ಛತ್ರಪತಿ ಶಿವಾಜಿ ಮಹಾರಾಜ್ ಸೇರಿ ಹಿಂದೂ ದೇವತೆಗಳ ಭಾವಚಿತ್ರಕ್ಕೆ ಅವಮಾನ ಮಾಡಿದ್ದ ಆರೋಪಿಯನ್ನು ಕೊನೆಗೂ ಬಂಧಿಸಿದ ಬೆಳಗಾವಿ ಪೊಲೀಸರು
ಬೆಳಗಾವಿ : ಶ್ರೀ ಛತ್ರಪತಿ ಶಿವಾಜಿ ಮಹಾರಾಜರು ಹಾಗೂ ಶ್ರೀ ರಾಮಚಂದ್ರ, ಲಕ್ಷö್ಮಣ, ಸೀತೆ, ಶ್ರೀ ಹನುಮಾನ ದೇವತೆಗಳ ಪೋಟೊಗಳನ್ನು ಬಳಸಿ ಎಲೆಕ್ಟ್ರಾನಿಕ್ ಉಪಕರಣಗಳಿಂದ ಅಶ್ಲೀಲವಾಗಿ ಮಾರ್ಪಡಿಸಿ ಹಿಂದೂ ದೇವತೆಗಳಿಗೆ ಅವಮಾನ ನಾಡುವ ಮೂಲಕ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ಆರೋಪಿತನನ್ನು ಬೆಳಗಾವಿ ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಪ್ರಕರಣದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಚೌರಡ್ಡಿ ಪಾಳ್ಯದ ಇಮ್ರಾನ್ ಪಾಷಾ ಆಮಿರ್ ಜಾನ್ (19), ಬಂಧಿತ ಆರೋಪಿಯಾಗಿದ್ದಾನೆ. ಈತ ಕಳೆದ ಕೆಲವು ದಿನಗಳ ಹಿಂದೆ ಛತ್ರಪತಿ ಶಿವಾಜಿ ಮಹಾರಾಜರ್ ಹಾಗೂ ಕೆಲವು ಹಿಂದೂ ದೇವತೆಗಳ ಭಾವಚಿತ್ರ ಬಳಸಿ ಅಶ್ಲೀಲವಾಗಿ ಸೃಷ್ಠಿ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಆ ಭಾವಚಿತ್ರಗಳನ್ನು ಹರಿಬಿಡುವ ಮೂಲಕ ಹಿಂದೂ ದೇವತೆಗಳ ಆರಾಧಕರಿಗೆ ಮತ್ತು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವು ಉಂಟಾಗುವಂತೆ ಛತ್ರಪತಿ ಶಿವಾಜಿ ಮಹಾರಾಜರು ಸೇರಿ ಹಿಂದು ದೇವತೆಗಳ ಭಾವಚಿತ್ರಗಳಿಗೆ ಅಶ್ಲೀಲ ಪೊಟೊಗಳನ್ನು ಜೊಡಿಸಿ ಅವಮಾನ ಮಾಡಿದ್ದನು.
ಈ ಬಗ್ಗೆ ಬೆಳಗಾವಿಯ ಶಹಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹಿರಿಯ ಅಧಿಕಾರಿಗಳ ಮಾರ್ಗದರ್ಶನದ ಮೇಲೆ ಪೊಲೀಸ್ ಇನ್ಸ್ಪೆಕ್ಟರ್ ಶಹಾಪುರ ಹಾಗೂ ಪೊಲೀಸ್ ಇನ್ಸ್ಪೆಕ್ಟರ್ ಸಿಇಎನ್ ಹಾಗೂ ತಂಡದವರು ವೈಜ್ಞಾನಿಕ ರೀತಿಯಿಂದ ತನಿಖೆಯನ್ನು ಕೈಗೊಂಡು ಆರೋಪಿಯನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಂಡಿದ್ದಾರೆ.