ಶಿಗ್ಗಾವ್

ಕಲೆ- ಕಲಾವಿದರ ದಾಖಲೀಕರಣ ಅಗತ್ಯ: ಪ್ರೊ. ಸಾಲಿ

ಕಲೆ- ಕಲಾವಿದರ ದಾಖಲೀಕರಣ ಅಗತ್ಯ: ಪ್ರೊ. ಸಾಲಿ

ಲೋಕದರ್ಶನ ವರದಿ

ಶಿಗ್ಗಾವಿ 25: ಜಗತ್ತಿನಲ್ಲಿ ಕಲಾವಿದರಿಗೆ ಹಾಗೂ ಜನಪದ ಕಲಾವಿದರಿಗೆ ಒಳ್ಳೆಯ ಗೌರವವಿದೆ ದೇಶದ ನಿಜವಾದ ಸಂಪತ್ತು ಅದು ಜನಪದ ಕಲಾವಿದರು ಎಂದು ಕರ್ನಾಟಕ ಜಾನಪದ ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ.ಎನ್.ಎಮ್.ಸಾಲಿ ಹೇಳಿದರು. 

ತಾಲೂಕಿನ ಗಾನಯೋಗಿ ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಕಲಾ ಸಂಸ್ಥೆಯಲ್ಲಿ ಕರ್ನಾಟಕ ಬಯಲಾಟ ಅಕಾಡಮಿ ಹಾಗೂ ರಂಗತೋರಣ ಕಲಾ ಸಂಸ್ಥೆಯ ಸಹಯೋಗದಲ್ಲಿ ಗುರು ಶಿಷ್ಯ ಪರಂಪರೆ ನಡೆದ ದೊಡ್ಡಾಟ ಶಿಭಿರದ ಸಮಾರೋಪ ಸಮಾರಂಭ ಹಾಗೂ ಪ್ರದರ್ಶನ ಕಾರ್ಯವನ್ನು ಉದ್ಘಾಟಿಸಿ ಮಾತನಾಡಿದ ಅವರು ಕಲಾವಿದರ ಜೊತೆಗೆ ಒಂದು ಉತ್ತಮ ಬಾಂಧವ್ಯ ಹೊಂದಿದ್ದೆ ಇವತ್ತು ಕಲಾವಿದರಿಗೆ ಸಕರ್ಾರಗಳು ಹಾಗೂ ಸಂಘ ಸಂಸ್ಥೆಗಳಿಂದ ಇನ್ನಷ್ಟು ಪ್ರೋತ್ಸಾಹ ಅಗತ್ಯವಾಗಿದೆ ಆ ನಿಟ್ಟಿನಲ್ಲಿ ನಾನು ಕೂಡಾ ಸದಾ ಕಲಾವಿದರ ಕಷ್ಟ ಸುಖಗಳಲ್ಲಿ ಭಾಗವಹಿಸುತ್ತೇನೆ ಎಂದರು. 

 ರಾಜ್ಯೋತ್ಸವ ಪ್ರಶಸ್ತಿ ಪುರಸ್ರ್ಕತ ಶಿವಾನಂದ ಮ್ಯಾಗೇರಿ ಮಾತನಾಡಿ ಬಯಲಾಟ ದೊಡ್ಡಾಟ ಕ್ಷೇತ್ರಕ್ಕೆ ಶಿಗ್ಗಾಂವ ತಾಲೂಕಿನ ಕಲಾವಿದರನ್ನು ಕರ್ನಾಟಕ ಸರ್ಕಾರ ಗುರುತಿಸಿ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿದೆ. ಇಲ್ಲಿಯ ಜನಪದ ಶ್ರೀಮಂತಿಕೆಯನ್ನು ಕಂಡು ಮುಖ್ಯಮಂತ್ರಿಗಳು ತಾಲೂಕಿನಲ್ಲಿ ಜಗತ್ತಿನಲ್ಲಿಯೆ ಮೊಟ್ಟ ಮೊದಲ ವಿಶ್ವವಿದ್ಯಾಲಯ ಎನ್ನುವ ಹೆಗ್ಗಳಿಕೆಗೆ ಪಾತ್ರವಾದ ಜಾನಪದ ವಿವಿಯನ್ನು ಸ್ಥಾಪಿಸಲು ಮೂಲ ಕಾರಣೀಕರ್ತರಾಗಿದ್ದಾರೆ ಎಂದರು. 

ಈ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ರ್ಕತ ಪಕ್ಕಿರೇಶ ಕೊಂಡಾಯಿ, ಅಧ್ಯಕ್ಷತೆವಹಿಸಿ ಕನರ್ಾಟಕ ಬಯಲಾಟ ಅಕಾಡಮಿಯ ಅಧ್ಯಕ್ಷ ಅಜೀತ ಬಸಾಪೂರ, ಬಯಲಾಟ ಅಕಾಡಮಿ ಸದಸ್ಯ ಸಂಚಾಲಕ ಡಾ.ಕೆ.ರುದ್ರಪ್ಪ , ಕನರ್ಾಟಕ ಜಾನಪದ ಅಕಾಡಮಿ ಸದಸ್ಯ ಬಸವರಾಜ ಗೊಬ್ಬಿ ಮಾತನಾಡಿದರು. ದಿವ್ಯಸಾನಿದ್ಯ ವಹಿಸಿದ್ದ ವಿರಕ್ತಮಠದ ಸಂಗನಬಸವ ಶ್ರೀಗಳು ಆಶೀರ್ವಚನ ನೀಡಿದರು. ನಂತರ ದೊಡ್ಡಾಟದ ಕಥೆಗಾರರಾದ ಬಸವರಾಜ ಶಿಗ್ಗಾವಿ ಅವರ ಮಾರ್ಗದರ್ಶನದಲ್ಲಿ ವಾಲಿ ಸುಗ್ರೀವರ ಕಾಳಗ ಎನ್ನುವ ದೊಡ್ಡಾಟ ಪ್ರದರ್ಶನ ನಡೆಯಿತು.

 ಕಾರ್ಯಕ್ರಮದಲ್ಲಿ  ಕೊಟ್ರೆಶ ಮಾಸ್ತರ ಬೆಳಗಲಿ, ಡಾ.ಲತಾ.ಜಿ.ನಿಡಗುಂದಿ,  ಎಸ್.ಎನ್.ಮುಗಳಿ, ಶಂಕರ ಅರ್ಕಸಾಲಿ ಕಲಾವಿದರಾದ ಮಾನಪ್ಪ ಬಡಿಗೇರ, ಶಿದ್ಲಿಂಗಪ್ಪ ನೆರೆಗಲ್, ಚಂದ್ರಶೇಖರಯ್ಯ ಗುರಯ್ಯನವರ, ಚಂದ್ರಶೇಖರ ಕಮಡೊಳ್ಳಿ, ಅಶೋಕ ಕುರಬರ, ವಲಮಪ್ಪ ಸೋರಟೂರ ಪಂಡಿತ ಪುಟ್ಟರಾಜ ಗವಿಯಿಗಳ ಕಲಾ ಸಂಸ್ಥೆಯ ನಿರ್ದೇಶಕರು, ಕಲಾವಿದರು ನಾಗರಿಕರು ಭಾಗವಹಿಸಿದ್ದರು. ಶಿಕ್ಷಕ ಎಸ್.ಕೆ.ಹೂಗಾರ ಸ್ವಾಗತಿಸಿದರು, ಸಹಾಯಕ ಪ್ರಾಧ್ಯಾಪಕ ಶರೀಫ ಮಾಕಪ್ಪನವರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು 

ಸುದ್ದಿ ಓದಿ