ಲವ್ ಜಿಹಾದ್ ಕುರಿತು ಜಾಗೃತಿ ಅಭಿಯಾನ
ಮಹಾಲಿಂಗಪುರ: ವಿಶ್ವ ಹಿಂದೂ ಪರಿಷತ್, ಭಜರಂಗದಳ ಹಾಗೂ ಹಿಂದೂ ಜಾಗರಣಾ ವೇದಿಕೆ ಮಹಾಲಿಂಗಪುರ ವತಿಯಿಂದ ನಗರದ ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹಿಂದೂ ಹೆಣ್ಣು ಮಕ್ಕಳ ರಕ್ಷಣೆಗಾಗಿ ಲವ್ ಜಿಹಾದ್ ಕುರಿತು ಜಾಗೃತಿ ಅಭಿಯಾನ ಕರಪತ್ರಗಳನ್ನು ವಿತರಿಸಲಾಯಿತು.
ಯುಗಾದಿ ಪ್ರಯುಕ್ತ ಸ್ಥಳೀಯ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಜಟೋತ್ಸವ ದರ್ಶನಕ್ಕೆ ಆಗಮಿಸಿದ್ದ ಸಾವಿರಾರು ಮಹಿಳೆಯರು ಯುವತಿಯರು ಸೇರಿದಂತೆ ಭಕ್ತರಿಗೆ ಕರಪತ್ರಗಳನ್ನು ವಿತರಿಸಿ ಜಾಗೃತಿ ಮೂಡಿಸಲಾಯಿತು.
ರವಿ ಜವಳಗಿ, ಸಚಿನ್ ಕಲ್ಮಾಡಿ, ರಘು ಗರಗಟ್ಟಿ,ಸಂತೋಷ್ ಹಜಾರೆ, ಅಭಿಷೇಕ್ ಲಮಾಣಿ,ಅಕ್ಷಯ ಜಲ್ಲಿ,ಸಾಗರ ಸಿಂಧೆ,ಚೆನ್ನು ಆರೆಗಾರ,ಮಹಾಲಿಂಗ ಜಮಖಂಡಿ,ತಮ್ಮಣ್ಣ ಆದೆಪ್ಪನವರ,ಈರಣ್ಣ.ಹುನಶ್ಯಾಳ,ಬಸವರಾಜ ಗಿರಿಸಾಗರ, ಮಂಜು ಬಾವಿಕಟ್ಟಿ,ಸಿದ್ದು ಮೇಟಿ, ಬಸು ಹುರಕಡ್ಲಿ, ಗಜಾನನ.ನುಚ್ಚಿ, ಸಚಿನ ವಂದಾಲ,ರೇವಣೇಶ ಇಟಕಣ್ಣವರ ಇನ್ನು ಹಲವಾರು ಕಾರ್ಯಕರ್ತರೂ ಉಪಸ್ಥಿತರಿದ್ದರು.