ಘಟ್ರಪ್ರಭಾ ಆಸ್ಪತ್ರೆಯಲ್ಲಿ ರೋಗಿಯಿಂದ ಅಟೆಂಡರನ ಹತ್ಯೆ : ಬೆಚ್ಚಿಬಿದ್ದ ಆಸ್ಪತ್ರೆಯ ಸಿಬ್ಬಂದಿಗಳು

ಘಟ್ರಪ್ರಭಾ ಆಸ್ಪತ್ರೆಯಲ್ಲಿ ರೋಗಿಯಿಂದ ಅಟೆಂಡರನ ಹತ್ಯೆ : ಬೆಚ್ಚಿಬಿದ್ದ ಆಸ್ಪತ್ರೆಯ ಸಿಬ್ಬಂದಿಗಳು

ಬೆಳಗಾವಿ : ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯೋರ್ವ ತನ್ನ ವ್ಯವಸ್ಥೆಗಾಗಿ ನಿಂತಿದ್ದ ಅಟೆಂಡರನನ್ನು ಮುಖಕ್ಕೆ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಘಟಪ್ರಭಾದ ಖಾಸಗಿ ಆಸ್ಪತ್ರೆಯಲ್ಲಿ ರವಿವಾರ ತಡರಾತ್ರಿ ನಡೆದಿದೆ. 

     ಅನಾರೋಗ್ಯದಿಂದ ಬಳಲುತಿದ್ದ ವ್ಯಕಿಯು ರವಿವಾರ ತಡರಾತ್ರಿ ಈ ಕೃತ್ಯ ನಡೆಸಿದ್ದು, ಈ ಘಟನೆಯಿಂದ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಇನ್ನುಳಿದ ರೋಗಿಗಳು ಭಯಭೀತರಾಗಿದ್ದಾರೆ. ರೋಗಿಯು ಕಲ್ಲಿನಿಂದ ಹತ್ಯೆ ಮಾಡಿರುವ ದೃಶ್ಯವು ಆಸ್ಪತ್ರೆಯ ಸಿಸಿ ಟಿವಿ ಯಲ್ಲಿ ಸೆರೆಯಾಗಿದ್ದು,  ಘಟಪ್ರಭಾ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. 

   ಕೊಲೆ ಆಗಿರುವ ವ್ಯಕ್ತಿಯು ಮಹಾರಾಷ್ಟ್ರದ ಬೀಡ ಜಿಲ್ಲೆಯವರಾಗಿದ್ದು, ಕೊಲೆಗೆ ಹಳೆಯ ವೈಷಮ್ ಕಾರಣ ಇರಬಹುದು ಎಂದು ಅಂದಾಜಿಸಲಾಗಿದೆ. ಕೊಲೆ ಮಾಡಿದ ವ್ಯಕ್ತಿ ಹಾಗೂ ಕೊಲೆಯಾದವರು ಇಬ್ಬರು ಸಂಬಂಧಿಕರು ಎಂದು ಅಂದಾಜಿಸಲಾಗಿದೆ. ಕೊಲೆ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಸುದ್ದಿ ಓದಿ