ಹರಪನಹಳ್ಳಿ

ಬಿ.ಬಿ.ಹೊಸೂರಪ್ಪಗೆ ಕಲ್ಯಾಣ ಕರ್ನಾಟಕ ರತ್ನ ರಾಜ್ಯ ಪ್ರಶಸ್ತಿ

ಬಿ.ಬಿ.ಹೊಸೂರಪ್ಪಗೆ ಕಲ್ಯಾಣ ಕರ್ನಾಟಕ ರತ್ನ ರಾಜ್ಯ ಪ್ರಶಸ್ತಿ

ಹರಪನಹಳ್ಳಿ 13: ಕೊಪ್ಪಳದ ಸಾಹಿತ್ಯ ಭವನದಲ್ಲಿ ಇತ್ತೀಚೆಗೆ ಕನ್ನಡ ಸಾಹಿತ್ಯ ಸಂಸ್ಕೃತಿ ಮತ್ತು ಅಭಿವೃದ್ಧಿ ಟ್ರಸ್ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಮತ್ತು ನಿಗಮ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಂಯುಕ್ತಾಶ್ರಯದಲ್ಲಿ  ನಡೆದ ಕಲ್ಯಾಣ ಕರ್ನಾಟಕ ಪ್ರವಾಸಿ ಉತ್ಸವ-2021ರಲ್ಲಿ ಕಲ್ಯಾಣ ಕರ್ನಾಟಕ ರತ್ನ ರಾಜ್ಯ ಪ್ರಶಸ್ತಿಯನ್ನು ತಾಲೂಕಿನ ಬಾಗಳಿ ಗ್ರಾಮದ ನಾಟಿ ಕೀಲು ಮೂಳೆ ವೈದ್ಯ ಪಂಡಿತ್   ಡಾ. ಬಿ.ಬಿ.ಹೊಸೂರಪ್ಪ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಚಲನಚಿತ್ರ ನಿರ್ದೇಶಕ ರಮೇಶ ಸುರ್ವೆ, ಬಿ.ಕೆ.ಭಾರದ್ವಜ್, ಉಷಾಸಿಂಗ್, ರಮಾನಂದ ಗುರೂಜಿ, ಸಾರ್ವಜನಿಕ ಗ್ರಂಥಾಲಯದ ನಿರ್ದೇಶಕ ಡಾ.ಸತೀಶಕುಮಾರ ಎಸ್ ಹೊಸಮನಿ, ಮಾಜಿ ಶಾಶಕ ನೆ.ಲ.ನರೇಂದ್ರಬಾಬು, ರಾಜೇಂದ್ರ ಎಸ್ ಗಡಾದ, ಸೇರಿದಂತೆ ಇತರರು ಇದ್ದರು.

ಸುದ್ದಿ ಓದಿ