ವಿಶ್ವ ಏಡ್ಸ ದಿನಾಚರಣೆ ನಿಮಿತ್ಯ ಅರಿವು ಕಾರ್ಯಕ್ರಮ
ಲೋಕದರ್ಶನ ವರದಿ
ಶಿಗ್ಗಾವಿ 03: ಹೆಚ್ಐವ್ಹಿ ಏಡ್ಸ ಬಗ್ಗೆ ಸಾರ್ವಜನಿಕರಲ್ಲಿ ಇರುವ ತಪ್ಪು ಕಲ್ಪನೆ ಹಾಗೂ ಮೂಡನಂಬಿಕೆಗಳನ್ನು ಹೊಡೆದೊಡಿಸಿದಾಗ ಏಡ್ಸ್ ರೋಗದ ಸಂಪೂರ್ಣ ನಿಯಂತ್ರಣವನ್ನು ಮಾಡಬಹುದು ಎಂದು ದಿವಾಣಿ ನ್ಯಾಯದೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಮತ್ತು ತಾಲೂಕು ಕಾನುನು ಸೇವಾ ಸಮಿತಿಯ ನಸರತ್ ಮುಕ್ತಾರ ಆಹ್ಮದಖಾನ ಹೇಳಿದರು.
ಪಟ್ಟಣದ ರಂಭಾಪುರಿ ಮಹಾವಿದ್ಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಅಭಿಯೋಜನಾ ಇಲಾಖೆ, ಆರೋಗ್ಯ ಇಲಾಖೆ, ರಂಭಾಪುರಿ ಪಿ.ಯು.ಕಾಲೇಜ ಹಾಗೂ ಎನ್.ಎಸ್.ಎಸ್ ಘಟಕ, ಸ್ಪಂದನಾ ಸಂಸ್ಥೆ, ಸಂಜೀವಿನಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ವಿಶ್ವ ಏಡ್ಸ ದಿನಾಚರಣೆ ಪ್ರಯುಕ್ತ ಅರಿವು ಕಾರ್ಯಕ್ರಮದಲ್ಲಿ ಸಸಿಗೆ ನೀರುಣಿಸಿ ಮಾತನಾಡಿದ ಅವರು ಹೆಚ್.ಐ.ವ್ಹಿ ಏಡ್ಸ ಬಗ್ಗೆ ಭಯ ಬೇಡ ದೇಶದ ಎಲ್ಲ ಪ್ರಜೆಗಳನ್ನು ಕಳಂಕ ತಾರತಮ್ಯದಿಂದ ಕಾಣದೇ ಪ್ರೀತಿ ವಿಶ್ವಾಸದಿಂದ ಕಂಡು ಅವರಿಗೂ ಸಹಿತ ಬದುಕಿ ಹಾಗೂ ಬದುಕಲು ಬಿಡಿ ಎಂದು ಸಂದೇಶ ನೀಡಿದರು.
ತಾಲೂಕ ಆರೋಗ್ಯಾಧಿಕಾರಿ ಡಾ. ಸತೀಶ. ಆರ್. ಮಾತನಾಡಿ ಯಾವುದೇ ರೋಗಗಳಾಗಲಿ ರೋಗಿಗಳಿಗೆ ತಾರತಮ್ಯ ಮಾಡದೇ ಆರೈಕೆ ಬೆಂಬಲದ ಜೊತೆಗೆ ಉತ್ತಮ ಚಿಕಿತ್ಸೆ ನೀಡಿದಾಗ ಅವರು ಆಯುಷ್ಯ ವೃದ್ದಿಸುತ್ತದೆ ಅಲ್ಲದೇ ಆ ರೋಗದ ಬಗ್ಗೆ ಇರುವ ಭಯವನ್ನು ಹೋಗಲಾಡಿಸುತ್ತದೆ ಎಂದರು.
ಆಪ್ತಸಮಾಲೋಚಕಿ ರೇಣುಕಾ ಹೊಸಮನಿ ಮಾತನಾಡಿ ಹೆಚ್.ಐ.ವ್ಹಿ ಏಡ್ಸ ಬಗ್ಗೆ ಇನ್ನೂ ಸಾರ್ವಜನಿಕರಲ್ಲಿ ಭಯದ ವಾತಾವರಣವಿದೆ ಧನಾತ್ಮಕವಾಗಿ ವಿಚಾರ ಮಾಡದೇ ನಕಾರಾತ್ಮಕವಾಗಿ ವಿಚಾರ ಮಾಡುತ್ತಾ ಹೋದರೆ ಮುಂದಿನ ದಿನಗಳು ಕಷ್ಟದಾಯಕವಾಗಿರುತ್ತವೆ ಅದಕ್ಕೆ ನಾವೇ ನೇರ ಹೊಣೆಗಾರರಾಗಿರುತ್ತೇವೆ ಆದ್ದರಿಂದ ಏಡ್ಸ ರೋಗಿಗಳಿಗೆ ಆಪ್ತಸಮಾಲೋಚನೆ ಅವಶ್ಯವಾಗಿದೆ ಎಂದರು. ಎಂದು ಮಾರ್ಮಿಕವಾಗಿ ಹೇಳಿದರು.
ಪ್ರಾಂಶುಪಾಲ ಎಫ್.ಎಸ್.ಶಿವಣ್ಣವರ ಅಧ್ಯಕ್ಷತೆವಹಿಸಿ ಮಾತನಾಡಿ 14 ರಿಂದ 18 ವರ್ಷದ ಮಕ್ಕಳು ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಿದ್ದು ಆ ನಿಟ್ಟಿನಲ್ಲಿ ಅಂತಹ ತಂದೆ ತಾಯಿಯವರೆಗೆ ಮಕ್ಕಳ ವರ್ತನೆಗಳ ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಲು ತಿಳಿಸುವುದು ನಮ್ಮ ಜವ್ದಾಬಾರಿ ಆಗಿದೆ ಎಂದರು.
ಈ ಸಂದರ್ಭದಲ್ಲಿ ನ್ಯಾಯವಾದಿ ಎಂ.ಐ.ಗೋಣೆಪ್ಪನವರ, ಬಿ.ಪಿ.ಗುಂಡಣ್ಣವರ, ಡಾ.ಸುರೇಶ ಪೂಜಾರ, ಡಾ.ಪ್ರವೀಣ, ಪ್ರೋ ಎಂ.ಎಸ್.ಸಿದ್ದಪ್ಪನವರ, ಎಸ್.ವ್ಹಿ.ಬಳಿಗಾರ, ಶೋಭಾ ನಾಯಕ್, ಶಮ್ಸ ತಬರೀಜ್, ಸ್ಪಂದನಾ ಸಂಸ್ಥೆಯ ಈರಣ್ಣಾ, ಶಾಂತಾ ಮತ್ತೂರ, ಸಂಜೀವಿನಿ ಸಂಸ್ಥೆಯ ಹನುಮಂತ, ಎನ್.ಎಸ್.ಎಸ್ ವಿಧ್ಯಾರ್ಥಿನಿಯರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಎನ್.ಎಸ್.ಎಸ್ ಯೋಜನಾಧಿಕಾರಿ ಪ್ರೊ. ಎಸ್.ಆರ್.ಪೂಜಾರ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು, ಪ್ರೊ. ಎನ್.ಎಸ್.ಸಂಗಣ್ಣವರ ವಂದಿಸಿದರು.