ಕಂಪ್ಲಿ

ತಾಲೂಕು ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಅಯೋಧಿ ಹರೀಷ ಆಯ್ಕೆ

ತಾಲೂಕು ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಅಯೋಧಿ ಹರೀಷ  ಆಯ್ಕೆ

ಲೋಕದರ್ಶನ ವರದಿ 

      ಕಂಪ್ಲಿ 30:  ಪಟ್ಟಣದ ಮಾರುತಿ ನಗರ ನಾಯ್ಯಾಲಯದಲ್ಲಿ  ಕಂಪ್ಲಿ ತಾಲೂಕು ವಕೀಲರ ಸಂಘದ ಸಭೆ ಶನಿವಾರ  ನಡೆಯಿತು.   ಈ ಸಭೆಯಲ್ಲಿ ತಾಲೂಕು ವಕೀಲರ ಸಂಘದ ನೂತನ ಪಧಾದಿಕಾರಿಗಳನ್ನು ಆಯ್ಕೆ ಮಾಡಲಾಯಿತು. ತಾಲೂಕು ವಕೀಲ  ಸಂಘದ  ನೂತನ ಅಧ್ಯಕ್ಷರಾಗಿ  ಅಯೋಧಿ ಹರೀಷ,  ಉಪಾಧ್ಯಕ್ಷರಾಗಿ  ಕೆ.ಎಚ್‌.ಹುಲುಗಣ್ಣ,  ಪ್ರಧಾನ  ಕಾರ್ಯದರ್ಶಿಯಾಗಿ ಟಿ.ಶಿವಪ್ಪ,  ಜಂಟಿ ಕಾರ್ಯದರ್ಶಿಯಾಗಿ  ಎನ್‌.ಮಾರುತಿ,  ಖಾಜಾಂಚಿಯಾಗಿ  ವಿಜಯಲಕ್ಷೀ, ಕಾರ್ಯಕಾರಿ  ಸಮಿತಿ  ಸದಸ್ಯರಾಗಿ  ಜಿ.ಪ್ರಕಾಶ, ಜಿ.ಮಾರುತಿಸಿಂಗ್,  ಕೆ.ನಾಗರಾಜ,  ಕೆ.ಸಿ.ಶರಣಪ್ಪ, ತುಳಿಸಿ,  ಎಸ್‌.ನಟರಾಜ, ಮನೋಜಕುಮಾರ ದಾನಪ್ಪ, ಟಿ.ಜಗದೀಶ, ಕೆ.ಶಾಂತಕುಮಾರ ಸರ್ವಾನುಮತದಿಂದ ಆಯ್ಕೆಗೊಂಡರು. ನಂತರ ಹೂವಿನ ಹಾರದೊಂದಿಗೆ ನೂತನ ಪದಾಧಿಕಾರಿಗಳು, ಸದಸ್ಯರನ್ನು ಗೌರವಿಸಲಾಯಿತು.  


ಸುದ್ದಿ ಓದಿ