ಮಹಲಿಂಗಪುರ

ಕಲೆ, ಕುಸ್ತಿ ವಿಶೇಷ ಕಾರ್ಯಕ್ರಮಗಳು ಯುವಪೀಳಿಗೆಗೆ ಪ್ರೇರಣೆ : ಯಲ್ಲನಗೌಡ ಪಾಟೀಲ

ಕಲೆ, ಕುಸ್ತಿ ವಿಶೇಷ ಕಾರ್ಯಕ್ರಮಗಳು ಯುವಪೀಳಿಗೆಗೆ ಪ್ರೇರಣೆ : ಯಲ್ಲನಗೌಡ ಪಾಟೀಲ

ಜಾತ್ರೋತ್ಸವದ ವಿಶೇಷ ಕಾರ್ಯಕ್ರಮಗಳು

ಮಹಾಲಿಂಗಪುರ 17: ಮಹಾಲಿಂಗೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಸೆ.17 ರಿಂದ ಮಹಾಲಿಂಗೇಶ್ವರ ಜಾತ್ರೋತ್ಸವ ಆರಂಭವಾಗಿದ್ದು 18 ರಂದು ಮತ್ತ 19 ರಂದು ಮರು ರಥೋತ್ಸವದ ನಂತರ 20 ರ ಶುಕ್ರವಾರ ಪ್ರತಿ ವರ್ಷದಂತೆ ಈ ವರ್ಷವೂ ರಾಷ್ಟ್ರಮಟ್ಟದ ಜಂಗಿ ನಿಕಾಲಿ ಕುಸ್ತಿಗಳು ಹಾಗೂ 21 ಮತ್ತು 22 ರಂದು ಎರಡು ದಿನಗಳು ಝೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಮತ್ತು ಗಾಯಕರು ಮತ್ತು ಉತ್ತರ ಕರ್ನಾಟಕದ ಕಲಾವಿದರಿಂದ ಹಾಸ್ಯ ಸಂಜೆ ಮತ್ತು ಸಂಗೀತ ರಸಮಂಜರಿ ಕಾರ್ಯಕ್ರಮ ಜರುಗಲಿದೆ ಎಂದು ಜಾತ್ರಾ ಕಮಿಟಿ ಅಧ್ಯಕ್ಷ ರವಿಗೌಡ ಪಾಟೀಲ ಹೇಳಿದರು. 

ಸೋಮವಾರ ಬೆಳಿಗ್ಗೆ ಭಿತ್ತಿ ಪತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು, ಅವರಾದಿ ಪೆಟ್ರೋಲ್ ಬಂಕ್ ಹಿಂದುಗಡೆಯ ಗಾಂಧಿ ಮೈದಾನದಲ್ಲಿ 20 ರಂದು ಮಧ್ಯಾಹ್ನ 1 ರಿಂದ ಜರುಗಲಿರುವ ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿಯಲ್ಲಿ ಮಹಾನ್ ಭಾರತ ಕೇಸರಿ ಜ್ಞಾನೇಶ್ವರ ಪೈ.ಜಮದಾಡೆ, ಮಧ್ಯಪ್ರದೇಶ ಕೇಸರಿ ದೀಪಕ್ ಕುಮಾರ ಪೈ.ಹರಿಯಾಣ, ದೇವತಾಪಾ ನೇಪಾಳ, ಅಮಿತಕುಮಾರ ಮಧ್ಯಪ್ರದೇಶ, ಕರ್ನಾಟಕ ಕೇಸರಿ ದಾವಣಗೆರೆಯ ಕಾರ್ತಿಕ ಕಾಟೆ, ಪಂಜಾಬನ ಜೋಗಿಂದರ್ ಪಂಜಾಬ, ನಾಗರಾಜ ಬಸಿಡೋಣಿ, ಲಸುನ್ ಬಾಗವತ್, ಶಿವಾನಂದ ನಿರ್ವಾನಟ್ಟಿ, ಆದಿತ್ಯ ಪಾಟೀಲ, ಮುಂತಾದ ರಾಷ್ಟ್ರ ಮಟ್ಟದ ಕುಸ್ತಿ ಪಟುಗಳು ಭಾಗವಹಿಸುವರು. 

