ಕನ್ನಡಿಗರ ಮೇಲೆ ಹಲ್ಲೆ : ಫರಾರಿಯಾಗಿದ್ದ ನಾಲ್ವರು ಪೊಲೀಸ ವಶಕ್ಕೆ : ಸಂಕೇಶ್ವರ ಬಂದ್ ಹಿಂದಕ್ಕೆ

ಕನ್ನಡಿಗರ ಮೇಲೆ ಹಲ್ಲೆ : ಫರಾರಿಯಾಗಿದ್ದ ನಾಲ್ವರು ಪೊಲೀಸ ವಶಕ್ಕೆ : ಸಂಕೇಶ್ವರ ಬಂದ್ ಹಿಂದಕ್ಕೆ

ಬೆಳಗಾವಿ /ಸಂಕೇಶ್ವರ : ಹುಕ್ಕೇರಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಇತ್ತೀಚೆಗೆ ಕನ್ನಡ ಧ್ವಜ ತೆರವು ಮಾಡುವಂತೆ ಕನ್ನಡಿಗರ ಮೇಲೆ ಹಲ್ಲೆ ಮಾಡಿದ್ದ ನಾಲ್ವರನ್ನು ಕೊನೆಗೂ ಸಂಕೇಶ್ವರ ಪೊಲೀಸರು ಬಂಧಿಸಿದ್ದಾರೆ. ಇದರಿಂದ ಕನ್ನಡ ಹೋರಾಟಗಾರರು ಕರೆ ನೀಡಿದ್ದ ಸಂಕೇಶ್ವರ ಬಂದ್ ಹಿಂದಕ್ಕೆ ಪಡೆಯಲಾಗಿದೆ. 

    ಕಳೆದ ಎರಡು ದಿನಗಳ ಹಿಂದೆ ಹುಕ್ಕೇರಿ ತಾಲೂಕಿನ ಅಂಕಲೆ ಗ್ರಾಮದಲ್ಲಿ ಹಾಕಲಾಗಿದ್ದ ಕನ್ನಡ ದ್ವಜ ಹಾಗೂ ಸಂಗೊಳ್ಳಿ ರಾಯಣ್ಣ ನಾಮಫಲಕ ತೆರವು ಮಾಡುವಂತೆ ಗ್ರಾಮದಲ್ಲಿನ ಇಬ್ಬರು ಕನ್ನಡ ಸಂಘಟನೆಯ ಯುವಕರ ಮೇಲೆ ಹಲ್ಲೆ ಮಾಡಲಾಗಿತ್ತು. 

     ಈ ಕುರಿತು ಸಂಕೇಶ್ವರದ ಪೊಲೀಸ ಠಾಣೆಯಲ್ಲಿ ಐದು ಜನರ ವಿರುದ್ದ ದೂರು ಕೂಡಾ ದಾಖಲಾಗಿತ್ತು. ಐವರಲ್ಲಿ ಅದೇ ದಿನ ಪೊಲೀಸರು ಓರ್ವನನ್ನು ವಶಕ್ಕೆ ಪಡೆದಿದ್ದರು. ಇನ್ನೂಳಿದ ನಾಲ್ವರು ಫರಾರಿಯಾಗಿದ್ದರು. 

    ಇದರ ವಿರುದ್ದ ಕನ್ನಡಿಗರು ಹೋರಾಟ ಮಾಡಿ ಶುಕ್ರವಾರ ಸಂಜೆ ವರೆಗೆ ಇನ್ನೂಳಿದವರನ್ನು ಬಂಧಿಸುವಂತೆ ಗಡವು ನೀಡಿದ್ದರು. ಇಲ್ಲದೆ ಹೋದಲ್ಲಿ ಸಂಕೇಶ್ವರ ಬಂದ್ ಮಾಡುವ ಬಗ್ಗೆ ನಿರ್ಣಯ ಕೈಗೊಂಡಿದ್ದರು. 

   ಆದರೆ ಇಂದು ಎಲ್ಲ ಹಲ್ಲೆಕೋರರನ್ನು ಪೊಲೀಸರು ಬಂಧಿಸಿದ ಹಿನ್ನೆಲೆಯಲ್ಲಿ ಸಂಕೇಶ್ವರ ಬಂದ್ ಹಿಂದಕ್ಕೆ ಪಡೆಯಲಾಗಿದೆ. ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹಿಂಡಲಗಾ ಜೈಲಿಗೆ ರವಾನೆ ಮಾಡಲಾಗಿದೆ ಎಂದು ತಿಳಿದಿದೆ.

ಹಲ್ಲೆಕೋರರ ಗಡಿಪಾರಿಗೆ ಒತ್ತಾಯ : 


  ಈ ಮೊದಲು ಶುಕ್ರವಾರ ಬೆಳಿಗ್ಗೆ ಕರವೇ ರಾಜ್ಯ ಸಂಚಾಲಕ ಮಹಾದೇವ ತಳವಾರ ಅವರ ನೇತೃತ್ವದಲ್ಲಿ ಕನ್ನಡ ಹೋರಾಟಗಾರರು ಜಿಲ್ಲಾಧಿಕಾರಿ ನಿತೀಶ್ ಪಾಟೀಲ ಹಾಗೂ ಜಿಲ್ಲಾ ಪೊಲೀಸ ವರಿಷ್ಠರ ಭೀಮಾಶಂಕರ ಗುಳೇದ ಅವರನ್ನು ಭೇಟಿ ಮಾಡಿ ಆರೋಪಿಗಳನ್ನು ಬಂಧಿಸಿ ಗಡಿಪಾರು ಮಾಡುವಂತೆ ಒತ್ತಾಯಿಸಿದ್ದರು.

   ಈ ಸಂದರ್ಭದಲ್ಲಿ ಕರವೇಯ ಗಣೇಶ ರೋಕಡೆ, ನ್ಯಾ. ವಿಕ್ರಮ ಕರನಿಂಗ, ಮಹೇಶ ಹಟ್ಟಿಹೊಳಿ, ಪ್ರಮೋದ ಹೊಸಮನಿ, ದಿಲೀಪ ಹೊಸಮನಿ, ಗಂಗಾರಾಮ ಭೂಸಗೋಳ, ಸಂತೋಷ ಮುಡಸಿ, ಅಭಿ ಹರಿಜನ, ರಾಹುಲ್ ವಾರಕರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸುದ್ದಿ ಓದಿ