ಸಿಂಧಗಿ

ಅಮಾಯಕ ವ್ಯಕ್ತಿ ಮೇಲೆ ಹಲ್ಲೆ: ಕ್ರಮಕ್ಕೆ ಆಗ್ರಹಿಸಿ ಮನವಿ

ಅಮಾಯಕ ವ್ಯಕ್ತಿ ಮೇಲೆ ಹಲ್ಲೆ: ಕ್ರಮಕ್ಕೆ ಆಗ್ರಹಿಸಿ ಮನವಿ


ಸಿಂದಗಿ; ಕಲಬುರಗಿ ನಗರದಲ್ಲಿ ಕಳೆದ ಅ. 24ರಂದು ಸುಳ್ಳು ಮಾಹಿತಿ  ಹಿನ್ನಲೆಯಲ್ಲಿ ದುಂಡಪ್ಪ ಸಿದ್ದರಾಮ ಜಮಾದಾರ ಅವರ ಮೇಲೆ ಚೌಕ್ ಪೋಲಿಸ್ ಠಾಣೆಯ ಸಿಪಿಐ ಎಸ್, ಆರ್, ನಾಯಕ್ ಸೇರಿದಂತೆ 6 ಜನ ಪೊಲೀಸರು ಸೇರಿಕೊಂಡು ಅಪಹರಿಸಿ, ಕೊಲೆಗೆ ಯತ್ನಿಸಿ ಮಾರಾಣಾಂತಿಕ ಹಲ್ಲೆ ಮಾಡಿದ್ದು ಅವರ ಮೇಲೆ ಶಿಸ್ತಿನ ಕ್ರಮ ಜರುಗಿಸುವಂತೆ ಆಗ್ರಹಿಸಿ ತಳವಾರ ಪರಿವಾರ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳು ತಹಶೀಲ್ದಾರ ಸಂಜೀವಕುಮಾರ ದಾಸರ ಅವರ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು. 


