ಮಹಲಿಂಗಪುರ

ವಿದ್ಯಾರ್ಥಿಗಳಿಂದ ಜಾಗೃತಿ

ವಿದ್ಯಾರ್ಥಿಗಳಿಂದ ಜಾಗೃತಿ

ಮಹಾಲಿಂಗಪುರ: ಸ್ಥಳೀಯ ಬನಶಂಕರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ನಿಮಿತ್ತ ತಂಬಾಕು ಬೇಡ ಎಂಬ ಜಾಗೃತಿ ಜಾಥಾ ನಡೆಸಿದರು. ಜಾಗೃತಿ ಘೋಷಣೆ ಕುಗುವುದರ ಮೂಲಕ ಶಾಲೆಯ ಆವರಣದಿಂದ ಭಗೀರಥ ವೃತ ಚಿಮ್ಮಡ ಗಲ್ಲಿಗಳಿಗೆ ತೆರಳಿ ಪಾನ್ಶಾಪ್ ಮಾಲೀಕರಿಗೆ ಗುಲಾಬಿ ಹೂ ನೀಡಿ ಶಾಲೆಯ ವ್ಯಾಪಿಗೆ ಹತ್ತಿರಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡಬೇಡಿ ಎಂದು ಮನವಿ ಮಾಡಿದರು. ಅಂಗಡಿ ಮುಂದೆ ನಿಂತ ಗ್ರಾಹಕರಿಗೂ ಗುಲಾಬಿ ಹೂ ನೀಡಿ ಮಾದಕ ವಸ್ತು ಸೇವಿಸದಂತೆ ತಿಳುವಳಿಕೆ ನೀಡಿದರು.ಶಾಲೆಯ ಮುಖ್ಯ ಶಿಕ್ಷಕಿಯಾದ ಗೀತಾ ಪಾಟೀಲ,ಶಿವಲೀಲಾ ಹಿರೇಮಠ, ಜಯಶ್ರೀ ಸೋನೋನಿ,ಸಿತಾರ ಗಂಜ್ಯಾಳಿ,ಹಾಗೂ ವಿದ್ಯಾರ್ಥಿಗಳೂ ಇದ್ದರು 

ಸುದ್ದಿ ಓದಿ