ಮಹಲಿಂಗಪುರ

ಕಲಾವಿದ ಚೇತನ ರಚಿಸಿದ ಕಲಾಕೃತಿ ಮಹಾಲಿಂಗೇಶ್ವರ ಮಠಕ್ಕೆ ಕಾಣಿಕೆ

ಕಲಾವಿದ ಚೇತನ ರಚಿಸಿದ ಕಲಾಕೃತಿ ಮಹಾಲಿಂಗೇಶ್ವರ ಮಠಕ್ಕೆ ಕಾಣಿಕೆ

ಮಹಾಲಿಂಗಪುರ: ಪಟ್ಟಣದ ಆರಾಧ್ಯ ಧೈವ ಮಹಾಲಿಂಗೇಶ್ವರ ದೇವಸ್ಥಾನ ಕಲಾವಿದನ ಕೈಚಳಕದಲ್ಲಿ ಕಲಾಕೃತಿಯಾಗಿ, ಪ್ರತಿಕೃತಿಯಾಗಿ ಕಂಗೊಳಿಸುತ್ತಿದೆ. ಈ ವರ್ಷದ ಜಾತ್ರೆಗೆ ಮಠದ ಆವರಣದಲ್ಲಿ ವಿಶೇಷ ಆಕರ್ಷಣೆಯಾಗಿ ಭಕ್ತರ ಕಣ್ಮನ ಸೆಳೆದಿದೆ.

ಕೆಎಲ್ಇ ಪದವಿ ಕಾಲೇಜಿನಲ್ಲಿ ಬಿಎ ಓದುತ್ತಿರುವ ವಿದ್ಯಾಥರ್ಿ, ಹವ್ಯಾಸಿ ಕಲಾವಿದ ಚೇತನ ಕಪ್ಪಲಗುದ್ದಿ ಮಹಾಲಿಂಗೇಶ್ವರ ಜಾತ್ರೆ ನಿಮಿತ್ತ ಶ್ರೀಮಠದ ಕಲಾಕೃತಿ ರಚಿಸಿ ಮಠಕ್ಕೆ ವಿಶೇಷ ಕಾಣಿಕೆ ನೀಡಿದ್ದಾನೆ. ಬರೊಬ್ಬರಿ ಒಂದು ತಿಂಗಳ ಕಾಲ ಶ್ರಮ ವಹಿಸಿ ಥಮರ್ಾಕೂಲ್ನಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾದರಿ (ಪ್ರತಿಕೃತಿ) ತಯಾರಿಸಿ ಕೊಟ್ಟಿದ್ದಾರೆ.

ಮಹಾಲಿಂಗೇಶ್ವರ ಮಠದ ಪೂರ್ವ ಮಹಾದ್ವಾರ, ಉತ್ತರ ಮಾಹಾದ್ವಾರ ನೈರುತ್ಯದ ಹಿತ್ತಲ ದ್ವಾರ, ದಬರ್ಾರ್ ಸಭಾಮಂಟಪ, ಶ್ರೀಗಳ ಸನ್ನಿಧಿ ಕೊಠಡಿ, ಪೌಳಿಗಳು, ರಥ ಸೇರಿದಂತೆ ಮಠದ ಎಲ್ಲ ಆಯಾಮಗಳನ್ನು ನೈಜವೆಂಬಂತೆ ಅದೇ ಹೋಲಿಕೆ, ಅದೇ ಬಣ್ಣ, ಅದೇ ಮಾದರಿಯಲ್ಲಿ ಪ್ರತಿಕೃತಿ ರಚಿಸಿ ಜಾತ್ರೆಯ ಆರಂಭದ ಮುನ್ನಾದಿನ ಶ್ರೀಗಳಿಗೆ ಉಡುಗೊರೆಯಾಗಿ ನೀಡಿದ್ದಾನೆ.

ಹರ್ಷಗೊಂಡ ಶ್ರೀಗಳು ಕಲಾವಿದನ ಕೈಚಳಕಕ್ಕೆ ಫಿದಾ ಆಗಿ ಮಠದ ವತಿಯಿಂದ ಸನ್ಮಾನಿಸಿ ಅಭಿನಂದಿಸಿದ್ದಾರೆ. ಕಲಾಕೃತಿಯನ್ನು ಮಠದ ಆವರಣದ ಪೌಳಿಯೊಂದರಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದು ಸಾರ್ವಜನಿಕರು, ಭಕ್ತರು ನಿಂತು ನೋಡಿ ಫೋಟೋ ಕ್ಲಿಕ್ಕಿಸಿಕೊಂಡು ಕಲಾವಿದನ ಶ್ಲಾಘನೆ ಮಾಡುತ್ತಿದ್ದಾರೆ. 

***

ನಮ್ಮ ಕಾಲೇಜ್ ವಿದ್ಯಾರ್ಥಿ ಕಲಾವಿದ ಚೇತನ್ ಕಪ್ಪಲಗುದ್ದಿ ಯಾವುದೇ ಸಾರ್ವಜನಿಕ ವೇದಿಕೆಗಳಲ್ಲಿ ಲೈವ್ ಆಗಿ ಸಾಂಗ್ ಮುಗಿಯುವುದರೊಳಗೆ ಪುನೀತ್ ಭಾವಚಿತ್ರ ಚಿತ್ರಿಸಿ ಶಹಬ್ಬಾಸ್ಗಿರಿ ಪಡೆದಿದ್ದ. ಕಾಲೇಜ್ ವತಿಯಿಂದ ನಾನಾ ಕಲಾಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗೆದ್ದಿದ್ದಾನೆ. ಇತ್ತೀಚೆಗೆ ತನ್ನ ತಂಡದೊಂದಿಗೆ ಸೇರಿ ತಿಂಗಳ ಕಾಲ ಶ್ರಮಿಸಿ ಶ್ರೀಮಠದ ಕಲಾಕೃತಿ ರಚಿಸಿ ಸೈ ಎನಿಸಿಕೊಂಡಿದ್ದಾನೆ. ಮಠದಲ್ಲಿ ಪ್ರದರ್ಶನಕ್ಕಿಟ್ಟ ಕಲಾಕೃತಿ ಬಳಿ ಕಲಾಕೃತಿ ತಯಾರಿಕೆಯ ವೆಚ್ಚ ಭರಿಸಿದ ಸ್ನೇಹಿತನ ಹೆಸರು (ಶ್ರೀಧರ ಚವ್ಹಾಣ) ಮತ್ತು ಭಾವಚಿತ್ರ ಅಳವಡಿಸಿದ್ದಾನೆ. ಇಡೀ ಕಲಾಕೃತಿಯನ್ನು ತಮ್ಮ ಬಂಧುಗಳಾದ ಹಲಸಪ್ಪಗೋಳ ಮತ್ತು ಚೌಗಲಾ ಪರಿವಾರದ ವತಿಯಿಂದ ಮಠಕ್ಕೆ ಕಾಣಿಕೆ ನೀಡಿ ಸೌಜನ್ಯ ಮೆರೆದಿದ್ದಾನೆ.

 - ಶಿವಲಿಂಗ ಸಿದ್ನಾಳ ಉಪನ್ಯಾಸಕ ಕೆಎಲ್ಇ ಕಾಲೇಜ್ ಮಹಾಲಿಂಗಪುರ 


ಸುದ್ದಿ ಓದಿ