ಸಿಂಧಗಿ

ಅಶೋಕ ಮನಗೂಳಿ ನಿರ್ಧಾರ ಸ್ವಾಗತಾರ್ಹ: ವಿಜಯಕುಮಾರ

ಅಶೋಕ ಮನಗೂಳಿ ನಿರ್ಧಾರ ಸ್ವಾಗತಾರ್ಹ: ವಿಜಯಕುಮಾರ
ವಿಜಯಕುಮಾರ ಯಾಳವಾರ

ಸಿಂದಗಿ10 : ಜಾತ್ಯಾತೀತ ಜನತಾದಳ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಮಾಜಿ ಸಚಿವ ಎಂ.ಸಿ.ಮನಗೂಳಿಯವರ ಪುತ್ರ ಅಶೋಕ ಮನಗೂಳಿಯವರ ನಿರ್ಧಾರ ಸ್ವಾಗತಾರ್ಹ ಎಂದು ಕಾಂಗ್ರೆಸ್ ಪಕ್ಷದ ಸಿಂದಗಿ ತಾಲೂಕ ಹಿಂದುಳಿದ ವರ್ಗಗಳ ಸಮಿತಿಯ ಅಧ್ಯಕ್ಷ ವಿಜಯಕುಮಾರ ಯಾಳವಾರ ಹೇಳಿದರು.

ಪತ್ರಿಕಾ ಹೇಳಿಕೆ ನೀಡಿದ ಅವರು, ಮಾಜಿ ಶಾಸಕ ಎಮ್.ಸಿ ಮನಗೂಳಿ ರವರ ನಿಧನದಿಂದ ತೆರವಾದ ಸಿಂದಗಿ ಮತಕ್ಷೇತ್ರದ ಉಪ ಚುನಾವಣೆಯ ಪ್ರಕ್ರೀಯೆಗಳು ಚುರುಕೊಂಡಿರುವುದರ ಕುರಿತು ವಿವರಣೆ ನೀಡಿದರಲ್ಲದೇ ಮತ್ತು  ಇಡೀ ವಿಜಯಪುರ ಜಿಲ್ಲೆಯಲ್ಲೇ ಅತೀ ಹಿಂದುಳಿದ ಸಮುದಾಯದ ಜನರು ವಾಸಿಸುವ ಮತಕ್ಷೇತ್ರ ಅಂದರೆ ಅದು ಸಿಂದಗಿ. ಹಾಗಾಗಿ ಈ ಬಾರಿ ನಡೆಯುವ ಉಪಚುನಾವಣೆಯಲ್ಲಿ ಸಾಮಾಜಿಕ ನ್ಯಾಯದಡಿ ಹಿಂದುಳಿದ ವರ್ಗದ ಪ್ರಭಲ ಆಕಾಂಕ್ಷಿಯಾದ ಮಾಜಿ ಶಾಸಕ ಶರಣಪ್ಪ ಸುಣಗಾರವರಿಗೆ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯೆಂದು ಘೋಷಿಸಬೇಕೆಂದು ಪಕ್ಷದ ಮುಖಂಡರಲ್ಲಿ ಒತ್ತಾಯಿಸುತ್ತೇನೆ ಅಧ್ಯಕ್ಷ ವಿಜಯಕುಮಾರ ಎಂದರು.


ಸುದ್ದಿ ಓದಿ