ಮಹಾಲಿಂಗೇಶ್ವರ ದೇವಸ್ಥಾನದ ಗೋಶಾಲೆ ಹತ್ತಿರ 21 ರಂದು ಸಂಜೆ 6 ರಿಂದ ಜರುಗುವ ಹಾಸ್ಯ ಸಂಜೆ ಮತ್ತು ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಕೆಜಿಎಫ್ ಖ್ಯಾತಿಯ ಚಲನಚಿತ್ರ ನಟ ಗೋವಿಂದೇಗೌಡ (ಜೀಜೀ), ಕಾಮಿಡಿ ಕಿಲಾಡಿ ಖ್ಯಾತಿಯ ಸಂಜು ಬಸಯ್ಯ, ಪಲ್ಲವಿ ಬಳ್ಳಾರಿ, ದಿವ್ಯಶ್ರೀ, ವಾಣಿಶ್ರೀ, ದಾನಪ್ಪ ಮೂಡಲಗಿ, ಗಾಯಕರಾದ ಪೂಜಾ ವಿಭೂತಿಮಠ, ಬೃಂಗೇಶ, ಡ್ಯಾನ್ಸರ್ ಪ್ರಿಯಾಂಕಾ ಸೊಲಾಪುರ, ಮೇಘಾ ಹುಬ್ಬಳ್ಳಿ ಭಾಗವಹಿಸುವರು 

22 ರಂದು ಉತ್ತರ ಕರ್ನಾಟಕದ ಮನು, ತನುಶ್ರೀ ಹುಬ್ಬಳ್ಳಿ, ಲಪಂಘ ರಾಜಾ,ಗಣೇಶ ಶಿರೋಳ,ಮಲ್ಲು ಗೋಕಾಕ, ಸ್ಟೇಫಿ ಹುಬ್ಭಳ್ಳಿ, ಶಿವು ಮುರಗೋಡ, ಪರಸು ಕೋಲೂರ, ರವಿ ಕೋರೆ, ತೃಪ್ತಿ ಎನ್‌.ಕೆ., ಭಾಗವಹಿಸುವರೆಂದು ತಿಳಿಸಿದರು. 

1. ಜಾತ್ರೆ ಪ್ರಯುಕ್ತ ನಮ್ಮ ನಾಡಿನ ಸಂಸ್ಕೃತಿಯ ಪ್ರತಿಬಿಂಬಗಳಾದ ಕುಸ್ತಿ ಪಂದ್ಯಾವಳಿಗಳು ಮತ್ತು ಸಂಗೀತ, ಹಾಸ್ಯ ಕಾರ್ಯಕ್ರಮಗಳು ಜರುಗುತ್ತಿರುವುದು ಇಂದಿನ ಪೀಳಿಗೆಗೆ ಪ್ರೋತ್ಸಾಹ ಮತ್ತು ಪ್ರೇರಣೆ : ಯಲ್ಲನಗೌಡ ಪಾಟೀಲ, ಪುರಸಭೆ ಅಧ್ಯಕ್ಷರು, ಮಹಾಲಿಂಗಪುರ 

2. ಮಹಾಲಿಂಗಪುರ ಕಲಾವಿದರ ತವರೂರು,ಆಧ್ಯಾತ್ಮದ ನೆಲೆವೀಡು. ಇಂತಹ ಪುಣ್ಯಕ್ಷೇತ್ರದಲ್ಲಿ ಕಲಾ ಪ್ರದರ್ಶನದ ಅವಕಾಶ ನಮ್ಮ ಸೌಭಾಗ್ಯ : ಗೋವಿಂದೇಗೌಡ (ಜೀಜೀ) ಚಿತ್ರನಟ 


ಸುದ್ದಿ ಓದಿ