ಬಳ್ಳಾರಿ

ಪ್ರಸ್ತುತ ದಿನ ಮಾನಗಳಲ್ಲಿ ಕಲೆಗಳು ನಶಿಸಿ ಮೂಲೆ ಗುಂಪಾಗಿದ್ದಾವೆ: ಯಲ್ಲನಗೌಡ ಶಂಕರಬಂಡೆ

ಪ್ರಸ್ತುತ ದಿನ ಮಾನಗಳಲ್ಲಿ ಕಲೆಗಳು ನಶಿಸಿ ಮೂಲೆ ಗುಂಪಾಗಿದ್ದಾವೆ: ಯಲ್ಲನಗೌಡ ಶಂಕರಬಂಡೆ

ಬಳ್ಳಾರಿ: 22:  ರಂದು ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ಗುರುಪೂರ್ಣಿಮೆ ರಂಗ ಮಹೋತ್ಸವವನ್ನು ರಂಗನೇಸರ ಸಾಂಸ್ಕೃತಿಕ ಕಲಾ ಸಂಘ.ಎಂ.ಬಸಾಪುರರಿಂದ ಹಮ್ಮಿಕೊಳ್ಳಲಾಗಿತ್ತು. 

ಹಿಂದಿನ ಕಾಲದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಅತಿ ಹೆಚ್ಚಾಗಿ ಕಲೆ,ಸಾಹಿತ್ಯ, ನಾಟಕ,ತತ್ವಪದಗಳು,ಭಜನೆ,ಕುಣಿತ ಮತ್ತು ಬಳ್ಳಾರಿ ಗಂಡು ಮೆಟ್ಟಿನ ಕಲೆಯಾದ ಬಯಲಾಟಗಳನು ಕಾಣುತ್ತೀದ್ದೀವಿ.ಪ್ರಸ್ತುತ ದಿನ ಮಾನಗಳಲ್ಲಿ ಕಲೆಗಳು ನಶಿಸಿ ಮೂಲೆ ಗುಂಪಾಗಿದ್ದಾವೆ ಎಂದು ಉದ್ಘಾಟನಾ ಕಾರ್ಯಕ್ರಮ ನೇರವೇರಿಸಿದ ಡಿ ಸುಧಾಕರ್ ಪ್ರಾಂಶುಪಾಲರಾದ ಗಾಲಿ ರುಕ್ಮಿಣಮ್ಮ ಚೆಂಗಾರೆಡ್ಡಿ ಸರ್ಕಾರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಬಳ್ಳಾರಿ ಇವರು ಉದ್ಘಾಟಕರ ನುಡಿ ನುಡಿದರು.ಪ್ರಸ್ತುತ ದಿನಮಾನಗಳಲ್ಲಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಂಡು ಜನರಿಗೆ ಅರಿವು ಮೂಡಿಸುವಂತಹ ಇಂದಿನ ಯುವಶಕ್ತಿಗಳು ಮಾಡುತ್ತಿದ್ದಾರೆ ಎಂದು ಬಳ್ಳಾರಿ ಜಿಲ್ಲಾ ಕಲಾವಿದರು ಸಂಘದ ಅಧ್ಯಕ್ಷರು ಯಲ್ಲನಗೌಡ ಶಂಕರಬಂಡೆ ಪ್ರಸ್ತಾಪಿಸಿದರು. 

