ಮಹಲಿಂಗಪುರ

ದುಷ್ಟಶಕ್ತಿ ನಿಗ್ರಹ ಮತ್ತು ಕಂಟಕ ನಿವಾರಣೆಗಾಗಿ ಅಷ್ಟಲಿಂಗ ನೈವೇದ್ಯ: ಮಹಾಲಿಂಗೇಶ್ವರ ಶ್ರೀ

ದುಷ್ಟಶಕ್ತಿ ನಿಗ್ರಹ ಮತ್ತು ಕಂಟಕ ನಿವಾರಣೆಗಾಗಿ ಅಷ್ಟಲಿಂಗ ನೈವೇದ್ಯ: ಮಹಾಲಿಂಗೇಶ್ವರ ಶ್ರೀ

ಮಹಾಲಿಂಗಪುರ 21 : ಶತಮಾನಗಳ "ಂದೆ ದುಷ್ಟಶಕ್ತಿಗಳ ಪ್ರಭಾವದಿಂದ ರೋಗ ರಜಿನಗಳು, ಖಾುಲೆಗಳಿಂದ ಜರ್ಜರಿತರಾದ ಜನ ಪವಾಡ ಪುರುಷ ಮಹಾಲಿಂಗೇಶ್ವರರಲ್ಲಿ ಮೊರೆಹೋದಾಗ ಅಂದು ಭಕ್ತರನ್ನು ಕಾಪಾಡಲು ಯಾವುದೇ ದುಷ್ಟಶಕ್ತಿ ಪುರದೊಳಗೆ ಪ್ರವೇಶಿಸದಂತೆ ತಡೆಗಟ್ಟಲು ಪುರದ ಸುತ್ತ ಅಷ್ಟಲಿಂಗ ಮುದ್ರೆಗಳನ್ನು ಸ್ಥಾಪಿಸಿದ್ದು, ಅಂದಿನಿಂದ ಇಂದಿನವರೆಗೂ ವರ್ಷಕ್ಕೊಮ್ಮೆ ಅಷ್ಟಲಿಂಗ ಮುದ್ರೆಗಳಿಗೆ ನೈವೇದ್ಯ ಅರ​‍್ಿಸಲಾಗುತ್ತಿದೆ, ಅದನ್ನು ದುಷ್ಟ ಶಕ್ತಿಗಳ ನೈವೇದ್ಯ ಎಂದೂ ಕರೆಯಲಾಗುತ್ತಿದೆ  ಎಂದು ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾ"ುಗಳು ಹೇಳಿದರು. 

ಶುಕ್ರವಾರ ಸಂಜೆ ಮಹಾಲಿಂಗೇಶ್ವರರ ದೇವಸ್ಥಾನದಲ್ಲಿ ಜರುಗಿದ ಅಷ್ಟಲಿಂಗ ಪರುವ (ಪರ್ವ) ವೈವೇದ್ಯ ಪೂಜೆ ನೆರವೇರಿಸಿ ಮಾತನಾಡಿದರು. 

ದುಷ್ಟಶಕ್ತಿಗಳ ನಿಗ್ರಹ ಹಾಗೂ ಕಂಟಕ ನಿವಾರಣೆಗಾಗಿ ಮತ್ತು ಊರಿನ ಶಾಂತಿ ಸಮೃಧ್ಧಿಗಾಗಿ ಮಹಾಲಿಂಗೇಶ್ವರರು ಊರಿನ ಅಷ್ಟದಿಕ್ಕುಗಳಲ್ಲೂ ಅಷ್ಟಲಿಂಗಗಳನ್ನು ಸ್ಥಾಪಿಸಿ ಮಹಾಲಿಂಗಪುರ ಮತ್ತು ಸುತ್ತಮುತ್ತಲಿನ ಊರುಗಳ ಸುಖ, ಶಾಂತಿ, ಸಮೃದ್ಧಿಗೆ ಹಾರೈಸಿದ್ದು ಅಂದಿನಿಂದ ಇಂದಿನವರೆಗೂ ಪ್ರತಿ ವರ್ಷ ಕಾರಹುಣ್ಣಿಮೆಯ "ಂದಿನ ಗುರುವಾರ ಪೀಠಾಧಿಪತಿಗಳ ನೇತೃತ್ವದಲ್ಲಿ ಪರ್ವ ಆಚರಿಸಿಕೊಂಡು ಬರುತ್ತಿದ್ದಾರೆ. 

ಭಕ್ತರು ಮತ್ತು ಸೇವಕರ ಮನೆಗಳಿಂದ ದವಸ, ಧಾನ್ಯ ಸಂಗ್ರ"ಸಿ, ಶ್ರೀಮಠದಲ್ಲಿಯೇ ಪ್ರಸಾದ ತಯಾರಿಸಿ ಶ್ರೀಗಳು ಪೂಜೆ ಸಲ್ಲಿಸಿದ ನಂತರ ಊರಿನ 18 ದೇವಸ್ಥಾನಗಳಿಗೂ ತೆರಳಿ ಸ್ತ್ರೀದೇವತೆಗಳಿಗೆ ಉಡಿತುಂಬಿ, ಪುರುಷ ದೇವತೆಗಳಿಗೆ ಬಟ್ಟೆ ಏರಿಸಿ ಎಡೆ ಕೊಟ್ಟು ನಂತರ ಅಷ್ಟದಿಕ್ಕುಗಳಲ್ಲಿರುವ ಲಿಂಗಮುದ್ರೆಗಳತ್ತ ದಾರಿಯುದ್ದಕ್ಕೂ ಎಡೆ ಚೆಲ್ಲುತ್ತಾ ಲಿಂಗ ಮುದ್ರೆಗಳಿಗೆ ಎಡೆ ಏರಿಸಿ ನಂತರ ಭೂ"ುಗೆ ಎಡೆ ಸಮರ​‍್ಿಸಲಾಗುತ್ತದೆ, ಇದರಿಂದ ಊರಿಗೆ ಯಾವುದೇ ದುಷ್ಟಶಕ್ತಿಗಳ ವಕ್ರ ದ್ಟೃಯೂ ಬೀಳದೇ ಸುಖ ಶಾಂತಿ ಸಮೃದ್ಧಿ ನೆಲೆಸುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ ಎಂದರು. 

ಯಲ್ಲನಗೌಡ ಪಾಟೀಲ, ಕೃಷ್ಣಗೌಡ ಪಾಟೀಲ, ಯಲ್ಲಪ್ಪ ಹಟ್ಟಿ, "ಜು ಕುಳ್ಳೊಳ್ಳಿ, ಗಂಗಪ್ಪ ಮೇಟಿ, ಈಶ್ವರ ಮಠದ, ಶ್ರೀಶೈಲ ಮಠದ, ಸಿದ್ಧಯ್ಯ ಮಠದ, ಈಶ್ವರ​‍್ಪ ಹಲಗಣಿ, ಸುಭಾಸ್ ವಜ್ರಮಟ್ಟಿ ಇತರರಿದ್ದರು.  

ಸುದ್ದಿ ಓದಿ