ಹಗರಿಬೊಮ್ಮನಹಳ್ಳಿ

ಹೆಚ್‌ಐವಿ ಸೊಂಕಿನ ಬಗ್ಗೆ ಅರಿವು ಮೂಡಲಿ: ನ್ಯಾ. ಅನುಪಮ

ಹೆಚ್‌ಐವಿ ಸೊಂಕಿನ ಬಗ್ಗೆ ಅರಿವು ಮೂಡಲಿ: ನ್ಯಾ. ಅನುಪಮ

ಹಗರಿಬೊಮ್ಮನಹಳ್ಳಿ 12: ಕಣ್ಣಿಗೆ ಕಾಣದೆ ದೈಹಿಕವಾಗಿ ಮಾರಕ ರೋಗಗಳನ್ನು ಹರಡುವ ವೈರಸ್‌ಗಳಿಂದ ಪ್ರತಿಯೊಬ್ಬರೂ ದೂರವಿರುದರ ಜೊತೆ ಮಾರಕ ವೈರಸ್ ಹೆಚ್‌ಐವಿ ಬಗ್ಗೆ ಪ್ರತಿಯೊಬ್ಬರಲ್ಲೂ ಅರಿವು ಮೂಡಿಸಬೇಕು ಎಂದು ಸಿವಿಲ್ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಾದ ಅನುಪಮ ಡಿ ಹೇಳಿದರು. 

ಪಟ್ಟಣದ ಗುರುಭವನದಲ್ಲಿ ನಡೆದ ಕರ್ನಾಟಕ ರಾಜ್ಯ ಏಡ್ಸ್‌ ಪ್ರಿವೇನ್‌ಷನ್ ಸೊಸೈಟಿ ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ತಾಲೂಕು ಆರೋಗ್ಯ ಅಧಿಕಾರಿಗಳ ಸಂಯುಕ್ತಾಶ್ರಯದಲ್ಲಿ ಹೆಚ್‌ಐವಿ ಎಡ್ಸ್‌ ಕುರಿತಾದ ಮನೆ ಮನೆ ಜಾಗೃತಿ ಆಂದೋಲನ ಮತ್ತು ಆಶಾ ಕಾರ್ಯಕರ್ತೆಯರ ಮತ್ತು ಮೆಂಟರ​‍್ಸ‌ಗಳಿಗೆ ತರಬೇತಿ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು. 

ಪ್ರಸ್ತುತ ಆಧುನಿಕ ಜೀವನದಲ್ಲಿ ವೈರಸ್‌ಗಳ ಹಾವಳಿ ಹೆಚ್ಚಾಗಿದ್ದು ಆರೋಗ್ಯದ ಕಡೆ ಹೆಚ್ಚು ಗಮನಹರಿಸಬೇಕಿದೆ, ಆರೋಗ್ಯ ಕೇಂದ್ರಗಳ ಮಾಹಿತಿ ಪ್ರಕಾರ ಹೆಚ್‌ಐವಿ ಸೊಂಕಿಗೆ ಯುವ ಸಮೂಹ ಬಲಿಯಾಗುತ್ತಿದ್ದು ಏಡ್ಸ್‌ ಬಗ್ಗೆ ಮೊದಲು ಯುವ ಪೀಳಿಗೆಗೆ ಅರಿವು ಮೂಡಿಸುವ ಕಾರ್ಯವಾಗಬೇಕಿದೆ. ಇದಕ್ಕೆ ಆಶಾ ಕಾರ್ಯಕರ್ತೆಯರ ಶ್ರಮ ಬಹುಪಾಲು ಇದೆ, ಆಶಾ ಕಾರ್ಯಕರ್ತೆಯರು ಮಾಡುವ ಕೆಲಸದಲ್ಲಿ ಜನರು ಸಕಾರಾತ್ಮಕ ಸೇರಿದಂತೆ ನಕಾರಾತ್ಮಕವಾಗಿಯೂ ಸರಸಮಾನವಾಗಿ ಕಾಣಬೇಕು. ಹೆಚ್‌ಐವಿ ಬಗ್ಗೆ ಮನೆ ಮನೆ ಜಾಗೃತಿ ನೀಡುವ ನಿಮಗೆ ಎಲ್ಲಕಡೆಗಳಲ್ಲೂ ಎಕ ಮನೋಭಾವವಿರುವ ವ್ಯೆಕ್ತಿಗಳು ದೊರಕದೇ ಇರಬಹುದು ಆದರೆ ನೀವು ಮಾಡುವ ಕಾರ್ಯಕ್ಷಮತೆ ನಿಜೂಕ್ಕೂ ಶ್ಲಾಘನೀಯವೆಂದರು. 

