ಚಿಮ್ಮಡ ಮತಗಟ್ಟೆಗೆ ಸಹಾಯಕ ಚುನಾವಣಾಧಿಕಾರಿ ಭೇಟಿ
ಮಹಾಲಿಂಗಪುರ 29: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಗ್ರಾಮದ ಮತಗಟ್ಟೆಗಳಿಗೆ ತೇರದಾಳ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಹಾಗೂ ವಿಶೇಷ ಜಿಲ್ಲಾಧಿಕಾರಿಗಳಾದ ಎಸ್. ಎಂ. ಮುಲ್ಲಾ ಭೇಟೀನೀಡಿ ಪರೀಶೀಲನೆ ನಡೆಸಿದರು.
ಚಿಮ್ಮಡಗ್ರಾಮದ ಸರಕಾರಿ ಪ್ರೌಢಶಾಲೆ ಮತ್ತು ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಗಳ ಮತಗಟ್ಟೆ ಕೇಂದ್ರಗಳಿಗೆ ಭೇಟೀನೀಡಿ ಅಲ್ಲಿನ ಗಾಳಿ ಬೆಳಕು ಶೌಚಾಲಯ ವ್ಯವಸ್ಥೆ ಹಾಗೂ ಪೀಠೋಪಕರಣಗಳ ವ್ಯವಸ್ಥೆಗಳ ಕುರಿತು ಮಾಹಿತಿ ಪಡೆದರು.
ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಪೀಠೋಪಕರಣಗಳ ಕೊರತೆ, ಹಾಗೂ ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಮಳೆಗೆ ಸೋರುತ್ತಿರುವ ಕುರಿತು ಮಹಿತಿ ಪಡೆದು ಅವುಗಳ ಪರಿಹಾರ ಇಲ್ಲವೇ ಪರ್ಯಾಯ ವ್ಯವಸ್ಥೆ ಕೈಗೊಳ್ಳುವ ಕುರಿತು ವರದಿ ಸಲ್ಲಿಸಲಾಗುವುದೆಂದು ಸಹಾಯಕ ಚುನಾವಣಾಧಿಕಾರಿ ಎಸ್. ಎಂ. ಮುಲ್ಲಾ ತಿಳಿಸಿದರು. ತೇರದಾಳ ವಿಭಾಗದ ಕಂದಾಯ ನೀರೀಕ್ಷಕ ಪಿ.ಆರ್. ಮಠಪತಿ, ಗ್ರಾಮ ಆಡಳಿತ ಅಧಿಕಾರಿ ಮಂಜುನಾಥ ನೀಲನ್ನವರ, ಅರಭಾಜ ಜಮಖಂಡಿ, ಪ್ರೌಢಶಾಲಾ ಮುಖ್ಯೋಪಾದ್ಯಾಯೆ ಶ್ರೀಮತಿ ಎಂ.ಎಸ್. ಜಿಟ್ಟಿ, ಬಿ.ಎಸ್. ಹಲಗಿ, ಎಪಿಎಂಸಿ ನಿರ್ದೆಶಕ ಪ್ರಭು ಮುಧೋಳ, ಪಿಕೆಪಿಎಸ್ ನಿರ್ದೆಶಕ ನಿಂಗಣ್ಣಾ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.