ಸಹಾಯಕ ಪ್ರಾಧ್ಯಾಪಕಿ ಡಾ: ಸರಸ್ವತಿ ಬಮ್ಮನಾಳ : "ಶಿಕ್ಷಣ ರತ್ನ" ಪ್ರಶಸ್ತಿಗೆ ಭಾಜನ
ರಾಣೆಬೆನ್ನೂರು 29: ಹಾವೇರಿ ಜಿಲ್ಲಾ ಕೇಂದ್ರದಲ್ಲಿ, ರಾಜ್ಯಮಟ್ಟದ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಸಮ್ಮೇಳನದಲ್ಲಿ ಇಲ್ಲಿನ ಆರ್ ಟಿ ಇ ಎಸ್ ಕಲಾ,ವಿಜ್ಞಾನ, ವಾಣಿಜ್ಯ ವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ, ಸಹಾಯಕ ಪ್ರಾಧ್ಯಾಪಕಿ ಡಾ: ಸರಸ್ವತಿ ಹೆಚ್. ಬಮ್ಮನಾಳ ಅವರ ಶಿಕ್ಷಣ ಕ್ಷೇತ್ರದ ಅಪ್ರತಿಮ ಸಾಧನೆ ಪರಿಗಣಿಸಿದ ವೇದಿಕೆಯು" ಕರುನಾಡ ಶಿಕ್ಷಣ ರತ್ನ" ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದರು. ಪ್ರಶಸ್ತಿ ಪುರಸ್ಕೃತರಾದ ಡಾ: ಸರಸ್ವತಿ ಬಮ್ಮನಾಳ ಅವರನ್ನು ಕಾಲೇಜಿನ ಅಧ್ಯಕ್ಷ ಡಾ:ಸಂಜಯ ಸಾವುಕಾರ, ಕಾರ್ಯದರ್ಶಿ ಶ್ರೀಮತಿ ಸೀತಾ ಕೋಟಿ, ಪ್ರಾಚಾರ್ಯ ಡಾ: ರಾಮರೇಡ್ಡಿ ರಡ್ಡೇರ, ಐ.ಕ್ಯೂ. ಎ.ಸಿ. ಸಂಯೋಜಕ ಪ್ರವೀಣ್ ಎನ್. ಎ, ಮತ್ತು ಉಪನ್ಯಾಸಕರು ಸಿಬ್ಬಂದಿ ಅಭಿನಂದಿಸಿದ್ದಾರೆ.ಊ29ಖಓಖ03-ಓಇಘಖ. ಕಊಓಖಿಓ.