ಅಂಜಲಿ ಅಂಬಿಗೇರ ಹಂತಕನನ್ನು ಬಂಧಿಸಿ ಶಿಕ್ಷೆಗೊಳಪಡಿಸಿ
ಸಿಂದಗಿ 18; ಅಂಜಲಿ ಅಂಬಿಗೇರ ಅವರ ಹತ್ಯೆಯಾಗಿ ಎರಡು ದಿನಗಳಾದರೂ ಹಂತಕನನ್ನು ಬಂಧಿಸಲು ವಿಫಲರಾಗಿರುವದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟು ಹೋಗಿರುವದನ್ನು ಎತ್ತಿ ತೋರಿಸುತ್ತಿದೆ ಮತ್ತೆ ಪದೆ ಪದೇ ಇಂತಹ ಪ್ರಕರಣಗಳು ದಾಖಲಾಗುತ್ತಿದ್ದು ರಾಜ್ಯ ಸರಕಾರ ಕಠಿಣವಾದ ಕ್ರಮ ತೆಗೆದುಕೊಳ್ಳದೆ ಇರುವದು ಖಂಡನೀಯ.
ಅಂಜಲಿ ಅಂಬಿಗೇರ ಅವರ ಕುಟುಂಬದ ಆಸರೆಯಾಗಿದ್ದರು. ಅವರ ಹತ್ಯೆಯಿಂದ ಅವರ ಕುಟುಂಬ ಬೀದಿಪಾಲಾಗಿದ್ದು ಈ ಕೂಡಲೇ ರಾಜ್ಯ ಸರಕಾರ ಅವರ ಕುಟುಂಬಕ್ಕೆ ಸೂಕ್ತವಾದ ಪರಿಹಾರವನ್ನೊದಗಿಸಿ ಹಂತಕನನ್ನು ಬಂಧಿಸಿ ಶಿಕ್ಷೆಗೊಳಪಡಿಸಬೇಕೆಂದು ಬಿಜೆಪಿ ಮುಖಂಡ ಡಾ.ಗೌತಮ್.ಆರ್.ಚೌಧರಿ ಆಗ್ರಹಿಸಿದ್ದಾರೆ.