ತಾಲೂಕು ಆರೋಗ್ಯ ಅಧಿಕಾರಿ ಶಿವರಾಜ್ ಪ್ರಾಸ್ತಾವಿಕ ಮಾತನಾಡಿ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಕಳೆದ 2017-18ರಿಂದ ಪ್ರಸ್ತುತವರೆಗೆ ಒಟ್ಟು 261 ಪ್ರಕರಣ ಬೆಳಕಿಗೆ ಬಂದಿವೆ, ಇದಕ್ಕೆ ಯುವ ಸಮೂಹ ಮುಂಚೂಣಿಯಲ್ಲಿ ಬಲಿಯಾಗುತ್ತಿರುವುದು ಕಾಣಬಹುದು. ಈ ವೈರಸ್ ನೇರವಾಗಿ ಯಾರನ್ನು ಕೊಲ್ಲುವುದಿಲ್ಲ ದಿನಗಳೆದಂತೆ ಮನುಷ್ಯನಲ್ಲಿನ ರೋಗನಿರೋಧಕ ಶಕ್ತಿಯನ್ನು ಕುಂದಿಸುತ್ತಾ ಮರಣದ ಅಂಚಿಗೆ ತಳ್ಳುತ್ತದೆ, ಹಾಗಾಗಿ ಅಸುರಕ್ಷಿತ ಲೈಂಗಿಕ ಸಂಪರ್ಕ ಹೊಂದುವುದರ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವುದರ ಜೊತೆ ಹೆಚ್‌ಐವಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುವುದು ಸೂಕ್ತ, ಗರ್ಭಿಣಿಯರಿಗೆ ಹೆಚ್‌ಐವಿ ಸೊಂಕು ದೃಡ ಪಟ್ಟರೆ ಕೂಡಲೇ ಗರ್ಭದಲ್ಲಿರುವ ಮಗುವಿಗೆ ಸೂಕ್ತ ಚಿಕಿತ್ಸೆ ನೀಡಿ ಸೊಂಕಿನಿಂದ ಪಾರು ಮಾಡಬಹುದಾಗಿದೆ, ಸೊಂಕಿಗೆ ತುತ್ತಾಗಿರುವವರು ಅಗತ್ಯ ಚಿಕಿತ್ಸೆಯನ್ನು ಪಡೆದು ಪೌಷ್ಠಿಕ ಆಹಾರ ಸೇವನೆಯಿಂದ ಎಡ್ಸ್‌ ರೋಗಿಗಳು ಸಹ ಸಾಮಾನ್ಯರಂತೆ ಜೀವನ ನಡೆಸಬಹುದಾಗಿದೆ, ರೋಗಿಗಲ್ಲಿ ಆತ್ಮವಿಶ್ವಾಸ ಮೂಡಿಸುವ ಕಾರ್ಯವಾಗಬೇಕಿದೆ. ಹೆಚ್‌ಐವಿ ಸೊಂಕಿನ ಬಗ್ಗೆ ನಿಮ್ಮ ಮನೆ ಬಾಗಿಲಿಗೆ ಬರುವ ಆಶಾ ಕಾರ್ಯಕರ್ತೆಯರಿಂದ ಸಂಪೂರ್ಣ ಮಾಹಿತಿ ಪಡೆದುಕೊಂಡು ತಾಲೂಕನ್ನು ಹೆಚ್‌ಐವಿ/ಏಡ್ಸ್‌ ಮುಕ್ತ ತಾಲೂಕು ಮಾಡುವ ಗುರಿಯಲ್ಲಿ ನಿಮ್ಮ ಸಹಕಾರ ಅಗತ್ಯ ಎಂದರು. 

ಕಾರ್ಯಕ್ರವನ್ನು ತಾಲೂಕಾಸ್ಪತ್ರೆಯ ಆಪ್ತ ಸಮಾಲೋಚಕ ಆಶೋಕ ನಿರೂಪಿಸಿ ಸ್ವಾಗತಿಸಿದರು. ಮರಿಯಮ್ಮನಹಳ್ಳಿಯ ಲಲಿತ ಕಲಾ ರಂಗ ತಂಡದಿಂದ ಗ್ರಾಮೀಣ ಬಾಗದಲ್ಲಿ ಏಡ್ಸ್‌ ಬಗ್ಗೆ ಜಾಗೃತಿ ಗೀತೆಗಳನ್ನು ಹಾಡಿಸಿದರು. 

ಈ ಸಂಧರ್ಭದಲ್ಲಿ ಬಳ್ಳಾರಿಯ ಫ್ಯಾಮಿಲಿ ವೆಲ್‌ಫೇರ್ ಅಧಿಕಾರಿ ಡಾ.ಪೂರ್ಣಿಮಾ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲ ಏಡ್ಸ್‌ ಕಾರ್ಯಕ್ರಮ ಸಂಯೋಜನಾಧಿಕಾರಿ ಗೀರೀಶ್, ಕೊಟ್ಟೂರು, ಉಜ್ಜಯಿನಿ, ಹಡಗಲಿಯ ಆಪ್ತಸಮಾಲೋಚಕರು ಸೇರಿದಂತೆ ತಾಲೂಕಿನ ಆಶಾ ಕಾರ್ಯಕರ್ತೆಯರು ಇದ್ದರು. 


ಸುದ್ದಿ ಓದಿ