       ತಳವಾರ ಪರಿವಾರ ಹಿತರಕ್ಷಣಾ ಸಮಿತಿಯ ಜಿಲ್ಲಾಧ್ಯಕ ಶಿವಾಜಿ ಮೆಟಗಾರ ಮಾತನಾಡಿ, ಜಮಾದಾರ ಅವರು ಕಲಬುರಗಿಗೆ ಮದುವೆ ಕಾರ್ಯಕ್ರಮದ ನಿಮಿತ್ಯ ಆಗಮಿಸಿದು,್ದ ಅಲ್ಲಿಂದ ಅವರು ತನ್ನ ಹೋಟೆಲಿನಲ್ಲಿ ಕೆಲಸ ಮಾಡುತ್ತಿದ್ದ ಮೈಹಿಬೂಬ ಎಂಬ ವ್ಯಕ್ತಿಗೆ ಕರೆದುಕೊಂಡು ಬರಲು ಸೇಡಂಗೆ ಹೋಗಿ  ಬರುವ  ಮಾರ್ಗಮಧ್ಯ ಮೂಡಬುಳ್ ಟೂಲ್ ಗೇಟ್ ಹತ್ತಿರ ವಾಹನಕ್ಕೆ ಅಡ್ಡಗಟ್ಟಿ ಚೌಕ್ ಠಾಣೆಯ ಸಿಪಿಐ ಶಶಿಕಾಂತ ನಾಯಕ್ ಹಾಗೂ 6 ಜನ ಪೊಲೀಸರು ಬಂದೂಕು ಹಚ್ಚಿ ಅವರೆಲ್ಲರ ಹತ್ತಿರ ಇರುವ ಮೋಬೈಲ್ ಪೋನುಗಳನ್ನು ಕಸಿದಿಕೋಡು ಸ್ವೀಚ್ ಆಫ್ ಮಾಡಿ. ನಂತರ ಸಿಪಿಐ ಅವರು ತಾವೇ ಸ್ಕಾರ​‍್ಿಯೋ ನಡಿಸಿಕೊಂಡು ಕಲಬುರಗಿ ನಗರದ ಎಪಿಎಮ್‌ಸಿ ಉಡಕ್ ಚೌಕ್ ಓಪಿ ಯಲ್ಲಿ ನಿಲ್ಲಿಸಿ. ನಿನ್ನ ಹತ್ತಿರ ವೇಪನ್ ಇದೆ ಎಂಬ ಮಾಹಿತಿ ಬಂದಿದೆ ಎಂದು ಹೇಳಿ ದುಂಡಪ್ಪ ಹಾಗೂ ಅವರ ಸಂಗಡ ಇರುವ ಸ್ನೇಹಿತರೆಲ್ಲರನ್ನು ಸೇರಿ ಅವನ ಸ್ಕಾರ​‍್ಿಯೋ ವಾಹನದ ಸಂಪೂರ್ಣ ತಪಾಸಣೆ ಮಾಡಿದ್ದಾರೆ ಅಲ್ಲಿ ಯಾವದೇ ವೇಪನ್ ಸಿಕ್ಕಿರುವದಿಲ್ಲ ಆದಾಗ್ಯೂ ಸಿಪಿಐ ಹಾಗೂ ಪೋಲಿಸರು ಸೇರಿ ದುಂಡಪ್ಪನಿಗೆ ಚಿತ್ರಹಿಂಸೆ ನೀಡಿ ಅಮಾನವೀಯವಾಗಿ ಮಾರಾಣಾಂತಿಕ ಹಲ್ಲೆ ಮಾಡಿ ನಮಗೆ ಸುಳ್ಳು ಮಾಹಿತಿ ನೀಡಿದ್ದರಿಂದ ನಾವು ಅನ್ಯಾಯವಾಗಿ ನಿನಗೆ ತಂದು ಹೊಡೆದಿದ್ದು. ತಪ್ಪಾಗಿ ಹೋಯಿತು ಈಗ ನಿಮ್ಮ ಮನೆಯವರನ್ನು ಕರೆಸಿ ಒಂದು ಸಹಿ ಮಾಡಿಸಿ ಹೋಗು ಎಂದು ಕಳಿಸಿದ್ದಾರೆ ಆದರೆ ಮಾರಾಣಾಂತೀಕವಾಗಿ ಹಲ್ಲೆಗೊಳಗಾದ ವ್ಯಕ್ತಿಯ ಕುಟುಂಬದವರು ವೈದ್ಯಕೀಯ ಚಿಕಿತ್ಸ್ಸೆಗೋಸ್ಕರ ಕಲಬುರಗಿಯ ಸರಕಾರಿ ಜೇಮ್ಸ್‌ ಆಸ್ಪತ್ರೆಯಲ್ಲಿ ದಾಖಾಲಿಸಿದ್ದಾಗ ಚಿಕಿತ್ಸೆ ಫಲಕಾರಿಯಾಗದೆ ಹೆಚ್ಚಿನ ಚಿಕಿತ್ಸೆಗೋಸ್ಕರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ ಅಲ್ಲಿನ ವೈದ್ಯರು ತಪಾಸಣೆ ಮಾಡಿ ಅಂಗಾಲಿಗೆ ಜೋರಾಗಿ ಪೆಟ್ಟಾಗಿರುವದರಿಂದ ಮೌಂಸವೆಲ್ಲ ನಿಷ್ಕ್ರೀಯವಾಗಿದೆ. ಆಪರೇಷನ್ ಮೂಲಕ ಮೌಂಸವೆಲ್ಲ ಕತ್ತರಿಸಿ ಪ್ಲಾಸ್ಟಿಕ್ ಸರ್ಜರಿ ಮಾಡಿದ್ದಾರೆ. ರಾಜ್ಯದಲ್ಲಿ ಅನೇಕ ದರೋಡೆ, ರೇಪ್, ಗ್ಯಾಂಗರೇಪ್ ನಂತಹ ಅನೇಕ ದುರ್ನಡೆತೆಗಳು ನಡೆಯುತ್ತಿವೆ ಅಂತಹ ಪ್ರಕರಣಗಳು ಯಾವದು ಬೆಳಕಿಗೆ ಬರುತ್ತಿಲ್ಲ ಯಾವುದೇ ತಪ್ಪು ಮಾಡದ ಮತ್ತು ಇಲ್ಲಿಯವರೆಗೆ ಯಾವದೇ ಠಾಣೆಯಲ್ಲಿ ಒಂದೆ ಒಂದು ಪ್ರಕರಣವಿಲ್ಲದ ಅಮಾಯಕನನ್ನು ಅಪಹರಿಸಿ, ಕೊಲೆಯತ್ನ ಮಾಡಿ, ಮಾರಾಣಾಂತೀಕವಾಗಿ ಹಲ್ಲೆ, ಮಾಡಿರುವ ಅಪರಾಧಿಗಳನ್ನು ಅಮಾನತ್ತುಗೊಳಿಸಿ ಉನ್ನತ ಮಟ್ಟದ ತನಿಖೆಗೆ ಒಳಪಡಿಸಿ ಅನ್ಯಾಯಕ್ಕೆ ಒಳಗಾದ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಹೋರಾಟಗಳನ್ನು ಕೈಗೊಳ್ಳಬೇಕಾಗುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು. 

      ಈ ಸಂದರ್ಭದಲ್ಲಿ ಸಂತೋಷ ಮಣಿಗೆರಿ, ಈರಣ್ಣಾ ಕುರಿ, ಭರತ ಜೆರಟಗಿ, ಮಹಾಂತೇಶ ನಾಯ್ಕೋಡಿ, ಸಂಗು ಬಿರಾದಾರ, ಭೀಮಾಶಂಕರ ಮೋರಟಗಿ, ಬಸವರಾಜ ಹರನಾಳ, ರವಿ ನಾಯ್ಕೋಡಿ, ರವಿ ವಾಲಿಕಾರ ಸೇರಿದಂತೆ ಹಲವರು ಇದ್ದರು.   


ಸುದ್ದಿ ಓದಿ