ಆಶಾ,ಅಂಗನವಾಡಿ ಕಾರ್ಯಕತರ್ೆಯರು ನಿಜವಾದ ಕೊರೊನಾ ಯೋಧರು: ಹುರಕಡ್ಲಿ
ಮಹಾಲಿಂಗಪುರ27: ಕೊರೋನಾ ಸಂಕಷ್ಟ ಕಾಲದಲ್ಲಿ ತಮ್ಮ ಕುಟುಂಬವನ್ನೂ ಲೆಕ್ಕಿಸದೆ ಅತೀ ಹತ್ತಿರದಿಂದ ಜನಸಾಮಾನ್ಯರ ನಿಜವಾದ ಸೇವೆ ಮಾಡುವ ಅಂಗನವಾಡಿ, ಆಶಾ ಕಾರ್ಯಕತರ್ೆಯರು ನಿಜವಾದ ಕೊರೊನಾ ಯೋಧರು, ಅವರನ್ನು ಗೌರವಿಸುವುದು ನಮ್ಮ ಸೌಭಾಗ್ಯ ಎಂದು ಪುರಸಭಾ ಮಾಜಿ ಉಪಾಧ್ಯಕ್ಷ ಹಾಗೂ ಸಿ.ಎಂ.ಹುರಕಡ್ಲಿ ಫೌಂಡೇಶನ್ ಅಧ್ಯಕ್ಷ ಚನ್ನಬಸು ಹುರಕಡ್ಲಿ ಹೇಳಿದರು.ಸ್ಥಳೀಯ ಬಸವನಗರದ ಸಮುದಾಯ ಭವನದಲ್ಲಿ ಫೌಂಡೇಶನ್ ವತಿಯಿಂದ ಮಹಾಲಿಂಗಪುರ, ಸುತ್ತಮುತ್ತಲಿನ 9 ಹಳ್ಳಿಗಳ ಅಂಗನವಾಡಿ ಮತ್ತು ಆಶಾ ಕಾರ್ಯಕತರ್ೆಯರಿಗೆ ಫೇಸ್ ಗಾಡರ್್, 20 ಲೀ.ನೀರಿನ ಕ್ಯಾನ್, ಕನೇರಿಮಠದ ಔಷಧಿ ಮಿಶ್ರಿತ ನೀರಿನ ಬಾಟಲ್, ಕಷಾಯ ಪುಡಿ, ಸ್ಯಾನಿಟೈಸರ್, ಮಾಸ್ಕ್ ವಿತರಿಸಿ ಮಾತನಾಡಿದರು.ಬಸಯ್ಯ ಚಟ್ಟಿಮಠ, ಬಸವರಾಜ ಗಿರಿಸಾಗರ, ಪ್ರಕಾಶ್ ಬಾಡನವರ, ಮಹಾದೇವ ಟಿರಿಕಿ,ಸದಾಶಿವ ಮುನ್ನೋಳಿ, ಅಶೋಕ ಹಿಕಡಿ, ಹವಾಲ್ದಾರ್ ಎಸ್.ಎನ್.ದಂಡಿನ, ಶಿವಶಂಕರ ಕಡಬಲ್ಲವರ, ಪರಶುರಾಮ ಲಮಾಣಿ,ಅರುಣಾ ಮೊಕಾಶಿ, ಮಹಾನಂದಾ ಗುಣಾರಿ, ಭಾರತಿ ಹಿಟ್ಟಿನಮಠ ಮತ್ತು ಅಂಗನವಾಡಿ ಅಲ್ಲದೆ ಆಶಾ ಕಾರ್ಯಕತರ್ೆಯರು ಇದ್ದರು. ಸಿ.ಎಂ.ಹುರಕಡ್ಲಿ ಫೌಂಡೇಶನ್ ವತಿಯಿಂದ ಮಹಾಲಿಂಗಪುರ ಮತ್ತು ಸುತ್ತಮುತ್ತಲಿನ 9 ಹಳ್ಳಿಗಳ ಅಂಗನವಾಡಿ ಮತ್ತು ಆಶಾ ಕಾರ್ಯಕತರ್ೆಯರಿಗೆ ಕೊರೊನಾ ಕಿಟ್ ವಿತರಿಸಲಾಯಿತು