ಬಿ.ಇಡಿ. ಪದವಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ
ಲೋಕದರ್ಶನ ವರದಿ
ಬಳ್ಳಾರಿ 24: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಮಾರ್ಚ್ನಲ್ಲಿ ಜರುಗಿಸಿದ ಬಿ.ಇಡಿ. ಪದವಿ ಪರೀಕ್ಷೆಯಲ್ಲಿ ರಾ್ಯಂಕ್ ವಿಜೇತರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ, ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ, ಹೊಸಪೇಟೆಯ ಷಾ ಭವರಲಾಲ್ ಬಾಬುಲಾಲ್ ನಾಹರ (ಬಿ.ಇಡಿ.) ಶಿಕ್ಷಣ ಮಹಾವಿದ್ಯಾಲಯವು 10ರಾ್ಯಂಕುಗಳಲ್ಲಿ 3ರಾ್ಯಂಕು ಗಳಿಸುವುದರ ಮೂಲಕ ಗಮನಾರ್ಹ ಸಾಧನೆ ಮಾಡಿದೆ.
ವಿದ್ಯಾರ್ಥಿನಿಯರಾದ ವಾಣಿ ಬಿ (ಒಂದನೇ ರಾ್ಯಂಕ್), ಗೀತಾ ಅಂಗಡಿ (ಮೂರನೇ ರಾ್ಯಂಕ್) ಮತ್ತು ಮಂಜುಳಾ ರಾಣಿ ಹೆಚ್. (ಒಂಬತ್ತನೇ ರಾ್ಯಂಕ್)ನ್ನು ಪಡೆದಿರುತ್ತಾರೆ. ರಾ್ಯಂಕ್ ವಿಜೇತ ವಿದ್ಯಾರ್ಥಿನಿಯರನ್ನು ವೀ.ವಿ.ಸಂಘದ ಅಧ್ಯಕ್ಷ ಗುರುಸಿದ್ಧಸ್ವಾಮಿ, ಉಪಾಧ್ಯಕ್ಷ ಅಲ್ಲಂ ಚನ್ನಪ್ಪ, ಕಾರ್ಯದರ್ಶಿಗಳು ಬಿ.ವಿ. ಬಸವರಾಜ, ಸಹಕಾರ್ಯದರ್ಶಿ ದರೂರ ಶಾಂತನಗೌಡ, ಕೋಶಾಧಿಕಾರಿ ಗೊನಾಳ ರಾಜಶೇಖರಗೌಡ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಕರಿಬಸವರಾಜ ಬಾದಾಮಿ ಹಾಗೂ ಪ್ರಾಂಶುಪಾಲ ಡಾ. ಎನ್ ವಿಶ್ವನಾಥಗೌಡ ಹಾಗೂ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.