ರಂಗಭೂಮಿ ಕಲೆಗಳನ್ನು ಸತತವಾಗಿ ಬಳ್ಳಾರಿ ಜಿಲ್ಲೆಯಲ್ಲಿ ಸಕ್ರಿಯವಾಗಿ ಕಾರ್ಯಗತಗೊಳ್ಳುತ ಬರುತ್ತೀದ್ದೇವೆ.ಜನರಿಗೆ ಕಲೆ ಅಭಿರುಚಿಯನ್ನು ಉಣಬಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅಭಿನಯ ಕಲಾ ಕೇಂದ್ರದ ರಂಗ ನಿರ್ದೇಶಕರಾದ ಕೆ ಜಗದೀಶ್ ಮಾತಾಡಿದರು.ಶಾಲಾ ಕಾಲೇಜುಗಳಲ್ಲಿ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಂಡು ಮಕ್ಕಳಿಗೆ ಕಲೆ,ಸಾಹಿತ್ಯ ನಾಟಕದ ಬಗ್ಗೆ ಜನಪದ ಕಲೆಗಳು ಬಗ್ಗೆ ತಿಳಿಸಿಸುವುದರ ಮುಖಾಂತರ ಮಕ್ಕಳನ್ನು ರಂಗಭೂಮಿ ಕಡೆ ಸೆಳೆಯುವಂತಹ ಕೆಲಸ ಮಾಡಬೇಕು ಎಂದು ಸತ್ಯಂ ಶಿಕ್ಷಣ ಮಹಾವಿದ್ಯಾಲಯ ಪ್ರಾಂಶುಪಾಲರಾದ ಡಾ.ವಿ ಅಶ್ವರಾಮು ಹೇಳಿದರು.ರಂಗಭೂಮಿ ಕಲೆಗಳನ್ನು ಸಣ್ಣ ಸಣ್ಣ ಮನಸ್ಸುಗಳು ಇರುವಾಗಲೇ ಮಕ್ಕಳಿಗೆ ಪ್ರೇರಪಿಸುವಂತಹ ಕೆಲಸ ಮಾಡಬೇಕು. ಆಗ ಕಲೆಗಳ ಮಕ್ಕಳಿಗೆ ಅಭಿರುಚಿಯನ್ನು ನೀಡುತ್ತದೆ. ಬೌದ್ಧಿಕ ಮಟ್ಟ ಬೆಳದಂತೆ  ಕಲೆಗಳು ಬೆಳೆಸುವುದಕ್ಕೆ  ಸಹಕರಿಯಾಗುತ್ತದೆ ಎಂದು ಕನ್ನಡ ಉಪನ್ಯಾಸಕರಾದ ರಂಗನೇಸರ ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷರು ಅಧ್ಯಕ್ಷತೆ ಭಾಷಣದಲ್ಲಿ ಹೇಳಿದರು. 

ಸುಗಮ ಸಂಗೀತವನ್ನ ್ರ ಪುರುಷೋತ್ತಮ ಡಿ ಮತ್ತು ಯೋಗೀಶ್ ತಬಲಾ ಸಾಥಿ ನೀಡಿದರು. ಸಮೂಹ ನೃತ್ಯವನ್ನ ನೃತ್ಯ ಗುರುಗಳಾದ ಅಭಿಷೇಕ ಅವರ ನೃತ್ಯ ಸಂಯೋಜನೆಯಲ್ಲಿ ಲೋಕರಾಜ್ ಮತ್ತು ತಂಡ ಕುರುಗೋಡು. ಕಂಸಾಳೆಯನ್ನು ಕೆ ಶಂಕರ ಮತ್ತು ತಂಡ ಮೆಟ್ರಿ. ಡೊಳ್ಳು ಕುಣಿತ ಪ್ರಕಾಶ್ ಕೆ.ಪಿ ಮತ್ತು ತಂಡ ಹಾಗಲೂರು. ಪೌರಾಣಿಕ ಹಾಸ್ಯ ನಾಟಕ ಕೃಷ್ಣ ಸಂಧಾನ ಧಾತ್ರಿ ರಂಗ ಸಂಸ್ಥೆ ವತಿಯಿಂದ ಬಿ.ದೊಡ್ಡಬಸಪ್ಪ ಮತ್ತು ತಂಡ ಸೋಮುಸಮದ್ರ ಇವರಿಂದ ಅಭಿನಯಿಸಿದರು.ಕಾರ್ಯಕ್ರಮದಲ್ಲಿ ಶಿವಶರಣ ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಬಂಡಿಹಟ್ಟಿ. ಬಯಲಾಟ ಕಲಾವಿದರಾದ ತಿಪ್ಪೇಸ್ವಾಮಿ ಮುದ್ದಟ್ಟನೂರು.ರಂಗನೇಸರ ಸಾಂಸ್ಕೃತಿಕ ಕಲಾ ಸಂಘದ ಕಾರ್ಯದರ್ಶಿ ಚಂದ್ರಶೇಖರ ,ಅಸೂಟಿ ಶ್ರೀನಿವಾಸ,ಸ್ವಾಗತ ಕಾರ್ಯಕ್ರಮ ಕೆ ಹೇಮೇಶ್ವರ ನೇರವೇರಿಸಿದರು. ನಿರೂಪಣೆ ಕೆ ನಾಗರಾಜ್ ನೇರವೇರಿಸಿದರು. ಶ್ರೀ ಜಡೇಶ ಎಮ್ಮಿಗನೂರು ವಂದಿಸಿದರು. 


ಸುದ್ದಿ ಓದಿ