ಬೆಳಗಾವಿ

ರಾಷ್ಟ್ರಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಶಿಂದೊಳ್ಳಿ ವಿದ್ಯಾರ್ಥಿನಿ ತನ್ವಿಗೆ ಪ್ರಶಸ್ತಿ

ರಾಷ್ಟ್ರಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಶಿಂದೊಳ್ಳಿ ವಿದ್ಯಾರ್ಥಿನಿ ತನ್ವಿಗೆ ಪ್ರಶಸ್ತಿ
Award for Shindolli student Tanvi in ​​national-level essay competition

ರಾಷ್ಟ್ರಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಶಿಂದೊಳ್ಳಿ ವಿದ್ಯಾರ್ಥಿನಿ ತನ್ವಿಗೆ ಪ್ರಶಸ್ತಿ  

ಶಿಂದೊಳ್ಳಿ: ಗ್ರಾಮದ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿನಿ ಕುಮಾರಿ ತನ್ವಿ ತಾನಾಜಿ ಅಗಸಿಮನಿ ರಾಷ್ಟ್ರಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಸಾಧನೆ ಮಾಡುವ ಮೂಲಕ ಗ್ರಾಮದ ಕೀರ್ತಿ ಹೆಚ್ಚಿಸಿದ್ದಾಳೆ.  

ಶಿಂದೊಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ ವ್ಯಾಸಂಗ ಮಾಡಿರುವ ಕುಮಾರಿ ತನ್ವಿ ತಾನಾಜಿ ಅಗಸಿಮನಿ, ಸದ್ಯ ಸಾಂಬ್ರಾದ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.  

‘ಸ್ಮಾರ್ಟ್‌ ಇಂಡಿಯಾ ನಿರ್ಮಾಣದಲ್ಲಿ ಯುವಕರ ಪಾತ್ರ’ ವಿಷಯದ ಕುರಿತು ನಡೆದ ರಾಷ್ಟ್ರಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ಗಮನಾರ್ಹ ಸಾಧನೆ ಮಾಡಿರುವ ತನ್ವಿ, ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ಪಡೆದಿದ್ದಾಳೆ.  

ತನ್ವಿಯ ಸಾಧನೆಗೆ ಶಿಕ್ಷಣಪ್ರೇಮಿ ಹಾಗೂ ಸಮಾಜಸೇವಕ ವೀರಭದ್ರಯ್ಯ ಬಾಬು ಪೂಜಾರ ಅಭಿನಂದನೆ ಸಲ್ಲಿಸಿದ್ದಾರೆ. ಬಾಲಕಿಯ ಸಾಧನೆ ಇಡೀ ಶಿಂದೊಳ್ಳಿ ಗ್ರಾಮಕ್ಕೆ ಹೆಮ್ಮೆಯ ವಿಷಯವಾಗಿದ್ದು, ಆಕೆಯ ಮುಂದಿನ ಜೀವನ ಉಜ್ವಲವಾಗಲಿ ಎಂದು ಶುಭ ಹಾರೈಸಿದ್ದಾರೆ.  

ತನ್ವಿಯ ಸಾಧನೆಗೆ ಶಿಂದೊಳ್ಳಿ ಗ್ರಾಮದ ಹಿರಿಯರು, ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ. 


ಸುದ್ದಿ ಓದಿ