ಶಿಗ್ಗಾವ್

ಕಲೆಯು ಆನಂದ ಆಯುಷ್ಯವನ್ನು ಹೆಚ್ಚಿಸುತ್ತದೆ: ಡಾ. ಉಪಾಧ್ಯ

ಕಲೆಯು ಆನಂದ ಆಯುಷ್ಯವನ್ನು ಹೆಚ್ಚಿಸುತ್ತದೆ: ಡಾ. ಉಪಾಧ್ಯ

ಶಿಗ್ಗಾವಿ 20: ಕಲೆಯು ಆನಂದ ಆಯುಷ್ಯವನ್ನು ಹೆಚ್ಚಿಸುತ್ತದೆ, ದಿ ಟಿ ಬಿ ಸೊಲಬಕ್ಕನವರ ಅವರು ರಾಜ್ಯಾಧ್ಯಂತ ಶಿಲ್ಪಕಲೆಗಳನ್ನು ನಿರ್ಮಿಸಿ ನೋಡುಗರ ಆಯುಷ್ಯವನ್ನು ಹೆಚ್ಚಿಸುವ ಕೆಲಸ ಮಾಡಿದ್ದಾರೆ ಎಂದು ಮೈಸೂರಿನ ವಿಶ್ರಾಂತ ಡೀನ್ ಸಾಲಾ ಡಾ. ಡಿ ಎ ಉಪಾಧ್ಯ ಹೇಳಿದರು. 

ತಾಲೂಕಿನ ಗೊಟಗೋಡಿಯ ಧುಂಡಶಿ ರೋಡ್‌ನಲ್ಲಿರುವ ಶಿಲ್ಪ ಕಲಾ ಕುಟೀರದ ಆವರಣದಲ್ಲಿ ಕರ್ನಾಟಕ ದೊಡ್ಡಾಟ ಬಯಲಾಟ ಟ್ರಸ್ಟ್‌ನ ರೂವಾರಿ ದಿ. ಡಾ. ಟಿ ಬಿ ಸೊಲಬಕ್ಕನವರ ಅವರ ದ್ವಿತೀಯ ಪುಣ್ಯ ಸ್ಮರಣೆ ಅಂಗವಾಗಿ ಹಮ್ಮಿಕೊಂಡ ನಿಲ್ಲದು ಕಲಾಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಲಾ ಸಾಮ್ರಾಟ್ ಟಿ ಬಿ ಸೋಲಬಕ್ಕನವರ ಬಗ್ಗೆ ಪಠ್ಯದಲ್ಲಿ ವಿಷಯ ಅಳವಡಿಸಬೇಕು ಅವರ ಹೆಸರಲ್ಲಿ ಪ್ರಶಸ್ತಿಗಳನ್ನು ನೀಡಬೇಕು ಎಂದರು. 

ಹಾವೇರಿಯ ಹಂಚಿನಮನಿ ಆರ್ಟ್‌ ಗ್ಯಾಲರಿಯ ಸಂಸ್ಥಾಪಕ ಕರಿಯಪ್ಪ ಹಂಚಿನಮನಿ ಮಾತನಾಡಿ ಸೊಲಬಕ್ಕನವರ ವ್ಯಕ್ತಿಯಲ್ಲ ಅವರು ಶಕ್ತಿ, ಈ ಗ್ರಾಮವನ್ನು ವಿಶ್ವ ಮಟ್ಟಕ್ಕೆ ಮುಟ್ಟಿಸುವ ಕೆಲಸ ಮಾಡಿದ್ದಾರೆ, ಯುವ ಕಲಾವಿದರಿಗೆ ಸ್ಪೂರ್ತಿಯ ಮಾಧರಿ ವ್ಯಕ್ತಿ ಅವರು,  

ಅವರು ಶಿಲ್ಪಕ್ಕೆ ಸೀಮಿತ ಅಲ್ಲ ಸಾಂಸ್ಕೃತಿಕ ರಾಯಭಾರಿ, ಯಕ್ಷಗಾನದಲ್ಲಿ ಆದ ಬದಲಾವಣೆಗಳು ದೊಡ್ಡಾಟದಲ್ಲಿ ಆಗಲ್ಲಿಲ್ಲ ಎಂದು ಧ್ವನಿ ಎತ್ತಿದವರು ಇವರ ಕಲೆ ಬಗ್ಗೆ ಸಂಶೋಧನೆಗಳು ನಡೆಯಬೇಕು, ಅವರ ಕಲೆ ಮುಂದು ವರೆಯಬೇಕು, 18 ಕಲಾವಿದರ ಶಿಲ್ಪ ಕಲೆಗಳನ್ನು ತಯಾರಿಸುತ್ತಿದ್ದರೆ ಅವರಿಗೆ ಹಾಗೂ ಸೊಲಬಕ್ಕನವರ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದರು. 

ಭಾರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಮಾತನಾಡಿ ಹಲವಾರು ಮಹನೀಯರ ಜೊತೆ ಸೊಲಬಕ್ಕನವರ ಅವರ ಹೆಸರು ಅಚ್ಚಳಿಯದೆ ಉಳಿದಿದೆ, ಅವರ ಛಲ ಸಾಧನೆಯನ್ನು ಹತ್ತಿರದಿಂದ ಕಂಡಿದ್ದೆವೆ, ಅವರ ಛಲ ಶ್ರಮ ಸಾಧನೆ ಅವರ ಕುಟುಂಬಕ್ಕೂ ಬಂದಿದೆ, ಅವರು ಕನಸ್ಸು ಕಂಡು ಛಲದಿಂದ ಸಾಧಿಸಿದವರು, ಅಂತರಾಷ್ಟ್ರೀಯ ಮಟ್ಟದಲ್ಲಿ ಕೊಡುಗೆ ನೀಡಿದ್ದಾರೆ, ಅವರ ಕಲಾ ಸೇವೆಗೆ ಗೌರವ ಸಿಗಬೇಕಾದರೆ ಕಜಾವಿವಿಗೆ ಅವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಸಿ ಎಂ ಬೊಮ್ಮಾಯಿಯವರಲ್ಲಿ ಆಗ್ರಹ ವ್ಯಕ್ತಪಡಿಸುವದಾಗಿ ತಿಳಿಸಿದರು. 

ಕಲಬುರ್ಗಿಯ ದಿ ಐಡಲ್ ಫೈನ್ ಆರ್ಟ್‌ ಸೋಸೈಟಿಯ ಸೆಕ್ರೆಟರಿ ವಿ.ಜಿ. ಅಂದಾನಿ ಕಾರ್ಯಕ್ರಮವನ್ನು ಉದ್ಘಾಟಿಸಿದರು, ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಸಾನಿಧ್ಯ ವಹಿಸಿಕೊಂಡಿದ್ದರು, ಬಿಜೆಪಿ ತಾಲೂಕ ತಾಲೂಕ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಸಾಹಿತಿ ಸತೀಶ ಕುಲಕರ್ಣಿ, ಸಿ.ಬಿ. ಯಲಿಗಾರ ಸೇವಾ ಸಂಸ್ಥೆ ಅಧ್ಯಕ್ಷ ಶಶಿಧರ ಯಲಿಗಾರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕೊಟ್ರೇಶ ಮಾಸ್ತರ ಬೆಳಗಲಿ, ಫಕ್ಕಿರೇಶ ಕೊಂಡಾಯಿ, ಲೇಖಕ ಬಸವರಾಜಯ್ಯ, ಕಲಾವಿದ ಮಹಾಲಿಂಗಪ್ಪ, ಶಿಕ್ಷಕ ಜಗದೀಶ ಚೌವಟಗಿ, ಜಗನ್ನಾಥ ಗೇಣನ್ನವರ, ಗೂಳಪ್ಪ ಅರಳಿಕಟ್ಟಿ ಮಾತನಾಡಿದರು. 

ಕಾರ್ಯಕ್ರಮದಲ್ಲಿ ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀಶೈಲ ಹುದ್ದಾರ, ಜಯದೇವ ಅಗಡಿ, ಹಾಗೂ ಫಕ್ಕಿರೇಶ ಶೆಟ್ಟಿ, ಅಡವಯ್ಯಸ್ವಾಮಿ ಹಿರೇಮಠ ಅವರನ್ನು ಸನ್ಮಾನಿಸಲಾಯಿತು. ಹುಲಸೋಗಿ ಕಲಾವಿದರಿಂದ ವೀರ ಅಭಿಮನ್ಯು ದೊಡ್ಡಾಟ ಪ್ರದರ್ಶನವಾಯಿತು. 

ಈ ಸಂದರ್ಭದಲ್ಲಿ ಶಿಲ್ಪ ಕಲಾ ಕುಟೀರದ ಮುಖ್ಯಸ್ಥ ರಾಜಹರ್ಷ ಸೊಲಬಕ್ಕನವರ, ವೇದಾರಾಣಿ ಸೊಲಬಕ್ಕನವರ, ಶಿಲ್ಪ ಕಲಾವಿದ ಹರೀಶ ಮಾಳಪ್ಪನವರ, ತಿಪ್ಪಣ್ಣ ಸಾತಣ್ಣವರ, ರಮೇಶ ಸಾತಣ್ಣವರ, ಸಾವಿತ್ರಮ್ಮ ತಿ. ಸೊಲಬಕ್ಕನವರ ಸೇರಿಂದತೆ ಕಲಾವಿದರು ಸೊಲಬಕ್ಕನವರ ಕುಟುಂಬಸ್ಥರು, ಗ್ರಾಮಸ್ಥರು ಉಪಸ್ಥಿತರಿದ್ದರು. ಬಸವರಾಜ ಶಿಗ್ಗಾಂವ ತಂಡದವರು ಪ್ರಾರ್ಥಿಸಿದರು. ಶರೀಫ ಮಾಕಪ್ಪನವರ ಹಾಗೂ ಅಲ್ತಾಫ್ ಯತ್ನಳ್ಳಿ ನಿರೂಪಿಸಿದರು. 


ಸುದ್ದಿ ಓದಿ