ಬೆಳಗಾವಿಯ ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ ಅವರಿಗೆ ಬೆಂಗಳೂರಿನಲ್ಲಿ 'ಗಡಿನಾಡ ಚೇತನ' ಪ್ರಶಸ್ತಿ ಪ್ರಧಾನ

ಬೆಳಗಾವಿಯ ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ ಅವರಿಗೆ ಬೆಂಗಳೂರಿನಲ್ಲಿ 'ಗಡಿನಾಡ ಚೇತನ' ಪ್ರಶಸ್ತಿ ಪ್ರಧಾನ

ಬೆಳಗಾವಿ : ಕರ್ನಾಟಕ ಏಕೀಕರಣದ ವೀರಾಗ್ರಣಿ ಡಾ. ಜಯದೇವತಾಯಿ ಲಿಗಾಡೆ  ಅವರ ಹೆಸರಿನಲ್ಲಿ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರವು ನೀಡುವ "ಗಡಿನಾಡ ಚೇತನ" ಪ್ರಶಸ್ತಿಯನ್ನು ಬೆಳಗಾವಿಯ ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ ಅವರಿಗೆ ಬೆಂಗಳೂರಿನಲ್ಲಿ ನೀಡಿ ಗೌರವಿಸಲಾಯಿತು.

    ಗುರುವಾರ ಫೆಬ್ರುವರಿ 2ರಂದು ಸಂಜೆ 6.30ಕ್ಕೆ ಬೆಂಗಳೂರಿನ ಗಾಂಧೀ ಭವನದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಶೋಕ ಚಂದರಗಿ ಅವರಿಗೆ ಈ ಪ್ರಶಸ್ತಿ ಪ್ರಧಾನ ಮಾಡುವ ಮೂಲಕ ಗೌರವಿಸಿದರು. ಈ ಸಂದರ್ಭದಲ್ಲಿ ಙ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಚಂದ್ರಶೇಖರ ಕಂಬಾರ, ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ, ಮತ್ತೊರ್ವ ಪ್ರಶಸ್ತಿ ವಿಜೇತ ಎಮ್.ಎಸ್.ಸಿಂಧೂರ, ಮಾಜಿ ಸಚಿವರಾದ ಶ್ರೀಮತಿ ರಾಣಿ ಸತೀಶ, ಶ್ರೀಮತಿ ಲೀಲಾದೇವಿ ಪ್ರಸಾದ, ಕಾಸರಗೋಡು ಎಡೆನೀರು ಮಠದ ಪ್ರತಿನಿಧಿ, ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತಿಹಳ್ಳಿ ಅವರು ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.


ಸುದ್ದಿ ಓದಿ