ರಾಷ್ಟ್ರೀಯ

ಅಸ್ಸಾಂ; ಶಸ್ತ್ರಾಸ್ತ್ರ ಸಮೇತ ೧. ೫೦೦ ಬಂಡುಕೋರರ ಶರಣಾಗತಿ

ಅಸ್ಸಾಂ;  ಶಸ್ತ್ರಾಸ್ತ್ರ ಸಮೇತ  ೧. ೫೦೦ ಬಂಡುಕೋರರ ಶರಣಾಗತಿ

ಗೌಹಾಟಿ, ಜ ೩೦ ನ್ಯಾಷನಲ್  ಡೆಮಾಕ್ರಟಿಕ್  ಫ್ರಂಟ್  ಆಫ್  ಬೊಡೊಲ್ಯಾಂಡ್ ( ಎನ್  ಡಿ ಎಫ್ ಬಿ)ಯ  ಎಲ್ಲ  ನಾಲ್ಕು  ಬಣದ  ೧, ೫೦೦  ಕಾರ್ಯಕರ್ತರು  ಗೌಹಾಟಿಯಲ್ಲಿ ಗುರುವಾರ ನಡೆದ  ಸಮಾರಂಭದಲ್ಲಿ ತಮ್ಮ ಶಸ್ತ್ರಾಸ್ತ್ರಗಳ  ಸಮೇತ  ಶರಣಾಗಿದ್ದಾರೆ.ಕಳೆದ ಸೋಮವಾರ ಬೋಡೋ ವಿವಾದ ಪರಿಹರಿಸುವ ನಿಟ್ಟಿನಲ್ಲಿ ನಿಷೇಧಿತ ಬಂಡುಕೋರ ಸಂಘಟನೆ ಎನ್ ಡಿಎಫ್ ಬಿ, ಎ ಬಿ ಎಸ್ ಯು ಸಂಘಟನೆ ಜತೆಗಿನ  ತ್ರೀಪಕ್ಷೀಯ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಿದ್ದ ನಂತರ  ಈ ಬೆಳವಣೆಗೆ ನಡೆದಿದೆ.

ಮುಖ್ಯಮಂತ್ರಿ  ಸರ್ಬಾನಂದ  ಸೊನೋವಾಲ್ , ಹಣಕಾಸು ಸಚಿವ  ಹಿಮಂತ  ಬಿಸ್ವಾ ಶರ್ಮಾ  ಅವರ ಸಮ್ಮುಖದಲ್ಲಿ ನಡೆದ  ಪ್ರಮುಖ ಸಮಾರಂಭದಲ್ಲಿ   ತ್ರೀಪಕ್ಷೀಯ ಶಾಂತಿ ಒಪ್ಪಂದಂತೆ  ಬೊಡೊಲ್ಯಾಂಡ್   ಭೂ ಪ್ರದೇಶದ ಅಭಿವೃದ್ದಿಗೆ  ಮುಂದಿನ ಮೂರು ವರ್ಷಗಳಲ್ಲಿ  ೧.೫೦೦ ಕೋಟಿ ರೂಪಾಯಿ  ಹಣಕಾಸು  ಪ್ಯಾಕೇಜ್ ಪ್ರಕಟಿಸಲಾಗಿದೆ.೨೭ ವರ್ಷಗಳಿಂದ  ಪ್ರತ್ಯೇಕ ಬೋಡೋ ಲ್ಯಾಂಡ್ ಗಾಗಿ ಹೋರಾಟ ನಡೆಸುತ್ತಿದ್ದ ಅಸ್ಸಾಂನ ಬೋಡೋ ಜನರ ಬೇಡಿಕೆ ಈಡೇರಿಕೆ  ಸಂಬಂಧ  ಸೋಮವಾರ  ದೆಹಲಿಯಲ್ಲಿ  ತ್ರೀಪಕ್ಷೀಯ  ಒಪ್ಪಂದಕ್ಕೆ  ಸಹಿ ಹಾಕುವ ಮೂಲಕ  ತಾರ್ಕಿಕ ಅಂತ್ಯಕ್ಕೆ ನಾಂದಿ ಹಾಡಲಾಗಿತ್ತು.

ಪ್ರತ್ಯೇಕ  ಬೊಡೊಲ್ಯಾಂಡ್  ರಾಜ್ಯ  ಬೇಡಿಕೆಗೆ ಆಗ್ರಹಿಸಿ ನಡೆದ  ಹಿಂಸಾತ್ಮಾಕ ಹೋರಾಟದಲ್ಲಿ  ನೂರಾರು  ಮಂದಿ ಮೃತಪಟ್ಟಿದ್ದರು. ೧೯೯೩ರಲ್ಲಿ  ಆಲ್ ಬೊಡೊ ಸ್ಟೂಡೆಂಟ್ಸ್  ಯೂನಿಯನ್ ? ಎಬಿಎಸ್ ಯು ಹಾಗೂ  ಬೊಡೊ ಪೀಪಲ್ಸ್   ಕ್ರಿಯಾ ಸಮಿತಿ ನಡುವೆ  ಮೊದಲ ಬೊಡೊ ಒಪ್ಪಂದಕ್ಕೆ ಸಹಿ ಹಾಕಿತ್ತು.೨೦೦೩ರಲ್ಲಿ  ನಾಲ್ಕು ಜಿಲ್ಲೆಗಳನ್ನು  ಒಳಗೊಂಡ  ಬೊಡೊ ಲ್ಯಾಂಡ್   ಟೆರಿಟೊರಿಯಲ್ ಕೌನ್ಸಿಲ್ ? ಬಿಟಿಸಿ  ರಚನೆಗೆ  ಅನುವುಮಾಡಿಕೊಡುವ ಸಂಬಂಧ  ಬೊಡೊ  ಲಿಬರೇಷನ್  ಟೈಗರ್  ಬಂಡಕೋರ ಸಂಘಟನೆಯೊಂದಿಗೆ  ಎರಡನೇ  ಬೊಡೋ ಒಪ್ಪಂದಕ್ಕೆ ಸಹಿಹಾಕಲಾಗಿತ್ತು.


ಸುದ್ದಿ ಓದಿ