ರಾಣೆಬೆನ್ನೂರ

ಜೀವನ ಹಾಳು ಮಾಡುವ ಏಡ್ಸ್‌ ಕುರಿತು ಅರಿವು ಜಾಗೃತಿ ಅಗತ್ಯ - ಮೃತುಂಜಯ

ಜೀವನ ಹಾಳು ಮಾಡುವ ಏಡ್ಸ್‌ ಕುರಿತು ಅರಿವು ಜಾಗೃತಿ ಅಗತ್ಯ - ಮೃತುಂಜಯ

ರಾಣೆಬೆನ್ನೂರು 11: ಸಮಾಜದಲ್ಲಿ ಇಂದು ಕಲುಷಿತ ವಾತಾವರಣ ನಿರ್ಮಾಣವಾಗಿದ್ದು, ಎಲ್ಲ ಅರಿವು ಜಾಗೃತೆಗಿಂತಲೂ, ಏಡ್ಸ್‌  ಕುರಿತು ಇಂದು  ಪ್ರತಿಯೊಬ್ಬರು ಸ್ವಯಂ ಪ್ರೇರಣೆಯಿಂದ  ಮುಂದಾಗಿ ಅರಿವು ಮೂಡಿಸುವ ಕಾರ್ಯದಲ್ಲಿ ಕೈ ಜೋಡಿಸಬೇಕಾದ ಇಂದಿನ ಅಗತ್ಯವಿದೆ ಎಂದು  ಬಿ. ಎ. ಜೆ. ಎಸ್‌. ಎಸ್‌. ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಂ. ಎಂ ಮೃತ್ಯುಂಜಯ ಕರೆ ನೀಡಿದರು. ಅವರು ಕಾಲೇಜು ಸಭಾಭವನದಲ್ಲಿ ನಡೆದ "ಏಡ್ಸ್‌ ಸುರಕ್ಷಾ ಅಭಿಯಾನ " ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.  

ವಯೋಸಹಜ ವೈಯುಕ್ತಿಕ ವಾಂಛೆ, ಲಾಲಸೆ ಸಹಜ ಕೃಯೇಯಾಗಿದ್ದರೂ, ಈ ಕುರಿತು ಭವಿಷ್ಯದ ದೃಷ್ಟಿಯಿಂದ ಸದಾಕಾಲ ಜಾಗೃತರಾಗಿರಬೇಕು. ಯಾವುದೇ ಕಾರಣಕ್ಕೂ ಅಜಾರುಕತೆ ಸಲ್ಲದು.ಕ್ಷಣ ಕಾಲ  ಮನಸ್ಸು ಜಾರಿದರೆ, ಜೀವನಪರ್ಯಂತೆ ಅನಾರೋಗ್ಯದಲ್ಲಿ ಬದುಕು ಸಾಗಿಸಬೇಕಾಗುತ್ತದೆ ಎನ್ನುವ ಕುಟುಂಬ ಕಲ್ಯಾಣ ಇಲಾಖೆಯ ಸಾರಿ ಸಾರಿ ನೀಡುವ ಸಂದೇಶದ ವಾಸ್ತವಿಕ ಸತ್ಯ ಸಂಗತಿಯನ್ನು ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದರು.  

 ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ, ತಾಲೂಕ ಆರೋಗ್ಯ ಸಲಹೆಗಾರ ರಾದ ಶ್ರೀಮತಿ ಚಂದ್ರಕಲಾ ಅವರು ದೇಶದ ಮತ್ತು ನಾಡಿನ ಭವಿಷ್ಯ ಯುವ ಜನಾಂಗದ ಮೇಲಿದೆ. ಆರೋಗ್ಯಕರ ಜೀವನಕ್ಕೆ ಸುರಕ್ಷತೆ ಬಹು ಮುಖ್ಯವಾಗಿದ್ದು, ಇದರಿಂದ ಮಾತ್ರ  ಆರೋಗ್ಯಪೂರ್ಣ ಕುಟುಂಬ ಮತ್ತು ಸಮಾಜ ಕಟ್ಟಲು ಸಾಧ್ಯವಾಗುವುದು ಎಂದರು. ಕಾಲೇಜಿನ ಶೈಕ್ಷಣಿಕ ಸಲಹೆಗಾರ ಹೆಚ್‌.ಎ. ಭಿಕ್ಷಾವರ್ತಿಮಠ ಅವರು ಆರೋಗ್ಯ ರಕ್ಷಣೆ, ಜೀವನ ಭದ್ರತೆ, ನಮ್ಮ ಪೂರ್ಣ ಪ್ರಜ್ಞೆ - ಅರಿವಿನ ಮೇಲೆ ನಿಂತಿದೆ ಎಂದರು.  

 ಅರಿವು ಜಾಗೃತಿ ಅಭಿಯಾನದಲ್ಲಿ ಐ ಕ್ಯೂ. ಎ.ಸಿ. ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ   ಪರಶುರಾಮ ಪವಾರ, ತಾಲೂಕಾ ಆರೋಗ್ಯಾಧಿಕಾರಿ ಅಬ್ರಹಾರ, ಉಪನ್ಯಾಸಕರಾದ ಡಾ. ಎಚ್‌. ಐ. ಬ್ಯಾಡಗಿ, ಪ್ರೊ. ಎ. ಶಂಕರ ನಾಯ್ಕ, ಪ್ರೊ. ಅಶೋಕ್ ಬಣಕಾರ, ಪ್ರಧಾನ ಕಾರ್ಯದರ್ಶಿ ನಿಕೇತನ ಕಮ್ಮಾರ, ಸೇರಿದಂತೆ ಮತ್ತಿತರರು ಮಾತನಾಡಿದರು. ಲಕ್ಷ್ಮಿ ಹಣಚಿಕ್ಕಿ ಪ್ರಾರ್ಥಿಸಿದರು. ದೇವಿಕಾ ಚೌಟಗಿ ಸ್ವಾಗತಿಸಿ, ಕು: ಪದ್ಮಾ ಎಸ್, ನಿರೂಪಿಸಿ, ಪವನಕುಮಾರ ಲಮಾಣಿ ವಂದಿಸಿದರು. 


ಸುದ್ದಿ ಓದಿ