ಮಹಲಿಂಗಪುರ

ಸ್ವಚ್ಛ ಸವೇಕ್ಷಣ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ

ಸ್ವಚ್ಛ ಸವೇಕ್ಷಣ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ


ಮಹಾಲಿಂಗಪುರ : ಸ್ವಚ್ಛ ಭಾರತ ಮಿಷನ್ ಯೋಜನೆಯ ಐಇಸಿ ಚಟುವಟಿಕೆಗಳ ಘನತ್ಯಾಜ್ಯ ನಿರ್ವಹಣೆ ಅರಿವು ಅಡಿಯಲ್ಲಿ ಸ್ಥಳೀಯ ಪುರಸಭೆ ವತಿಯಿಂದ ಸಭಾಭವನದಲ್ಲಿ ಸೋಮವಾರದಂದು ಮಹಾಲಿಂಗಪುರ ವಲಯದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಚಿತ್ರಕಲೆ, ಪ್ರಬಂಧ, ಭಾಷಣ, ರಸ ಪ್ರಶ್ನೆಗಳನ್ನು ಏರಿ​‍್ಡಸಲಾಗಿತ್ತು. 

ಮುಖ್ಯಾಧಿಕಾರಿ ಎಚ್‌. ಎಸ್‌. ಚಿತ್ತರಗಿ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿ ತಮ್ಮ ಮನೆ ಹಾಗೂ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸಿಕ್ಕಸಿಕ್ಕಲ್ಲಿ ಕಸವನ್ನು ಎಸೆಯದೆ, ಹಸಿ ಹಾಗೂ ಒಣ ಕಸವನ್ನು ಬೇರಿ​‍್ಡಸಿ ತಮಗೆ ಪುರಸಭೆ ನೀಡಿರುವ ಡಬ್ಬಿಗಳಲ್ಲಿ ಸಂಗ್ರಹಿಸಿ, ಕಸದ ತೊಟ್ಟಿಗಳಿಗೆ ಹಾಕುವ ವೈಜ್ಞಾನಿಕ ವಿಷಯವನ್ನು ವಿಸ್ತಾರವಾಗಿ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟು ಪಾಲಕರಿಗೂ ಈ ವಿಷಯ ತಿಳಿಸಲು ಕೋರಿದರು.  

ಪ್ರತಿ ಶಾಲೆಯಿಂದ ಇಬ್ಬರು ಮಕ್ಕಳು ಹಾಗೂ ಶಿಕ್ಷಕರು ಭಾಗವಹಿಸಿ ಪುರಸಭೆ ನೀಡುವ ಅಗತ್ಯ ಸಲಕರಣೆಗಳನ್ನು ಉಪಯೋಗಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದರು. ಈ ಸ್ಪರ್ಧೆಯ ಫಲಿತಾಂಶ ಜ.26ರಂದು ಜರಗುವ ಗಣರಾಜ್ಯೋತ್ಸವದಂದು ಪುರಸಭಾ ಸಭಾಭವನದಲ್ಲಿ ಪ್ರಕಟಿಸಿ ಬಹುಮಾನ ವಿತರಿಸಲಾಗುವುದು ಎಂದರು. 

ಪುರಸಭೆ ಅಧ್ಯಕ್ಷೆ ಸ್ನೇಹಲ್ ಅಂಗಡಿ, ಮುಖ್ಯಾಧಿಕಾರಿ, ಎಚ್‌.ಎಸ್‌. ಚಿತ್ತರಗಿ, ಪುರಸಭಾ ಸದಸ್ಯರಾದ ಶೇಖರ ಅಂಗಡಿ, ರವಿ ಜವಳಗಿ, ಮುಖಂಡರಾದ ಶಿವಾನಂದ ಅಂಗಡಿ, ಮತ್ತು ಸಮೂಹ ಸಂಪನ್ಮೂಲ ವ್ಯಕ್ತಿಗಳು, ಎಸ್ ಎನ್ ಬ್ಯಾಳಿ, ಆರೋಗ್ಯ ನೀರೀಕ್ಷಕ ಸಿದ್ದು ಅಳ್ಳಿಮಟ್ಟಿ, ರಾಜು ಹೂಗಾರ, ಎಸ್ ಎನ್ ಪಾಟೀಲ್, ಆರ್‌.ಡಿ. ನಡುವಿನಮನಿ, ನಾಮದೇವ ಲಮಾಣಿ, ರವಿ ಹಲಸಪ್ಪಗೋಳ, ಸಿಪಾಯಿ ರಾಮು, ಶಿಕ್ಷಕರಾದ ಭೀಮಪ್ಪ ಸಿರಮಗೊಂಡ, ಎಂ. ಎಂ. ಚಿಮ್ಮಡ, ಬಾಳು ಮನ್ನಿಕೇರಿ, ಸಿದ್ಧಾರೂಢ ಮುಗಳಖೋಡ ಇನ್ನು ಹಲವಾರು ಶಿಕ್ಷಕರು ಮತ್ತು ಸಿಬ್ಬಂದಿ ಭಾಗವಹಿಸಿದ್ದರು. 


ಸುದ್ದಿ ಓದಿ