ಮಹಲಿಂಗಪುರ

ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳು ಹೆಚ್ಚೆಚ್ಚು ಆಗಬೇಕಿದೆ: ಪಾಟೀಲ

ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳು ಹೆಚ್ಚೆಚ್ಚು ಆಗಬೇಕಿದೆ: ಪಾಟೀಲ
ಮಹಾಲಿಂಗಪುರದ ನೀಲಕಂಠೇಶ್ವರ ಮಠದಲ್ಲಿ ಹೊಂಗಿರಣ ಮಹಿಳಾ ಸಂಸ್ಥೆ ವತಿಯಿಂದ ಸೋಮವಾರ ಹಮ್ಮಿಕೊಂಡ ಮಹಿಳಾ ದಿನಾಚರಣೆ ಕಾರ್ಯಕ್

ಮಹಾಲಿಂಗಪುರ: ಮಹಿಳೆಯರ ಸುರಕ್ಷತೆ ಹಾಗೂ ರಕ್ಷಣೆಗಾಗಿ ಹಲವಾರು ಕಾನೂನುಗಳಿದ್ದು, ಇವುಗಳ ಸದುಪಯೋಗ ಪಡೆದುಕೊಳ್ಳುವ ಕುರಿತಂತೆ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳು ಹೆಚ್ಚೆಚ್ಚು ಆಗಬೇಕಿದೆ ಎಂದು ಸ್ಥಳೀಯ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ರೇಣುಕಾ ಪಾಟೀಲ ಹೇಳಿದರು. 

ಪಟ್ಟಣದ ನೀಲಕಂಠೇಶ್ವರ ಮಠದಲ್ಲಿ ಹೊಂಗಿರಣ ಸಂಸ್ಥೆಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಹಿಳಾ ಕುಲದ ರಕ್ಷಣೆಗಾಗಿ ಅವಳ ಹುಟ್ಟು ಸಾವಿನ ತನಕವೂ ದೇಶದ ಸಂವಿಧಾನದಲ್ಲಿ ಆಧಾರ ಸ್ತಂಭವಾಗಿ ಅನೇಕ ಕಾನೂನುಗಳಿವೆ ಅವುಗಳನ್ನು ಸಾಂಧರ್ಭಿಕವಾಗಿ ಬಳಸಿಕೊಳ್ಳುವುದು ಮಾತ್ರ ಮಹಿಳೆಯರ ಜಾನ್ಮೆಯಾಗಿದೆ ಎಂದರು 

ವಿಜ್ಞಾನ ಶಿಕ್ಷಕಿ ಸ್ವಪ್ನಾ ಅನಿಗೋಳ ಮಾತನಾಡಿ ಇಂದು ತಂದೆ ತಾಯಿಗಳ ಮೇಲಿನ ವಾತ್ಸಲ್ಯ ಕಡಿಮೆಯಾಗಿ, ವೃದ್ಧಾಶ್ರಮಗಳ ಸಂಖ್ಯೆಗಳು ಹೆಚ್ಚುತ್ತಿವೆ ಹಾಗೂ ಪರಸ್ಪರ ಸೌಹಾರ್ದ ಭಾವನೆಗಳು ಕುಂಠಿತಗೊಳ್ಳುತ್ತಿವೆ, ಆದ್ದರಿಂದ ಮಕ್ಕಳಲ್ಲಿ ಸಂಸ್ಕೃತಿ, ಸಂಸ್ಕಾರ ಬೆಳೆಸಿ ಅವರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಹಿಳೆಯರಾದಿಯಾಗಿ ಕುಟುಂಬ ಸದಸ್ಯರು ಮಾಡಬೇಕಾಗಿದೆ ಎಂದರು. 

ಪುರಸಭೆ ಅಧ್ಯಕ್ಷೆ ಸ್ನೇಹಲ್ ಅಂಗಡಿ ಮಾತನಾಡಿ, ಮಹಿಳಾ ಸಂಸ್ಥೆಗಳು ನಗರದ ಸ್ವಚ್ಛತೆಗೆ ಹಾಗೂ ಹಸೀರೀಕರಣ ಕಾರ್ಯಗಳಿಗೆ ಪುರಸಭೆಯೊಂದಿಗೆ ಕೈಜೋಡಿಸಿದರೆ ಪಟ್ಟಣ ಅಭಿವೃದ್ಧಿ ಹೊಂದಲು ಸಾಧ್ಯ.ಮಹಿಳೆಯರು ಒಗ್ಗಟ್ಟಾದರೆ ಏನಾದರೂ ದೇಶ ಮೆಚ್ಚುವ ಸಾಧನೆ ಮಾಡಬಹುದು ಎಂದರು. 

ಆರೋಗ್ಯ ಸಲಹೆಗಾರ ಶ್ರೀಶೈಲ ಕೆರೂರ, ಡಾ.ಲಲಿತಾ ಹೊಂಗಲ್ ಮಾತನಾಡಿದರು. ಶಕುಂತಲಾ ತೇರದಾಳ ‘ಹೆಣ್ಣು’ ಕವನ ವಾಚಿಸಿದರು. ಸಂಸ್ಥೆಯ ಅಧ್ಯಕ್ಷೆ ಮಂಜುಳಾ ಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಶೋಭಾ ಟಿರಕಿ, ಶ್ರೀದೇವಿ ಅಡವಿ ಅವರು ಉಚಿತ ಆರೋಗ್ಯ ತಪಾಸಣೆ ನಡೆಸಿದರು.  

ವೇದಾ ಮತ್ತು ಕಾವ್ಯಾ ಪ್ರಾರ್ಥಿಸಿ, ಸವಿತಾ ಸಿಂಪಿ, ರಾಜಶ್ರೀ ಶಿರೋಳ ಸ್ವಾಗತ ಗೀತೆ ಹಾಡಿ, ಪೂಜಾ ಒಂಟಗೋಡಿ ಸ್ವಾಗತಿಸಿದರು. ಸುಲಭಾ ಗೋಟುರೆ ವಂದಿಸಿ, ವಂದನಾ ಶಿರೋಳ ನಿರೂಪಿಸಿದರು. 


ಸುದ್ದಿ ಓದಿ