ಹುಕ್ಕೇರಿ

112ಕ್ಕೆ ಡೈಲ್ ಮಾಡಿ, ಪೊಲೀಸ್ರಿಂದ ಜಾಗೃತಿ ಆಂದೋಲನ

112ಕ್ಕೆ ಡೈಲ್ ಮಾಡಿ, ಪೊಲೀಸ್ರಿಂದ ಜಾಗೃತಿ ಆಂದೋಲನ

ಹುಕ್ಕೇರಿ 22: ನಗರದ ಪೊಲೀಸ್ ಠಾಣೆಯಿಂದ 108 ಬದಲು 112 ಬಳಸಿ ತುರ್ತು ಸೇವೆ ಪಡೆಯಲು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಆಂದೋಲನ ಜರುಗಿತು.

ಬೆಳಗಾವಿ ಜಿಲ್ಲಾ ಪೊಲೀಸ್ ವತಿಯಿಂದ ಹುಕ್ಕೇರಿ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸಪೆಕ್ಟರ ಆರ್ ಆರ್ ಉಪ್ಪಾರ ಕೋರ್ಟ್ ಸರ್ಕಲ್ ನಾಮ ಫಲಕ ಅನಾವರಣಗೊಳಿಸಿ ಅಟೋ ರಿಕ್ಷಾ ಚಾಲಕರಿಗೆ ಮತ್ತು ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಯಾವದೇ ಆಪತ್ತಿನ ಸಂದರ್ಭದಲ್ಲಿ 112 ನಂಬರಿಗೆ ಕರೆ ಮಾಡಿದರೆ ಕೇವಲ 15 ಸೆಕೆಂಡುಗಳಲ್ಲಿ ಕರೆ ಸ್ವೀಕಾರ ಮಾಡಿ ತ್ವರಿತವಾಗಿ ಸೇವೆ ನೀಡಲಾಗುವುದು. ದಿನದ 24 ಘಂಟಗಳ ಕಾಲ ಕಾರ್ಯ ನಿರ್ವಹಿಸುವ ಈ ನೂತನ ಪೊಲೀಸ್ ನಂಬರ ಪೊಲೀಸ್, ಅಗ್ನಿ ಮತ್ತು ಆಪತ್ತು ನಿರ್ವಹಣೆಗೆ ಸಂದೇಶ ರವಾನೆÉಯಾಗಿ ಅಪಘಾತ ಸಂದರ್ಭದಲ್ಲಿ ಉಚಿತವಾಗಿ ತ್ವರಿತ ಪರಿಹಾರ ಸಿಗಲಿದೆ. ಇದರ ಪ್ರಯೋಜನೆಯನ್ನು ಸಾರ್ವಜನಿಕರು ಪಡೆದುಕೊಳ್ಳಬೆಕು ಮತ್ತು 112 ನಂಬರ ಅತಿ ಹೆಚ್ಚು ಪ್ರಚಾರವಾಗಲು ಸಹಕರಿಸಬೇಕು ಎಂದರು.ಈ ಸಂದರ್ಭದಲ್ಲಿ ನಗರ ಉಸ್ತುವಾರಿ ಬೀಟ್ ಪೊಲೀಸ್ ಎನ್ ಬಿ ನಾಗನ್ನವರ, ಯಾದಗೂಡ ಗ್ರಾಮ ಪಂಚಾಯತಿ ಸದಸ್ಯ ಶಿವನಗೌಡಾ ಪಾಟೀಲ ಹಾಗೂ ಅಟೋ ಚಾಲಕರು ಉಪಸ್ಥಿತರಿದ್ದರು.

ಸುದ್ದಿ ಓದಿ