ಮಹಲಿಂಗಪುರ

ಆಶಾ ಸಣಕಲ್ಲ್‌ ಸಬ್‌ಇನ್ಸ್‌ಪೆಕ್ಟರ್ ಆಗಿ ಆಯ್ಕೆ

ಆಶಾ ಸಣಕಲ್ಲ್‌ ಸಬ್‌ಇನ್ಸ್‌ಪೆಕ್ಟರ್ ಆಗಿ ಆಯ್ಕೆ


ಮಹಾಲಿಂಗಪೂರ 25: ಪಟ್ಟಣದ ಬುದ್ನಿ ಪಿಡಿ ನಿವಾಸಿಯಾದ ಭರತ. ಅಡಿವೆಪ್ಪ. ಸಣಕಲ್ ಅವರ ಮಗಳಾದ ಆಶಾ ಸಣಕಲ್ 57ನೇ ಶ್ರೇಣಿಯಲ್ಲಿ ಪಾಸಾಗಿ, ಪೊಲೀಸ್ ಇಲಾಖೆಗೆ ಸಬ್‌ಇನ್ಸ್‌ಪೆಕ್ಟರ್ ಆಗಿ ಆಯ್ಕೆಗೊಂಡಿರುವುದಕ್ಕೆ ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾ ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದೆ.  

ನಾಲ್ಕು ಜನ ಸಹೋದರಿಯರಲ್ಲಿ ಇವರು ಮೂರನೆಯವರು, ವರ್ಷಗಳ ಕೌಟುಂಬಿಕ ಜೀವನ, ಬತ್ತದ ಉತ್ಸಾಹದ ಜೊತೆಗೆ ತಮ್ಮ ವಿಧ್ಯಾಭ್ಯಾಸವನ್ನು ಮುಂದುವರೆಸಿ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುತ್ತಾ ಇವತ್ತು ತಾವು ಕಂಡ ಕನಸು ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗುವ ಮೂಲಕ ನೆರವೇರಿಸಿಕೊಂಡಿದ್ದಾರೆ.  

ಈ ನನ್ನ ಸಾಧನೆಗೆ ನನ್ನ ಪತಿ ಸುರೇಶ. ಫಕೀರ​‍್ಪ. ಮುರುಗೋಡ ಹಾಗೂ ಪರಿವಾರದ ಪ್ರತಿ ಸದಸ್ಯರು ತುಂಬಾ ಸಹಕಾರ ನೀಡಿದ್ದಾರೆ ಎಂದು ಅವರನ್ನು ಅಭಿನಂದಿಸುತ್ತ ಈ ಸಂದರ್ಭದಲ್ಲಿ ಆಶಾ ಅವರ ಸಹಕಾರವನ್ನು ನೆನೆಯುತ್ತಾರೆ. 

ರಾಜ್ಯಾಧ್ಯಕ್ಷ ವಿಷ್ಣು ಲಾತೂರ, ಕಾರ್ಯಧರ್ಶಿ ರಾಘವೇಂದ್ರ ನೀಲಣ್ಣವರ ಮತ್ತು ಸಮಾಜದ ಮುಖಂಡ ಮಹಾಲಿಂಗಪ್ಪ ಲಾತೂರ, ರಾಘವೇಂದ್ರ ನೀಲಣ್ಣವರ, ರಾಜು ಮುದುಕಪ್ಪಗೋಳ, ಸಂಗಪ್ಪ ಹಿಪ್ಪಲಕರ, ಗಣೇಶ್ ಪೂಜಾರಿ, ಮಹಾದೇವ ಜಗದಾಳ, ಲಕ್ಷ್ಮಣ ಹೊಸೂರ, ಶ್ರೀಶೈಲ ಸಿದ್ದಾಪುರ, ಅಲ್ಲಪ್ಪ ಹೆಗ್ಗಣ್ಣವರ, ವಿಠ್ಠಲ ಬಿರಾಜನವರ, ಮಹಾಲಿಂಗಪ್ಪ ಉಸಳಿ ಇನ್ನೂ ಮುಂತಾದವರು ಇವರ ಮಹತ್ತರ ಸಾಧನೆಯೊಂದಿಗೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಆಯ್ಕೆ ಹೊಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ. 


ಸುದ್ದಿ ಓದಿ