ಸಿ.ಟಿ.ಇ ಸಂಸ್ಥೆಯಲ್ಲಿ ಭಕ್ತಿಭಾವದಿಂದ ಆಷಾಢ ಏಕಾದಶಿ ಆಚರಣೆ; ದಿಂಡಿ, ಪಲ್ಲಕ್ಕಿ ಮೆರವಣಿಗೆಗೆ ಮೆರುಗುವಿಠ್ಠಲ ನಾಮಸ್ಮರಣೆ
ಚಿಕ್ಕೋಡಿ 25 : ಇಲ್ಲಿನ ಸಿ.ಟಿ.ಇ. ಸಂಸ್ಥೆಯ ಅಂಗಸಂಸ್ಥೆಗಳಾದ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆ, ಆಂಗ್ಲ ಮಾಧ್ಯಮ ಶಾಲೆ, ಆರಿ್ಡ. ಪ್ರೌಢ ಶಾಲೆ, ಡಿ.ಕೆ. ಶಹಾ ಪ್ರಾಥಮಿಕ ಶಾಲೆ ಹಾಗೂ ಆರ್.ಎಂ. ಬಾಲಿಕಾ ಪ್ರೌಢ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ಆಷಾಢ ಏಕಾದಶಿ ಅಂಗವಾಗಿ ದಿಂಡಿ ಹಾಗೂ ಪಲ್ಲಕ್ಕಿ ಮೆರವಣಿಗೆಯನ್ನು ಭಕ್ತಿಭಾವದಿಂದ ಅದ್ದೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಸಂಸ್ಥೆಯ ಜಂಟಿ ಕಾರ್ಯದರ್ಶಿಗಳು ಹಾಗೂ ಶಾಲೆಯ ಆಡಳಿತಾಧಿಕಾರಿಗಳಾದ ಡಾ. ಎಂ.ಎಸ್. ದೇಶಪಾಂಡೆ ಚಾಲನೆ ನೀಡಿದರು. ಮಲಿಕವಾಡದಿಂದ ಆಗಮಿಸಿದ್ದ ವಾರ್ಕರಿ ಸಮೂಹದೊಂದಿಗೆ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ಉತ್ಸಾಹದಿಂದ ಭಾಗವಹಿಸಿದರು.
ವಿದ್ಯಾರ್ಥಿಗಳು ವಿಠ್ಠಲ, ರುಕ್ಮಿಣಿ, ಸಂತ ಜ್ಞಾನೇಶ್ವರ, ಸಂತ ತುಕಾರಾಮ ಸೇರಿದಂತೆ ವಿವಿಧ ಸಂತರು ಹಾಗೂ ವಾರ್ಕರಿಗಳ ವೇಷಭೂಷಣ ಧರಿಸಿ ಭಜನೆ, ಕೀರ್ತನೆ ಹಾಗೂ ವಿಠ್ಠಲ ನಾಮಸ್ಮರಣೆಯೊಂದಿಗೆ ದಿಂಡಿ ನಡೆಸಿದರು. ಸುಂದರವಾಗಿ ಅಲಂಕರಿಸಲಾದ ಪಲ್ಲಕ್ಕಿಯನ್ನು ಶಾಲಾ ಆವರಣದಿಂದ ಮಹಾವೀರ ವೃತ್ತದವರೆಗೆ ಹಾಗೂ ಶಾಲಾ ಮೈದಾನದಲ್ಲಿ ಮೆರವಣಿಗೆ ನಡೆಸಿ ಭಕ್ತಿಯ ವಾತಾವರಣ ಸೃಷ್ಟಿಸಿದರು. ಈ ಸಂದರ್ಭದಲ್ಲಿ ವಾರ್ಕರಿ ಸಮೂಹದ ಸದಸ್ಯ ಸಂತೋಷ ವಾಳಕೆ ಅವರು ಆಷಾಢ ಏಕಾದಶಿಯ ಮಹತ್ವ, ಭಾರತೀಯ ಸಂಸ್ಕೃತಿ, ಭಕ್ತಿ, ಶಿಸ್ತು ಹಾಗೂ ಸಾಮರಸ್ಯದ ಸಂದೇಶವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಪಿಯು ಕಾಲೇಜಿನ ಪ್ರಾಚಾರ್ಯ ಯು.ಎಸ್. ಶಿಂದೆ, ಮಹಿಳಾ ಕಾಲೇಜಿನ ಪ್ರಾಚಾರ್ಯ ಎಸ್.ಸಿ. ಜಕಾತಿ, ಬಿ.ಎಡ್. ಕಾಲೇಜಿನ ಪ್ರಾಚಾರ್ಯ ಸಿ.ವಿ. ಹಿರೇಮಠ, ಡಿ.ಕೆ. ಶಹಾ ಶಾಲೆಯ ಮುಖ್ಯೋಪಾಧ್ಯಾಯ ಆರಿ್ಪ. ದೊಡಮನಿ, ಆರಿ್ಡ. ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಜಿ.ಪಿ. ಇನಾಮದಾರ, ಆರ್.ಎಂ. ಬಾಲಿಕಾ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಎಚ್.ಎಸ್. ಕುಲಕರ್ಣಿ, ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಎ.ಪಿ. ಜೋಶಿ, ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಎಂ.ಎಸ್. ಮಲಾಬಾದೆ, ಡಿಗ್ರಿ ಕಾಲೇಜಿನ ಪ್ರಾಚಾರ್ಯ ಪ್ರಶಾಂತ್ ಜೋಶಿ, ಆರಿ್ಡ. ಪ್ರೌಢ ಶಾಲೆಯ ಆಡಳಿತಾಧಿಕಾರಿ ಬಿ.ಎ. ನೇಜೆ, ಆರ್.ಎಂ. ಬಾಲಿಕಾ ಪ್ರೌಢ ಶಾಲೆಯ ಆಡಳಿತಾಧಿಕಾರಿ ಎಂ.ಎಸ್. ದಳವಾಯಿ ಸೇರಿದಂತೆ ಸಂಸ್ಥೆಯ ಎಲ್ಲಾ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು.