ಮಾಸ್ಕ್ ಧರಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಲು ಮಂಜುನಾಥ ಸ್ವಾಮಿ ಚಾಲನೆ
ಲೋಕದರ್ಶನ ವರದಿ
ಸಿರುಗುಪ್ಪ 14: ವೈರಸ್ ಮೂರನೇ ಅಲೆಯ ಭೀತಿಯಿಂದಾಗಿ ನಗರದಲ್ಲಿ ಸೋಮವಾರ ತಾಲ್ಲೂಕು ಆಡಳಿತ ಪೊಲೀಸ್ ಕಂದಾಯ ನಗರಸಭೆ ಇವರಿಂದ ಮಾಸ್ಕ್ ಧರಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಲು ಓಮೈಕ್ರಾನ್ ರೂಪಾಂತರಿ ಹಿನ್ನೆಲೆಯಲ್ಲಿ ಕಡ್ಡಾಯ ಮಾಸ್ಕ್ ಧರಿಸಿ ಇಲ್ಲವೇ ದಂಡ ಪಾವತಿಸಿ ಆಂದೋಲನಕ್ಕೆ ತಹಶೀಲ್ದಾರ್ ಹಾಗೂ ತಾಲ್ಲೂಕು ದಂಡಾಧಿಕಾರಿ ಎನ್ ಆರ್ ಮಂಜುನಾಥ ಸ್ವಾಮಿ ಚಾಲನೆ ನೀಡಿದರು. ವಾಹನ ಸವಾರರು ಬೀದಿಬದಿ ವ್ಯಾಪಾಗಳಿಗೆ ಇನ್ನಿತರ ವರ್ತಕರು, ತರಕಾರಿ ಮಾರುಕಟ್ಟೆಗಳಲ್ಲಿ ಅನೇಕರು ಮಾಸ್ಕ್ ಧರಿಸದವರಿಗೆ ಈ ಸಂದರ್ಭದಲ್ಲಿ ದಂಡ ವಿಧಿಸಲಾಯಿತು. ಪೊಲೀಸ್ ಸರ್ಕಲ್ ಇನ್ ಸ್ಪೆಕ್ಟರ್ ಟಿ ಆರ್ ಪವಾಆರ್, ಇನ್ಸ್ ಪೆಕ್ಟರ್ ಕೆ ರಂಗಯ್ಯ ನಗರಸಭಾ ಪೌರಾಯುಕ್ತ ಕೆ ರಾಘವೇಂದ್ರ ಗುರು ಸಿಬ್ಬಂದಿವರ್ಗದವರು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ ಇತರರಿದ್ದರು .