ಜನಸ್ಪಂದನ ಕಾರ್ಯಕ್ರಮ ಅಧಿಕಾರಿಗಳ ಆಗಮನ : ಸಂಜೀವ ಕುಮಾರ ನೀರಲಗಿ
ಶಿಗ್ಗಾವಿ 04: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮಹತ್ವಾಕಾಂಕ್ಷಿ ಯೋಜನೆ ಜನಸ್ಪಂದನಾ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ವಿವಿಧ ತಾಲೂಕಿನ ಶಾಸಕರು, ಜಿಲ್ಲಾಧಿಕಾರಿ, ಪೋಲಿಸ ವರಿಷ್ಠಾಧಿಕಾರಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ತಾಲೂಕ ಮಟ್ಟದ ಅಧಿಕಾರಿಗಳು ಆಗಮಿಸುತ್ತಾರೆ ಎಂದು ಜಿಲ್ಲಾದ್ಯಕ್ಷ ಸಂಜೀವ ಕುಮಾರ ನೀರಲಗಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೆೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಶನಿವಾರ ಬೆಳಿಗ್ಗೆ 10 ಗಂಟೆಗೆ ಸಂತೆ ಮೈದಾನದಲ್ಲಿ ಜನಸ್ಪಂದನಾ ಕಾರ್ಯಕ್ರಮವಿದ್ದು ಅಲ್ಪಸಂಖ್ಯಾತರ ಅಭಿವೃದ್ಧಿಗೋಸ್ಕರ 5 ಕೋಟಿ ಅನುಧಾನ, ವಿಕಲ ಚೇತನರಿಗೆ ಬೈಸಿಕಲ್ ವಿತರಣೆ ಹಾಗೂ ಪಟ್ಟಣದ ಹಾಗೂ ಗ್ರಾಮಗಳ ಮತ್ತುರೈತಾಪಿ ಸಮಸ್ಯೆಗಳಿದ್ದಲ್ಲಿ ಕೌಂಟರ ಮೂಲಕ ಅರ್ಜಿಗಳನ್ನು ಸಲ್ಲಿಸುವವುದರ ಮೂಲಕ ಸಮಸ್ಯೆಗಳಿಗೆ ತ್ವರಿತ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ತಿಳಿಸಿದರು.
ಯುವ ಮುಖಂಡ ಯಾಶೀರಖಾನ ಪಠಾಣ ಮಾತನಾಡಿ ಮಾಜಿ ಮುಖ್ಯ ಮಂತ್ರಿ ಕ್ಷೇತ್ರವಾಗಿರುವ ಕಾರಣ ಅಭಿವೃದ್ಧಿ ಹೊಂದಿದ ಕ್ಷೇತ್ರ ಎಂದು ತಿಳಿದಿದ್ದರೂ ಆದರೆ ಈ ಕ್ಷೇತ್ರದಲ್ಲಿ ಅನೇಕ ಜಲ್ವಂತ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಬೇಕಾದ ಸಂದರ್ಭ ಬಂದೋಂದಗಿದೆ ಎಂದರು.
ಗಡಿ ಪ್ರಾಧೀಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿ ಬೆಳೆವಿಮೆ ತುಂಬಿರುವ ರೈತಾಪಿ ವರ್ಗಕ್ಕೆ ವಿಮೆ ಪಾವತಿಯಾಗಿಲ್ಲ ರಸ್ತೆಗಳು ಅವೈಜ್ಞಾನಿಕವಾಗಿ ಇರುವ ಕಾರಣ ಅನೇಕ ಸಾವು ನೋವುಗಳು ಸಂಭಂವಿಸಿದ್ದಾವೆ ಅಲ್ಲದೇ ನಿಜವಾದ ಫಲಾನು ಭಾವಿಗಳಿಗೆ ಯೋಜನೆ ಸದುಪಯೋಗ ಪಡೆದುಕೊಳ್ಳಲು ಆಗುತ್ತಿಲ್ಲಎಂದರು.
ಜನಸ್ಪಂದನೆ ಕಾರ್ಯಕ್ರಮದಲ್ಲಿ ಪ್ರತ್ಯೇಕ ಕೌಂಟರಗಳನ್ನು ಮಾಡಲಾಗುತ್ತದೆ ಅದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಬ್ಲಾಕ್ಅಧ್ಯಕ್ಷರಾದ ಬಿ.ಸಿ.ಪಾಟೀಲ, ಎಂ.ಜೆ.ಮುಲ್ಲಾ, ರಾಜುಕುನ್ನೂರ, ಪ್ರೇಮಾ ಪಾಟೀಲ, ಎಸ್.ಎಫ್.ಮಣಕಟ್ಟಿ, ಶಂಬು ಆಜೂರ, ಗುಡ್ಡಪ್ಪ ಜಲದಿ, ಮಹಾಂತೇಶ ಸಾಲಿ, ಅಬ್ದುಲ್ ಕರೀಂ ಮೊಗಲಲ್ಲಿ, ಸುಧೀರ ಲಮಾಣಿ, ಬಸವರಾಜರಾಗಿ, ಯಲ್ಲಪ್ಪ ನರಗುಂದ, ಯುಸುಫಸಾಬ ಭಾವೀಕಟ್ಟಿ ಸೇರಿದಂತೆ ವಿವಿಧ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.