ಪುರಸಭೆ ಅಧಿಕಾರಿಗಳ ದಾಳಿ,ನಿಷೇಧಿತ ಪ್ಲಾಟಿಕ್ ವಶ
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 12: ಪಟ್ಟಣದ ಕೊಟ್ಟೂರು ವೃತ್ತದ ಬಳಿವಿರುವ ಬೇಕರಿ ಹಾಗೂ ಕಿರಾಣಿ ಅಂಗಡಿಗಳ ಮೇಲೆ ಪುರಸಭೆಯ ಹಿರಿಯ ಆರೋಗ್ಯಧಿಕಾರಿ ಎಸ್.ಎಸ್.ಹಿರೇಮಠ್ ನೇತೃತ್ವದಲ್ಲಿ ದಾಳಿ ನಡೆಸಿ 20ಕೆ.ಜಿ.ಗೂ ಅಧಿಕ ನಿಷೇಧಿತ ಪ್ಲಾಸ್ಟಿಕ್ ಕವರ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಿಷೇಧಿತ ಪ್ಲಾಸ್ಟಿಕ್ ಬಳಸದಂತೆ ಅಂಗಡಿ ಮಾಲೀಕರಿಗೆ ತಾಕೀತು ಮಾಡಿದರು,ಸಾರ್ವಜನಿಕರು ಪ್ಲಾಸ್ಟಿಕ್ ಕವರ್ಗಳನ್ನು ಉಪಯೋಗಿಸಿದರೆ ಅಥವಾ ಅಂಗಡಿಗಳಿಂದ ನೀಡುವ ಪ್ಲಾಸ್ಟಿಕ್ ಕವರ್ಗಳನ್ನು ವಿರೋಧಿಸಿ ಪರಿಸರ ಸ್ನೇಹಿ ಪೇಪರ್ ಹಾಗೂ ಬಟ್ಟೆ ಬ್ಯಾಗ್ಗಳನ್ನು ನೀಡುವಂತೆ ತಿಳಿಸಿದರೆ ಕ್ರಮವಾಗಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬಹುದಾಗಿದೆ ಎಂದು ಹಿರಿಯ ಆರೋಗ್ಯ ನೀರಿಕ್ಷಕರಾದ ಎಸ್.ಎಸ್.ಹಿರೇಮಠ್ ತಿಳಿಸಿದರು.
ಪ್ಲಾಸ್ಟಿಕ್ ಬಳಕೆ ಮಾಡಿ ಎಲ್ಲಂದರಲ್ಲಿ ಎಸೆಯುವುದು ನೋಡಬಹುದಾಗಿದೆ, ಬಿಡಾಡಿ ದನಗಳು ಅದನ್ನು ಆಹಾರವಾಗಿ ತಿಂದು ಮೂಕ ಪ್ರಾಣಿಗಳು ಪ್ರಾಣಿ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣ ವಾಗುತ್ತಿದೆ, ಪ್ಲಾಸ್ಟಿಕ್ ಬಳಕೆಯನ್ನು ಮೊದಲು ಸಾರ್ವಜನಿಕರು ತ್ಯಜಿಸಬೇಕು, ಅಂಗಡಿ ಮುಂಗಟ್ಟುಗಳಿಗೆ ಹೋಗುವಾಗ ಕೈಚೀಲಗಳನ್ನು ಬಳಸಬೇಕು, ಪ್ಲಾಸ್ಟಿಕ್ ಬಳಕೆಯಿಂದ ಸುಂದರ ಪರಿಸರ ಕಲುಷಿತವಾಗುತ್ತದೆ, ಪ್ಲಾಸ್ಟಿಕ್ ಮಾರಾಟಗಾರರು ಪೇಪರ್ ಹಾಗೂ ಬಟ್ಟೆ ಬ್ಯಾಗ್ಗಳನ್ನು ಗ್ರಾಹಕರಿಗೆ ನೀಡುವಂತೆ ಸೂಚಿಸಿದರು.ಈ ಸಂಧರ್ಭದಲ್ಲಿ ನೈರ್ಮಲ್ಯ ಮೇಸ್ತ್ರಿ ವೀರಣ್ಣ ಇದ್ದರು.