ಬಳ್ಳಾರಿ

ಕಾನೂನು ಬಾಹಿರ ಚಟುವಟಿಕೆಗಳ ನಿಷೇಧ ಜಾಗೃತಿ ಅರಿವು

ಕಾನೂನು ಬಾಹಿರ ಚಟುವಟಿಕೆಗಳ ನಿಷೇಧ ಜಾಗೃತಿ ಅರಿವು

ಬಳ್ಳಾರಿ 07: ಬ್ರೂಸ್‌ಪೇಟೆ ಪೊಲೀಸ್ ಠಾಣೆಯ ನೂತನ ಸರ್ಕಲ್ ಇನ್ಸ್‌ಪೆಕ್ಟರ್ ಆಗಿ ಅಧಿಕಾರ ವಹಿಸಿಕೊಂಡ ಜಿ.ಆರ್‌.ಷಣ್ಮುಖಪ್ಪ ಅವರನ್ನು ಬಳ್ಳಾರಿ ಜಿಲ್ಲಾ ಆಟೋ ಚಾಲಕರ ಮತ್ತು ಮಾಲೀಕರ ಸಂಘದವರು ಕಣೇಕಲ್ ಬಸ್‌ಸ್ಟ್ಯಾಂಡ್‌ನ ಆಟೋ ನಿಲ್ದಾಣದಲ್ಲಿ ಆಟೋ ಚಾಲಕರಿಗೆ ಸಂಚಾರಿ ನಿಯಮಗಳನ್ನು ಪಾಲಿಸಲು ಹಾಗೂ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಷೇಧಿಸುವ ಕುರಿತು ಜಾಗೃತಿ ಅರಿವು ಕಾರ್ಯಕ್ರಮವನ್ನು ನಡೆಸಲಾಯಿತು.  

ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಐ ಜಿ.ಆರ್‌.ಷಣ್ಮುಖಪ್ಪ ಅವರು, ಆಟೋ ಚಾಲಕರು ಕಡ್ಡಾಯವಾಗಿ ತಮ್ಮ ಆಟೋಗಳಿಗೆ ಬಿಟಿಪಿ ಸಂಖ್ಯೆಯನ್ನು ಹೊಂದಿರತಕ್ಕದ್ದು, ಇದರಿಂದ ಆಟೋ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದರು. ಆಟೋ ಚಾಲಕರು ಪ್ರಯಾಣಿಕರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರಬೇಕೆಂದು ತಿಳಿಸಿದರು.  

ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಜಿಲ್ಲಾಧ್ಯಕ್ಷರಾದ ಕೆ.ತಾಯಪ್ಪನವರು ಮಾತನಾಡುತ್ತಾ, ಸಿಪಿಐ ಅವರನ್ನು ಚಾಲಕರಿಗೆ ಪರಿಚಯಿಸಿ ಈ ಭಾಗದ ಕುಂದುಕೊರತೆಗಳನ್ನು ತಿಳಿಸಿದರು. ಸದಾ ಜನದಟ್ಟಣೆ ಇರುವುದರಿಂದ ಈ ಭಾಗಕ್ಕೆ ಸಂಚಾರಿ ಠಾಣೆಯ ಅಥವಾ ತಮ್ಮ ಠಾಣೆಯ ಓರ್ವ ಕಾನ್ಸ್‌ಟೇಬಲ್‌ನ್ನು ನಿಯಮಿಸಬೇಕೆಂದು, ಇದರಿಂದ ನಿಯಮಾವಳಿಗಳನ್ನು ಚಾಲಕರು ಕಡ್ಡಾಯವಾಗಿ ಪಾಲಿಸಬೇಕೆಂದು ಸೂಚಿಸಿದರು. ಇದಕ್ಕೆ ಉತ್ತರಿಸಿದ ಸಿಪಿಐ, ಚಾಲಕರು ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು ನಡೆದಲ್ಲಿ ತಮ್ಮ ಗಮನಕ್ಕೆ ತರಬೇಕೆಂದು ಸೂಚಿಸಿದರು. ಈ ಸಂದರ್ಭದಲ್ಲಿ ಸಂಚಾರಿ ಠಾಣೆಯ ಸಿಪಿಐ ಜಿ.ಆರ್‌.ಷಣ್ಮುಖಪ್ಪ ಅವರನ್ನು ಸನ್ಮಾನಿಸಲಾಯಿತು.  

ಕಾರ್ಯಕ್ರಮದಲ್ಲಿ 9ನೇ ವಾರ್ಡ್‌ ಪಾಲಿಕೆ ಸದಸ್ಯರಾದ ಜಬ್ಬಾರ್‌ಸಾಬ್, ಮಿಲ್ಲಾರಪೇಟೆಯ ಬಿ.ಶಂಕರ್, ಮುಖಂಡರಾದ ಗಾದಿಲಿಂಗ, ಬಿ.ಮಲ್ಲಿಕಾರ್ಜುನ, ಪರಶುರಾಮ್, ನಾಗರಾಜ್, ಭಾಷಸಾಬ್ ಸೇರಿದಂತೆ ಹಲವಾರು ಚಾಲಕರು ಉಪಸ್ಥಿತರಿದ್ದರು. 


ಸುದ್ದಿ ಓದಿ