇಳುತ್ತಿದ್ದಾರೆ 2023ರಲ್ಲಿ ಕಾಂಗ್ರೆಸ್ ಶಾಶ್ವತ ಮನೆಗೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದರು.
ನಗರದ ತಾಲ್ಲೂಕು ಕ್ರೀಡಾ ಮೈದಾನದಲ್ಲಿ ಹಮ್ಮಿಕೊಂಡ ಬಿಜೆಪಿ ಜನ ಸಂಕಲ್ಪ ಯಾತ್ರೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಾ ಇಲ್ಲಿ ಮುಖ್ಯಮಂತ್ರಿ ಎಲ್ಲರೂ ಜನಪ್ರಿಯ ಶಾಸಕರಾದರೆ ಎಂ ಎಸ್ ಸೋಮಲಿಂಗಪ್ಪ ಜನೋಪಯೋಗಿ ಶಾಸಕರಾಗಿ ಸರ್ಕಾರ ದಿಂದ ಸಾವಿರಾರು ಕೋಟಿ ಅನುದಾನ ತಂದು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಪಡಿಸಿರುವ ಬಗ್ಗೆ ಪ್ರೋಗ್ರೇಸ್ ಎಂದರು ರಾಜಕೀಯ ಕಾರಣಗಳಿಂದ 1999ರಲ್ಲಿ ಸೋನಿಯಾಗಾಂಧಿ ಅವರು ಬಳ್ಳಾರಿ ಮತ್ತು ಉತ್ತರಪ್ರದೇಶದ ರಾಯಬರೇಲಿನಿಂದ ಲೋಕಸಭೆಗೆ ಸ್ಫರ್ಧೆಸಿದ್ದರು ಚುನಾವಣೆ ಪ್ರಚಾರದಲ್ಲಿ ಬಳ್ಳಾರಿ ನನ್ನ ತವರು ಎಂದು ಹೇಳಿಕೊಂಡಿದ್ದರು.
ಆದರೆ ಎರಡೂ ಕ್ಷೇತ್ರಗಳಲ್ಲಿ ಗೆಲವು ಸಾಧಿಸಿದ ಸೋನಿಯಾಗಾಂಧಿ ಬಳ್ಳಾರಿಗೆ ಕೈಕೊಟ್ಟರು ಈಗ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ನೆಪದಲ್ಲಿ ಮತ್ತೆ ಬಳ್ಳಾರಿ ಕಡೆ ಹೆಜ್ಜೆ ಹಾಕುತ್ತಿದ್ದಾರೆ ನಾಡಿಗೆ ಅವರ ಕೊಡುಗೆ ಏನು ಎಂದು ಕಾಂಗ್ರೆಸ್ ಪ್ರಶ್ನಿಸಬೇಕು ಎಂದು ಬೊಮ್ಮಾಯಿ ಕಾಂಗ್ರೆಸ್ ಗೆ ಟಾಂಗ್ ಹಾಕಿದರು. ಎಸ್ಸಿ ಎಸ್ಟಿಗೆ ಮೀಸಲಾತಿ ಹೆಚ್ಚಿಸಿದವರು ನಾವು ತಾವು ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ ಪಕ್ಕದ ಮನೆಯಲ್ಲಿ ಗಂಡು ಹುಟ್ಟಿದರೆ ಯಾರೋ ಊರಿಗೆಲ್ಲ ಪೇಡಾ ಹಚ್ಚಿದ್ದರಂತೆ ಹಾಗಾಯ್ತು ಕಾಂಗ್ರೆಸ್ ಕೆಲಸ ಎಂದು ಗೇಲಿ ಮಾಡಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ದಲ್ಲಿ ಕಾಂಗ್ರೆಸ್ ಪಾಲಿಗೆ ಕರ್ನಾಟಕ ಎಟಿಎಂ ಆಗಿತ್ತು ದೆಹೆಲಿ ನಾಯಕರ ಆಪೇಕ್ಷೆಯಂತೆ ದೇಶದ ಯಾವುದೇ ಮೂಲೆಯಲ್ಲಿ ಚುನಾವಣೆ ನಡೆದರೂ ಇಲ್ಲಿಂದ ಸೂಟ್ ಕೇಸ್ ಗಳನ್ನು ತುಂಬಿ ಕಳುಹಿಸಲಾಗುತ್ತಿತ್ತು ಇದರ ಪರಿಣಾಮವೇ ಇಂದು ಕೆಪಿಸಿಸಿ ಅಧ್ಯಕ್ಷ ಇಡಿ ಐಟಿ ವಿಚಾರಣೆ ಎದುರಿಸಿ ಎದುರಿಸುವಂತಾಗಿದೆ ಪರೋಕ್ಷವಾಗಿ ಡಿ ಕೆ ಶಿವಕುಮಾರ್ ಗೆ ಕಟುಕಿದರು ಕಾಂಗ್ರೆಸ್ ಸಕರ್ಾರ 85%ಸಕರ್ಾರ ಹಾಗಂತ ನಾನು ಹೇಳಿಲ್ಲ ರಾಹುಲ್ ಗಾಂಧಿ ಅವರ ತಂದೆ ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿ ನಾನು 100ರೂ ಹಳ್ಳಿಗೆ ಕಳಿಸಿದ್ರೆ 15ರೂಮಾತ್ರ ಹೋಗುತ್ತದೆ ಎಂದು ಹೇಳಿದ್ದರು ಅಂದರೆ 85ರೂ ಮಧ್ಯೆಯಲ್ಲೇ ಹೊಡೆಯಲಾಗುತ್ತಿತ್ತು ಈಗ ಹೇಳಿ ಕಾಂಗ್ರೆಸ್ ಎಷ್ಟು ಪರ್ಸೆಂಟ್ ಸರ್ಕಾರ ಎಂದು ಬೊಮ್ಮಾಯಿ ಪ್ರಶ್ನಿಸಿದರು ಕಾಂಗ್ರೆಸ್ ನವರ ಭೂ ಕಬಳಿಕೆ ಮೂಲಕ ಭೂಮಿಯಲ್ಲಿ 2ಜಿ ಹಗರಣದ ಮೂಲಕ ಆಕಾಶದಲ್ಲಿ ಕಲ್ಲಿದ್ದಲು ಹಗರಣದ ಮೂಲಕ ಪಾತಾಳದಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ ಅಂದು ಕೋವಿಡ್ ಇರಲಿಲ್ಲ ಪ್ರವಾಹ ಬಂದಿಲ್ಲ ಆದರೂ 1.24ಲಕ್ಷ ಸಾವಿರ ಕೋಟಿ ರೂ ಸಾಲ ಮಾಡಿದ್ದರು ಎಂದು ಅವರು ಹೇಳಿದರು.
ಶಾಸಕ ಎಂ ಎಸ್ ಸೋಮಲಿಂಗಪ್ಪ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಸಚಿವ ಬಿ ಶ್ರೀರಾಮುಲು, ಸಚಿವ ಗೋವಿಂದ ಕಾರಜೋಳ,ಜವಳಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ,ಲೋಕಸಭಾ ಸದಸ್ಯರಾದ ಕರಡಿ ಸಂಗಣ್ಣ,ವೈ ದೇವೇಂದ್ರಪ್ಪ, ವಿಧಾನಪರಿಷತ್ ಸದಸ್ಯರಾದ ವೈ ಎಂ ಸತೀಶ್, ಶಾಸಕರಾದ ಜಿ ಸೋಮಶೇಖರ ರೆಡ್ಡಿ, ಬಸವರಾಜ, ಧಡೇಸೂಗೂರು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ,ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿರೂಪಾಕ್ಷಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಮುರಹರಿಗೌಡ, ಮಾಜಿ ಲೋಕಸಭಾ ಸದಸ್ಯರಾದ ಜೆ ಶಾಂತಾ,ಸಣ್ಣ ಫಕೀರಪ್ಪ, ಬಿಜೆಪಿ ಯುವ ತಾಲ್ಲೂಕು ಅಧ್ಯಕ್ಷ ಎಂ ಎಸ್ ಸಿದ್ದಪ್ಪ,ಹಿಂದುಳಿದ ವರ್ಗಗಳ ಅಧ್ಯಕ್ಷ ಯಂಕೋಬ,ಮುಖಂಡ ಎಂ ಎಸ್ ಶಾರದಮ್ಮ, ಮಂಜುಳಾ,ಎಂಎಸ್ ವೆಂಕಟಪ್ಪನಾಯಕ, ಕೆ ಮಲ್ಲಿಕಾಜುನ , ವಿ ಹುಲುಗಪ್ಪ,ಎಂಎಸ್ ಅಂಬಣ್ಣ, ಈರಣ್ಣ, ಇಂದು ಶೇಖರ್ವಿರುಪಾಕ್ಷಪ್ಪ, ಸಿಂಗನಾಳ ಸಚ್ಚಿದಾನಂದ, ಮೊಹಮ್ಮದ್ ನೌಶಾದ್ ಅಲಿ ಮೊದಲಾದವರಿದ್ದರು